ಕೈಕಂಬ ಜಂಕ್ಷನ್‌: ಇಲ್ಲಿ ರಸ್ತೆ ದಾಟುವುದೇ ಅಪಾಯ!

Team Udayavani, Nov 21, 2018, 11:37 AM IST

21-november-5.gif

ಸುಬ್ರಹ್ಮಣ್ಯ: ಕಡಬ-ಗುಂಡ್ಯ ಭಾಗದಿಂದ ಸುಬ್ರಹ್ಮಣ್ಯ ಕಡೆ ತೆರಳುವ ರಾಜ್ಯ ಹೆದ್ದಾರಿಯ ಕೈಕಂಬ ಜಂಕ್ಷನ್‌ನಲ್ಲಿ ಪೇಟೆ ಸಿಗುತ್ತದೆ. ಇಲ್ಲಿ ವಾಹನ ದಟ್ಟಣೆ ಜಾಸ್ತಿಯಾಗುತ್ತಿದೆ. ರಸ್ತೆಯಲ್ಲಿ ಪಾದಚಾರಿಗಳು ಆಗಾಗ ಅಪಾಯಕ್ಕೆ ಸಿಲುಕುತ್ತಾರೆ. ಇದು ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ. ಗುಂಡ್ಯದಿಂದ ಮತ್ತು ಕಡಬದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ವೇಳೆ ಸುಬ್ರಹ್ಮಣ್ಯ ನಗರ ತಲುಪುವ ಮುನ್ನ 6 ಕಿ.ಮೀ. ಅಂತರದಲ್ಲಿ ಕೈಕಂಬ ಸಿಗುತ್ತದೆ. ಈ ಜಂಕ್ಷನ್‌ ನಲ್ಲಿ ಮೂರು ರಸ್ತೆಗಳು ಕವಲೊಡೆಯುತ್ತವೆ. ಕಡಬ-ಗುಂಡ್ಯ-ಸುಬ್ರಹ್ಮಣ್ಯ ಹಾಗೂ ಮಡಿಕೇರಿ-ಮೈಸೂರು, ಮಂಗಳೂರು, ಧರ್ಮಸ್ಥಳ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಬಸ್‌ ಹತ್ತಲು ಈ ಸ್ಥಳ ಕೇಂದ್ರ ಬಿಂದುವಾಗಿದೆ.

ದೂರದ ಊರುಗಳಿಗೆ ತೆರಳುವ ಸಾರ್ವಜನಿಕರು ಇಲ್ಲಿ ವಾಹನ ಕಾಯುತ್ತಿರುತ್ತಾರೆ. ಕಡಬ ಭಾಗಕ್ಕೆ ತೆರಳುವಲ್ಲಿ ಒಂದು ಬಸ್‌ ತಂಗುದಾಣವಿದೆ. ಅದು ಕಡಬ ಭಾಗಕ್ಕೆ ತೆರಳುವವರಿಗೆ ಮಾತ್ರ ಅನುಕೂಲಕ್ಕೆ ಬರುತ್ತದೆ. ಅದರ ಇನ್ನೊಂದು ಪಾರ್ಶ್ವ ಗುಂಡ್ಯ-ಸುಬ್ರಹ್ಮಣ್ಯ ನೇರ ಸಂಪರ್ಕ ರಸ್ತೆ ಬದಿಯಲ್ಲಿ ಯಾವುದೇ ತಂಗುದಾಣವಿಲ್ಲ. ಹೀಗಾಗಿ ಈ ಭಾಗದವರು ಬಸ್‌ ಹಿಡಿಯಲು ಕಡಬ ರಸ್ತೆಯಲ್ಲಿರುವ ತಂಗುದಾಣಕ್ಕೆ ಮುಖ್ಯ ರಸ್ತೆ ದಾಟಿ ತೆರಳಬೇಕು.

ರಸ್ತೆ ದಾಟುವಾಗ ಅಪಾಯ
ಕಡಬಕ್ಕೆ ತೆರಳುವ ರಸ್ತೆಯಲ್ಲಿ ಇರುವ ತಂಗುದಾಣದಲ್ಲಿ ಸಾರಿಗೆ ಬಸ್‌ಗಳು ನಿಲ್ಲುವುದರಿಂದ ಬಸ್‌ಗಾಗಿ ಮುಖ್ಯ ರಸ್ತೆಯನ್ನು ದಾಟಿ ತೆರಳಬೇಕು. ಇದು ಅಪಾಯಕಾರಿಯಾಗಿದೆ. ವಾಹನ ದಟ್ಟಣೆ ಇರುವ ಈ ರಸ್ತೆಯನ್ನು ಅವಸರವಸರವಾಗಿ ದಾಟುವ ವೇಳೆ ವಾಹನಗಳು ಢಿಕ್ಕಿ ಹೊಡೆದು ಅಪಾಯಗಳು ಸಂಭವಿಸುತ್ತಿವೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ಪರಿಸರದ ಮಕ್ಕಳು ಶಾಲಾ ಕಾಲೇಜಿಗೆ ತೆರಳುವ ಮತ್ತು ಬರುವ ವೇಳೆ ತಂಗುದಾಣದ ಕಡೆಗೆ ರಸ್ತೆ ದಾಟುವಾಗ ಮೈಯೆಲ್ಲ ಕಣ್ಣಾಗಿದ್ದರೂ ಸಾಲದು.

ಕೈಕಂಬ ಜಂಕ್ಷನ್‌ನಲ್ಲಿ ಗುಂಡ್ಯ-ಸುಬ್ರಹ್ಮಣ್ಯ ನೇರ ರಸ್ತೆ ಇರುವ ಪಕ್ಕದಲ್ಲೆ ದ.ಕ.ಜಿ.ಪಂ., ಉ.ಮಾ.ಹಿ. ಪ್ರಾಥಮಿಕ ಶಾಲೆ ಇದೆ. ರಸ್ತೆಗೆ ಹೊಂದಿಕೊಂಡಂತೆ ಶಾಲೆ ಹಾಗೂ ಮೈದಾನವಿದೆ. ಶಾಲೆ ಬಿಟ್ಟಾಗ ಮಕ್ಕಳು ರಸ್ತೆ ಬದಿಯ ಶಾಲಾ ಗೇಟಿನಿಂದ ನೇರ ಹೆದ್ದಾರಿಗೆ ಬರುತ್ತಾರೆ. ಇಲ್ಲಿ ಬಸ್‌ ತಂಗುದಾಣ ಕೂಡ ಇಲ್ಲ. ಮಕ್ಕಳು ಶಾಲೆಗೆ ಬರುವ ಮತ್ತು ಬಿಡುವ ಹೊತ್ತಲ್ಲಿ ಅಪಾಯಕ್ಕೆ ಒಳಗಾಗುತ್ತಾರೆ. ಎಳೆಯ ಮಕ್ಕಳನ್ನು ಶಿಕ್ಷಕರೇ ನಿತ್ಯವೂ ರಸ್ತೆ ದಾಟಿಸಿ ಬಿಡಬೇಕಿದೆ. ಮಕ್ಕಳು ರಸ್ತೆ ದಾಟುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಮಕ್ಕಳನ್ನು ನಿಯಂತ್ರಿಸುವುದು ಕಷ್ಟ. ಮಕ್ಕಳು ರಸ್ತೆ ದಾಟುವಾಗ ಭೀತಿಯಾಗುತ್ತದೆ.

ಪೊಲೀಸ್‌ ಸಿಬಂದಿ ನಿಯೋಜಿಸಿ
ಇಲ್ಲಿ ಪ್ರವಾಸಿಗರ ವಾಹನಗಳು ಅತೀ ವೇಗವಾಗಿ ಸಂಚರಿಸುತ್ತಿವೆ. ಮಳೆ, ಬಿಸಿಲಿಗೆ ರಸ್ತೆ ಬದಿಯಲ್ಲೇ ತಾಸುಗಟ್ಟಲೆ ನಿಂತಿರಬೇಕಿದೆ. ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯಲ್ಲಿ ಬಸ್‌ ತಂಗುದಾಣದ ಆವಶ್ಯಕತೆಯಿದೆ. ಅದಕ್ಕಿಂತ ಮುಂಚಿತ ಜಂಕ್ಷನ್‌ನಲ್ಲಿ ಶಾಲೆಗೆ ಮಕ್ಕಳು ತೆರಳುವ ಎರಡು ಅವಧಿಯಲ್ಲಿ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಬೇಕು ಮತ್ತು ವೇಗ ತಡೆಗೆ ಬ್ಯಾರಿಕೇಡ್‌ ಅಳವಡಿಸಬೇಕಿದೆ. ತಿರುವಿನ ಇಕ್ಕಟ್ಟಾದ ಜಾಗದಲ್ಲಿ ನಡು ರಸ್ತೆಯಲ್ಲೆ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವುದು, ಯಮ ಸ್ವರೂಪಿ ವೇಗದಲ್ಲಿ ಸಂಚರಿಸುವ ವಾಹನಗಳಿಗೆ ತಡೆ ಹಾಕಬೇಕಿದೆ.

ರಸ್ತೆ ದಾಟಲು ಭಯ
ಕೈಕಂಬ ಜಂಕ್ಷನ್‌ನಲ್ಲಿ ಶಾಲೆಯ ಮಕ್ಕಳು ರಸ್ತೆ ದಾಟುವಾಗ ಭಯವಾಗುತ್ತದೆ. ಇಲ್ಲಿ ಈ ಹಿಂದೆ ಅನೇಕ ಭಾರಿ ಅಪಘಾತ ಸಂಭವಿಸಿವೆ. ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಇಲ್ಲಿ ತುರ್ತು ಕ್ರಮದ ಅವಶ್ಯಕತೆ ಇದೆ.
– ದಿನೇಶ ಕೆ. ಕಾಳಪ್ಪಾಡಿ, ಸ್ಥಳೀಯರು

 ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.