ಕಲ್ಲಡ್ಕ-ವಿಟ್ಲ ಮೂರು ಕಿ.ಮೀ. ರಸ್ತೆ ದ್ವಿಪಥ ಭಾಗ್ಯ
Team Udayavani, Aug 11, 2017, 8:50 AM IST
ವಿಟ್ಲ : ಕಲ್ಲಡ್ಕದಿಂದ ವಿಟ್ಲಕ್ಕೆ ಹೋಗುವ ರಸ್ತೆಯ 3 ಕಿ.ಮೀ. ದೂರದ ವೀರಕಂಭವರೆಗಿನ ರಸ್ತೆಗೆ ಅಂತೂ ಭಡ್ತಿ ಭಾಗ್ಯ ದೊರಕಿದೆ. ಇದನ್ನು ದ್ವಿಪಥವನ್ನಾಗಿ ಅಭಿವೃದ್ಧಿ ಗೊಳಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಆ. 29ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಕಾಮಗಾರಿಗೆ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗುವುದು. 2018ರ ಮಾರ್ಚ್
ನೊಳಗೆ ಈ ಕಾಮಗಾರಿ ಪೂರ್ತಿಯಾಗ ಬೇಕಿದೆ.
ಅಂತಾರಾಜ್ಯ ಹೆದ್ದಾರಿ ಕಡೂರು -ಕಲ್ಲಡ್ಕ- ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯಲ್ಲಿ ಕಲ್ಲಡ್ಕದಿಂದ ಸಾರಡ್ಕವರೆಗಿನ ರಸ್ತೆ ಸಮಗ್ರ ಅಭಿವೃದ್ಧಿಯಾಗಿಲ್ಲ. ಮರುಡಾಮರು ಕಾಮಗಾರಿ ನಡೆದು ಹಲವು ವರ್ಷಗಳಾದವು. ಇತ್ತೀಚೆಗೆ ತೇಪೆ ಹಾಕಲಾಗಿತ್ತಾದರೂ, ಪ್ರಸ್ತುತ ರಸ್ತೆಯುದ್ದಕ್ಕೂ ಹೊಂಡಗಳು ಹೆಚ್ಚಾಗಿವೆ. ಅಂತಾರಾಜ್ಯ ಹೆದ್ದಾರಿ ನಿಯಮಾವಳಿ ಜಾರಿಗೆ ತರಲಾಗಿಲ್ಲ.
ಅಗಲ ಕಿರಿದಾದ ವಿಟ್ಲ ಪೇಟೆಯಲ್ಲೇ ಈ ಅಂತಾರಾಜ್ಯ ಹೆದ್ದಾರಿ ಸಾಗುತ್ತದೆ. ಕೆಎಸ್‌ಆರ್‌ಟಿಸಿ ಮತ್ತು ಸಿಸಿ ಬಸ್ಸುಗಳು ಈ ರಸ್ತೆಯಲ್ಲಿ ದಿನನಿತ್ಯವೂ ನೂರಕ್ಕೂ ಅಧಿಕ ಟ್ರಿಪ್ ಹಾಕುತ್ತಿವೆ. ಆದರೆ ವೀರಕಂಭ, ಗೋಳ್ತಮಜಲು ಮೊದಲಾದೆಡೆ ಅಗಲ
ಕಿರಿದಾಗಿ, ಸಂಚಾರಕ್ಕೆ ಅನನುಕೂಲ ವಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಸ್ತಾವ
ಇದೇ ಅಂತಾರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವಂತೆ ಕೋರಿ ಪ್ರÅಸ್ತಾಪ ಸಲ್ಲಿಸ
ಲಾಗಿದೆ. ಕೇರಳದಲ್ಲಿ ಅಂದರೆ ಸಾರಡ್ಕದಿಂದ ಕಾಂಞಂಗಾಡ್ ವರೆಗೆ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯೆಂದೇ ಬಿಂಬಿಸಲಾಗುತ್ತಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯಾಗುವ ಸಂದರ್ಭ ಕರ್ನಾಟಕ ಭಾಗವಾದ ಸಾರಡ್ಕದಿಂದ ಕಲ್ಲಡ್ಕವರೆಗಿನ ರಸ್ತೆಯು ಅದೇ ನಾಮಫಲಕವನ್ನು ಹೊಂದಬೇಕು. ಆದರೆ ಕರ್ನಾಟಕದಲ್ಲಿ ಈ ಬಗ್ಗೆ ಸರ್ವೆ ನಡೆಸುತ್ತಿರುವ ಬಗ್ಗೆ ಮಾತ್ರ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಕಾಮಗಾರಿ ವ್ಯರ್ಥವಲ್ಲ
ಈ ಅಂತಾರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಭಡ್ತಿ ಹೊಂದಿದರೂ ಕಲ್ಲಡ್ಕ-ವೀರಕಂಭ ದ್ವಿಪಥ ಕಾಮಗಾರಿಗೆ ವ್ಯಯ ಮಾಡಿದ 3 ಕೋಟಿ ರೂ. ಅನುದಾನ ವ್ಯರ್ಥವಾಗದು. ಅದು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ
ಯಲ್ಲಿ ಕೊನೆಗೊಳ್ಳುತ್ತದೆ. ರಸ್ತೆಯನ್ನು ವೀರಕಂಭದಿಂದ ಸಾರಡ್ಕದವರೆಗೆ ಮುಂದುವರಿಸಲು ಅನುಕೂಲ ಅಗಲಿದೆ.
ಬಂಡೆ ತೆಗೆದು ರಸ್ತೆ ವಿಸ್ತರಣೆಗೆ 1.5 ಕೋ. ರೂ.
ವೀರಕಂಭ ಮತ್ತು ಕೋಡಪದವು ಜಂಕ್ಷನ್‌ನಿಂದ ವಿಟ್ಲ ಕಡೆಗೆ ಸಾಗುವ ಇಳಿಜಾರು ರಸ್ತೆ ಅಪಾಯಕಾರಿಯಾಗಿದ್ದು,. ಅಗಲ ಕಿರಿದಾಗಿದೆ. ಅನೇಕ ಅಪಘಾತ, ಜೀವಹಾನಿಯೂ ಸಂಭವಿಸಿತ್ತು. ಇಲ್ಲಿ ರಸ್ತೆ ವಿಸ್ತರಣೆಯಾಗಬೇಕು ಎಂಬ
ಆಗ್ರಹ ನಾಗರಿಕರದ್ದಾಗಿತ್ತು. ಅಲ್ಲಿರುವ ಬಂಡೆಕಲ್ಲುಗಳೇ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿತ್ತು. ಅದನ್ನು ಒಡೆದು ರಸ್ತೆ ನಿರ್ಮಿಸುವುದು ಅರಣ್ಯ ಇಲಾಖೆಯ ಸಿರಿಚಂದನವನವೂ ಪಕ್ಕದಲ್ಲೇ ಇದೆ. ಇದೀಗ ಈ ಸಮಸ್ಯೆಯನ್ನು ನಿವಾರಿಸಬೇಕಿದೆ. 1.5 ಕೋ. ರೂ.ಗಳ ಅನುದಾನದಲ್ಲಿ ಬಂಡೆ ಒಡೆದು, 2018ರ ಮಾರ್ಚ್ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.