ಮೂಡಬಿದಿರೆ: ಜಿಲ್ಲಾ ಕಂಬಳ ಸಮಿತಿ ವಿಶೇಷ ಸಭೆ
Team Udayavani, Sep 25, 2018, 10:17 AM IST
ಮೂಡಬಿದಿರೆ: ಕಂಬಳ ಆಯೋಜನೆಯ ಸಂದರ್ಭ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ನ್ಯಾಯಾಲಯದಲ್ಲಿ ಕಂಬಳ ಪರ ವಾದಕ್ಕೆ ಬಲ ಒದಗಿಸಿ ಎಂದು ರಾಜ್ಯ ಹೈಕೋರ್ಟ್‌ನಲ್ಲಿ ಕಂಬಳ ಪರವಾಗಿ ವಾದಿಸುತ್ತಿರುವ ವಕೀಲ ರಾಜಶೇಖರ್ ಹೇಳಿದರು.
ಜಿಲ್ಲಾ ಕಂಬಳ ಸಮಿತಿ ವತಿಯಿಂದ ರವಿವಾರ ಮೂಡಬಿದಿರೆ ಸಮಾಜ ಮಂದಿರದ ಸ್ವರ್ಣಮಂದಿರದಲ್ಲಿ ಸಮಿತಿಯ ಅಧ್ಯಕ್ಷ ಪಿ.ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಕಂಬಳ ಆಯೋಜನೆಗಾಗಿ ವಿಶೇಷ ಕಾನೂನು ಇದೆ. ಆದರೂ “ಪೆಟಾ’ದವರು ಸರಕಾರದ ಸುಗ್ರೀವಾಜ್ಞೆಯನ್ನೇ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಬಳಕ್ಕೆ ಅಡೆತಡೆ ಬಾರದಂತೆ ಅದಕ್ಕೆ ಆಕ್ಷೇಪ ಅರ್ಜಿ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.
“ಪೆಟಾ’ ಕಂಬಳ ಸಮಿತಿ ಬದಲು ರಾಜ್ಯ ಹಾಗೂ ಕೇಂದ್ರ ಸರಕಾರವನ್ನೇ ಪ್ರತಿವಾದಿಗಳನ್ನಾಗಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ಅಡ್ವೊಕೇಟ್ ಜನರಲ್ ಹಾಗೂ ಕೇಂದ್ರದ ಸಾಲಿಸಿಟರ್ ಜನರಲ್ ಕಂಬಳ ಪರ ವಾದಿಸುವಂತೆ ಪ್ರಯತ್ನ ನಡೆಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಕಂಬಳದ ನೀತಿ ನಿಯಮಗಳನ್ನು ಎಲ್ಲ ಸಮಿತಿಗಳು ಪಾಲಿಸಬೇಕು ಎಂದರು.
ಅರ್ಹ ಕೋಣಗಳ ಬಳಕೆ
ಜಿಲ್ಲಾ ಕಂಬಳ ಸಮಿತಿಯ ಗೌರವ ಸಲಹೆಗಾರ ಗುಣಪಾಲ ಕಡಂಬ ಮಾತನಾಡಿ, ಕಂಬಳ ಕರೆಯಲ್ಲಿ ಓಡಲು ಅರ್ಹವಾದ ಕೋಣಗಳನ್ನು ಮಾತ್ರ ಬಳಸಬೇಕು. ವೈಜ್ಞಾನಿಕ ವರದಿಯನ್ನು ತಜ್ಞರ ಮೂಲಕ ರಚಿಸುವಂತೆ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸಲಹೆ ನೀಡಿದರು.
ಕಸ್ಟಮ್ಸ್‌ನ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿದರು. ಮೂಡಬಿದಿರೆ ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಶಾಸಕ ಅಭಯಚಂದ್ರ ಉದ್ಘಾಟಿಸಿದರು.
ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷರಾದ ಭಾಸ್ಕರ ಎಸ್. ಕೋಟ್ಯಾನ್, ಬಾಕೂìರು ಶಾಂತಾರಾಮ ಶೆಟ್ಟಿ, ಡಾ| ಜೀವಂಧರ ಬಲ್ಲಾಳ್, ಪ್ರಮುಖರಾದ ರವೀಂದ್ರ ಪಡಿವಾಳ್, ಸುದರ್ಶನ ನಾಯಕ್ ಪುತ್ತೂರು ಸಲಹೆಗಳನ್ನು ನೀಡಿದರು. ನವರಾತ್ರಿ ವೇಳೆಗೆ ಮತ್ತೆ ಸಭೆ ನಡೆಸಿ ಚರ್ಚಿಸಿ ಕಂಬಳ ವೇಳಾಪಟ್ಟಿಯನ್ನು ಸಿದ್ಧಪಡಿಸಲು ನಿರ್ಧರಿಸಲಾಯಿತು. ಕೋಶಾಧ್ಯಕ್ಷ ಸುರೇಶ್ ಕೆ. ಪೂಜಾರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಡೂ¤ರು ರಾಜೀವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.