ಕಂಬಳ: ಇನ್ನೂ ರಾಷ್ಟ್ರಪತಿ ಅಂಕಿತ ಬಿದ್ದಿಲ್ಲ
Team Udayavani, Apr 2, 2017, 12:48 PM IST
ಮಂಗಳೂರು: ಕಂಬಳ ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ನಿರೀಕ್ಷಿಸುತ್ತಾ ಈ ಬಾರಿಯ ಕಂಬಳ ಸೀಸನ್ ಬಹುತೇಕ ಮುಗಿಯುತ್ತಾ ಬಂದಿದೆ. ಕೊನೆಯ ಅವಧಿಯಲ್ಲಾದರೂ ಕೆಲವು ಕಂಬಳಗಳು ಆಯೋಜನೆಗೊಂಡು ಕೋಣಗಳು ಕರೆಗೆ ಇಳಿಯಬಹುದು ಎಂಬ ಕಂಬಳ ಪ್ರೇಮಿಗಳ ನಿರೀಕ್ಷೆ ಈ ಬಾರಿ ಪೂರ್ಣಗೊಳ್ಳಲೇ ಇಲ್ಲ.
ನೋ ಕಮೆಂಟ್ಸ್ ಗೊಂದಲ
ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಮಸೂದೆ ಫೆಬ್ರವರಿ 13ರಂದು ಕರ್ನಾಟಕ ವಿಧಾನಮಂಡಲದಲ್ಲಿ ಅನುಮೋದನೆಗೊಂಡು ರಾಜ್ಯಪಾಲರು ಅಂಕಿತಕ್ಕೆ ರವಾನೆಯಾಗಿತ್ತು. ಮಸೂದೆ ಕೇಂದ್ರ ಸರಕಾರದ ಪ್ರಾಣಿಹಿಂಸೆ ತಡೆ ಕಾಯ್ದೆ 1960ಕ್ಕೆ ತಿದ್ದುಪಡಿಯಾಗಿರುವುದರಿಂದ ರಾಜ್ಯಪಾಲರು ಕಾನೂನು ಸಲಹೆಗಾರರ ಅಭಿಪ್ರಾಯ ಪಡೆದು ಇದನ್ನು ರಾಷ್ಟ್ರಪತಿಯವರಿಗೆ ಕಳುಹಿಸಿದ್ದರು. ಪ್ರಸ್ತುತ ಕೇಂದ್ರ ಸರಕಾರದ ಬಳಿ ಇದ್ದು ಈಗಾಗಲೇ ಕೇಂದ್ರ ಸಂಸ್ಕೃತಿ ಖಾತೆ, ಕಾನೂನು ಖಾತೆಯಿಂದ ನಿರಾಕ್ಷೇಪಣ ಪತ್ರ ಪಡೆದಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯದಿಂದಾದ ಒಂದು ತಾಂತ್ರಿಕ ದೋಷದಿಂದ ಕಾನೂನು ಸಚಿವಾಲಯ ಇದನ್ನು ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸುವಲ್ಲಿ ವಿಳಂಬಕ್ಕೆ ಕಾರಣವಾಗಿದೆ. ಉಳಿದ 2 ಖಾತೆಗಳು ಮಸೂದೆಗೆ ಅಕ್ಷೇಪಣೆ ಇಲ್ಲ ಎಂದು ದೃಢಪಡಿಸಿದ್ದರೆ ಅರಣ್ಯ ಮತ್ತು ಪರಿಸರ ಸಚಿವಾಲಯ ನೋ ಕಮೆಂಟ್ಸ್ ಎಂಬುದಾಗಿ ತಿಳಿಸಿತ್ತು. ಇದು ಗೊಂದಲಕ್ಕೆ ಕಾರಣವಾಗಿತ್ತು.
ಇದೀಗ ಈ ಗೊಂದಲ ಬಗೆ ಹರಿದಿದ್ದು ಕಾನೂನು ಸಚಿವಾಲಯದಿಂದ ಗೃಹಸಚಿವಾಲಯಕ್ಕೆ ಬಂದಿದೆ. ಅಲ್ಲಿಂದ ರಾಷ್ಟ್ರಪತಿಯವರ ಅಂಕಿತಕ್ಕೆ ರವಾನೆಯಾಗುತ್ತದೆ. ಪರಿಸರ ಮತ್ತು ಅರಣ್ಯ ಇಲಾಖೆಯಲ್ಲಿ ಆದ ಗೊಂದಲ ಹಾಗೂ 5 ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯಲ್ಲಿ ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ.
ಸೀಸನ್ ಮುಗಿಯಿತು
ಅವಿಭಜಿತ ದ.ಕ. ಜಿಲ್ಲೆಯಲ್ಲಿ ನವೆಂಬರ್‌ನಿಂದ ಮಾರ್ಚ್‌ವರೆಗೆ ಕಂಬಳ ಸೀಸನ್. ಕಂಬಳ ಸಮಿತಿ ಅಧೀನದಲ್ಲಿ ಜಿಲ್ಲೆಯಲ್ಲಿ 18 ಕಂಬಳಗಳ ಆಯೋಜನೆಗೆ ವೇಳಾಪಟ್ಟಿ ನೀಡಲಾಗುತ್ತಿದ್ದು ಇದರಂತೆ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಂಬಳಗಳು ನಡೆಯುತ್ತವೆ. ಇದಲ್ಲದೆ ಸಾಂಪ್ರದಾಯಿಕ ಹಾಗೂ ದೇವರ ಕಂಬಳಗಳು ಸೇರಿ ಸುಮಾರು 100ಕ್ಕೂ ಅಧಿಕ ಕಂಬಳಗಳು ಉಭಯ ಜಿಲ್ಲೆಗಳಲ್ಲಿ ಜರಗುತ್ತವೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಈ ಬಾರಿ ಕಂಬಳಗಳು ಪ್ರಾರಂಭವಾಗಲಿಲ್ಲ. ಫೆ. 13ಕ್ಕೆ ಮಸೂದೆ ಅಂಗೀಕಾರಗೊಂಡ ಬಳಿಕ ರಾಜ್ಯಪಾಲರ ಅಂಗೀಕಾರ ದೊರಕಿ ಜಾರಿಗೆ ಬಂದಿದ್ದರೆ ಕನಿಷ್ಠ ಪಕ್ಷ 4ರಿಂದ 6 ಕಂಬಳಿಗಳಿಗೆ ಅವಕಾಶವಾಗುತ್ತಿತ್ತು. ಆದರೆ ರಾಷ್ಟ್ರಪತಿಗಳಿಗೆ ರವಾನೆಯಾದ ಹಿನ್ನೆಲೆಯಲ್ಲಿ ಈ ನಿರೀಕ್ಷೆ ಸಾಧ್ಯವಾಗಿಲ್ಲ.
ಬಿಸಿಲಿನ ತೀವ್ರತೆ ಅಡ್ಡಿ
ಮಾರ್ಚ್ ಅಂತ್ಯದ ಬಳಿಕ ಬಿಸಿಲಿನ ತೀವ್ರತೆ ಜಾಸ್ತಿ ಇರುವುದರಿಂದ ಕೋಣಗಳಿಗೆ ಓಡಲು ಕಷ್ಟವಾಗುತ್ತದೆ. ಇದಲ್ಲದೆ ಅವುಗಳ ಆರೋಗ್ಯದ ಮೇಲೂ ಪರಿಣಾಮಗಳಾಗುತ್ತವೆ. ಇದರ ಜತೆಗೆ ಕಂಬಳ ಆಯೋಜನೆಗೆ ಸಾಕಷ್ಟು ನೀರು ಬೇಕಾಗುತ್ತದೆ. ಮಾರ್ಚ್ ಅಂತ್ಯದ ಬಳಿಕ ನೀರಿನ ಸಮಸ್ಯೆ ತೀವ್ರವಾಗುವುದರಿಂದ ಆಯೋಜನೆಗೆ ಸಮಸ್ಯೆ ಎದುರಾಗುತ್ತದೆ ಎಂದು ಕಂಬಳ ಸಮಿತಿಯ ಕಾರ್ಯದರ್ಶಿ ವಿಜಯ ಕುಮಾರ್ ಕಂಗೀನಮನೆ.
ಜಾರಿಗೆ ಬಂದರೆ 3 ಕಂಬಳಗಳ ಸಾಧ್ಯತೆ
ಎಪ್ರಿಲ್ 10ರೊಳಗೆ ರಾಷ್ಟ್ರಪತಿಯವರ ಅಂಗೀಕಾರ ದೊರೆತು ಮಸೂದೆ ಜಾರಿಗೆ ಬಂದರೆ ನೀರು ಸೌಲಭ್ಯ ಇರುವ ಉಪ್ಪಿನಂಗಡಿ, ವೇಣೂರು ಹಾಗೂ ಬಂಗಾಡಿ ಕಂಬಳಗಳನ್ನು ಆಯೋಜಿಸಲು ಅವಕಾಶಗಳಿವೆ. ಶೀಘ್ರ ಅಂಗೀಕಾರ ಲಭಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಾಗಿವೆ ಎಂದು ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾಕೂìರು ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ನೀರು ಲಭ್ಯತೆ ಇರುವ ಕಾರಣ ಇಲ್ಲಿ ಎಪ್ರಿಲ್ ಕೊನೆ ವರೆಗೆ ಕಂಬಳ ಆಯೋಜನೆಗೆ ಅವಕಾಶಧಿವಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರ ಅಂಗೀಕಾರ ಪಡೆದು ಮಸೂದೆ ಜಾರಿಗೆ ಬಂದರೆ ಎಪ್ರಿಲ್ ಮಧ್ಯಭಾಗದ ವರೆಗೆ ಇಲ್ಲಿ ಕಂಬಳ ಆಯೋಜನೆಗೆಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ಕಂಬಳದ ಪರವಾಗಿ ಕಾನೂನು ಹೋರಾಟ ನಡೆಸುತ್ತಿರುವ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಈಗಾಗಲೇ ಮಸೂದೆ ಕಾನೂನು ಸಚಿವಾಲಯದಿಂದ ಅನುಮೋದನೆ ಪಡೆದು ಗೃಹಸಚಿವಾಲಯಕ್ಕೆ ಹೋಗಿದ್ದು ಅಲ್ಲಿಂದ ರಾಷ್ಟ್ರಪತಿಯವರಿಗೆ ಹೋಗಲಿದೆ ಎಂಬುದಾಗಿ ಮಾಹಿತಿ ಬಂದಿದೆ. ಕರ್ನಾಟಕದ ರಾಜ್ಯಪಾಲ ವಜೂಭಾç ರುಡಾಭಾç ವಾಲಾ ಅವರನ್ನು ಭೇಟಿಯಾಗಿ ಕಂಬಳ ಮಸೂದೆಗೆ ರಾಷ್ಟ್ರಪತಿಯವರ ಅಂಗೀಕಾರ ಶೀಘ್ರ ದೊರೆಯುವ ನಿಟ್ಟಿನಲ್ಲಿ ಪೂರಕ ಅಭಿಪ್ರಾಯಗಳನ್ನು ನೀಡುವಂತೆ ಮನವಿ ಮಾಡಿದ್ದೇನೆ.
– ಅಶೋಕ್ ಕುಮಾರ್ ರೈ, ಕಂಬಳ ಕಾನೂನು ಹೋರಾಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪಾಲಿಕೆ ಚುನಾವಣೆ ಅನುಮಾನ?
‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ಪಷ್ಟನೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.