ಕಂಬಳ: ಸು.ಕೋ.ನಲ್ಲಿ ಪೆಟಾ ವರದಿ ಸಲ್ಲಿಕೆ
Team Udayavani, Oct 22, 2019, 5:30 AM IST
ಮಂಗಳೂರು: ಪೆಟಾ ಸಂಘಟನೆಯು ಕಳೆದ ಋತುವಿನಲ್ಲಿ ನಡೆದಿರುವ ಕಂಬಳಗಳ ಬಗ್ಗೆ ಮಾಡಿರುವ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವುದಾಗಿ ತಿಳಿಸಿದೆ.
ಪೆಟಾ ಕಳೆದ ವರ್ಷ ಡಿಸೆಂಬರ್ ಮತ್ತು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ನಡೆದ ಬಾರಾಡಿಬೀಡು, ಮೂಡುಬಿದಿರೆ, ಮಂಗಳೂರು ಮತ್ತು ತಿರುವೈಲ್‌ನಲ್ಲಿ ನಡೆದಿರುವ ಕಂಬಳಗಳಲ್ಲಿ ತಪಾಸಣೆ ಮಾಡಿದ್ದು, ಕೋಣಗಳ ಮೇಲಿನ ಹಿಂಸೆ ಮತ್ತು ಕೌರ್ಯವನ್ನು ತಡೆಯಲು ಕರ್ನಾಟಕದ ಕಂಬಳಗಳು ವಿಫಲವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಪೆಟಾ ಇಂಡಿಯಾದಿಂದ ತಪಾಸಣೆ ಮಾಡಲಾದ ಎಲ್ಲ 4 ಕಂಬಳಗಳಲ್ಲಿ ಕಂಬಳ ಓಟದ ಸ್ಪರ್ಧೆಗೆ ಅನುವು ಮಾಡಿಕೊಡುವ ರಾಜ್ಯದ ತಿದ್ದುಪಡಿಗಳು ಕೋಣಗಳನ್ನು ಹಿಂಸೆಯಿಂದ ರಕ್ಷಿಸುವಲ್ಲಿ ಎಷ್ಟು ಅನುಪಯುಕ್ತ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಪೆಟಾ ದಾಖಲು ಮಾಡಿರುವ ದೂರು ಕರ್ನಾಟಕದ ಹೊಸ ಕಾನೂನಿನ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುತ್ತದೆ ಮತ್ತು ಅದನ್ನು ಕಿತ್ತು ಹಾಕಲು ನಿರ್ದೇಶನವನ್ನು ಕೋರುತ್ತದೆ ಎಂದು ಪೆಟಾದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್.ರಾಜಣ್ಣ
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.