ಈ ಋತುವಿನ ಕಂಬಳ ವೇಳಾಪಟ್ಟಿ ನಿಗದಿ
ಕಾನೂನು ತೊಡಕಿಲ್ಲದೆ ಮುಂದುವರಿಯುವ ವಿಶ್ವಾಸ
Team Udayavani, Oct 9, 2019, 4:40 AM IST
ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಋತುವಿನ ಕಂಬಳ ಕ್ರೀಡೆಗೆ ತಯಾರಿ ಪ್ರಾರಂಭವಾಗಿದೆ. ಈ ಬಾರಿ ಕಾನೂನಿನ ತೊಡಕು ಎದುರಾಗದೆ ಸುಸೂತ್ರವಾಗಿ ಆಯೋಜನೆಯಾಗುವ ಸಾಧ್ಯತೆಯಿದ್ದು, ಇದು ಕಂಬಳ ಆಯೋಜಕರು ಮತ್ತು ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಅ.6ರಂದು ಮೂಡುಬಿದಿರೆಯಲ್ಲಿ ಜರಗಿದ್ದ ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ಕಂಬಳದ ವೇಳಾಪಟ್ಟಿ ಸಿದ್ಧಗೊಂಡಿದ್ದು, ನ.23ಕ್ಕೆ ಈ ಋತುವಿನ ಮೊದಲ ಕಂಬಳ
ಆರಂಭವಾಗಲಿದೆ. ಒಟ್ಟು 20 ಕಂಬಳಗಳು ನಡೆಯಲಿವೆ. ಒಂದೆರಡರ ದಿನಾಂಕ ಬದಲಾವಣೆ ಆಗುವ ಸಾಧ್ಯತೆಯಿದ್ದು, ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ಮೂಲಗಳು ತಿಳಿಸಿವೆ.
2014ರಿಂದಲೂ ಕಾನೂನು ಸಮರದಡಿಯಲ್ಲೇ ನಡೆಯುತ್ತಾ ಬಂದಿದ್ದ ಕಂಬಳವು 2016-17ನೇ ಸಾಲಿನಲ್ಲಿ ಸ್ಥಗಿತಗೊಂಡಿತ್ತು. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಬೃಹತ್ ಹೋರಾಟ ನಡೆದಿತ್ತು. ಬಳಿಕ ರಾಷ್ಟ್ರಪತಿಯವರ ಅಧ್ಯಾದೇಶ ಮತ್ತು ಮಸೂದೆ ತಿದ್ದುಪಡಿಯ ಮೂಲಕ 2017-18ನೇ ಸಾಲಿನಿಂದ ಕಂಬಳಗಳು ಅಡೆತಡೆ ಇಲ್ಲದೆ ಯಶಸ್ವಿಯಾಗಿ ನಡೆಯುತ್ತಾ ಬಂದಿವೆ.
ಮುಂದುವರಿದ ಕಾನೂನು ಸಮರ
ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿ ಕಾನೂನು ಆಗಿ ಜಾರಿಗೊಂಡಿದ್ದರೂ ಕಂಬಳದ ವಿರುದ್ಧ ಕಾನೂನು ಸಮರ
ಮುಂದುವರಿದಿದೆ. ಇದರಿಂದಾಗಿ ಕಂಬಳ ಕ್ರೀಡೆ ಮೇಲೆ ಇರುವ ಆತಂಕ ಇನ್ನೂ ಪೂರ್ಣವಾಗಿ ನಿವಾರಣೆಯಾಗಿಲ್ಲ.
ಕಂಬಳಕ್ಕೆ ತಡೆ ಕೋರಿ ಪೆಟಾ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಸಂವಿಧಾನ ಪೀಠದಲ್ಲಿ ವಿಚಾರಣೆಗೆ ಬಾಕಿಯಿದೆ. 1960ರ ಪ್ರಾಣಿಹಿಂಸೆ ತಡೆ ಕಾಯ್ದೆ ಪ್ರಾಣಿಗಳಿಗೆ ಅನಾವಶ್ಯಕ ಹಿಂಸೆ, ತೊಂದರೆಯಿಂದ ರಕ್ಷಣೆ ನೀಡುತ್ತಿದ್ದು, ಕರ್ನಾಟಕ ಸರಕಾರದ ಹೊಸ ಕಾಯ್ದೆ ಇದಕ್ಕೆ ವಿರುದ್ಧವಾಗಿದೆ. ಹೊಸ ಕಾಯ್ದೆ ಸಂವಿಧಾನದ ಪರಿಚ್ಛೇದ 51ಎ (ಜಿ)ಯ ಉಲ್ಲಂಘನೆಯಾಗಿದೆ ಎಂದು ಪೆಟಾ ಹೊಸದಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಜತೆ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.
ಪೆಟಾ ಆರೋಪಗಳ ಹಿನ್ನೆಲೆಯಲ್ಲಿ ಬೆತ್ತ ಹಿಡಿಯದೆ ಕೋಣಗಳನ್ನು ಓಡಿಸುವ ಪ್ರಯೋಗವೊಂದು ಹಿಂದಿನ ಋತುವಿನಲ್ಲಿ ಮಾಡಲಾಗಿದೆ. ಮೂಡುಬಿದಿರೆ, ಕಕ್ಯಪದವು ಮತ್ತು ಪೈವಳಿಕೆ ಕಂಬಳಗಳಲ್ಲಿ ಬೆತ್ತ ಬಳಕೆ ಮಾಡಿರಲಿಲ್ಲ.
ಈ ಋತುವಿನ ಕಂಬಳ ವೇಳಾಪಟ್ಟಿಯನ್ನು ಬಹುತೇಕ ಸಿದ್ಧಪಡಿಸಲಾಗಿದ್ದು, ಅಂತಿಮಗೊಳಿಸಿ ಸದ್ಯದಲ್ಲೇ ಪ್ರಕಟಿಸಲಾಗುವುದು. ಕಂಬಳ ಅಡೆತಡೆಯಿಲ್ಲದೆ ಮಂದುವರಿಯಲಿದೆ.
– ಪಿ.ಆರ್. ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.