ಕೆಮ್ಮಟೆ: ಶಾಲೆಯ ಅಂಗಳದ ಗದ್ದೆಯಲ್ಲಿ ಹಸುರಿನ ಪೈರು


Team Udayavani, Aug 27, 2018, 10:26 AM IST

27-agust-2.jpg

ಬೆಳ್ತಂಗಡಿ: ಭತ್ತವನ್ನು ಬೆಳೆಯುವ ಸಂಪೂರ್ಣ ವಿಧಾನ ವಿದ್ಯಾರ್ಥಿಗಳಿಗೆ ತಿಳಿಯಬೇಕು ಎಂಬ ಇಚ್ಛೆಯಿಂದ ತಾಲೂಕಿನ ತೀರಾ ಗ್ರಾಮೀಣ ಪ್ರದೇಶವಾಗಿರುವ ಪುದುವೆಟ್ಟು ಗ್ರಾಮದ ಕೆಮ್ಮಟೆ ಸ.ಹಿ.ಪ್ರಾ. ಶಾಲೆಯ ಜಮೀನಿನಲ್ಲಿ ಗದ್ದೆಯನ್ನು ನಿರ್ಮಿಸಲಾಗಿದ್ದು, ಭತ್ತದ ಪೈರು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ.

ಪ್ರಸ್ತುತ ದಿನಗಳಲ್ಲಿ ಗದ್ದೆ ನಾಶವಾಗುತ್ತಿದ್ದು, ಅನ್ನದ ಅಕ್ಕಿ ಹೇಗೆ ಸಿದ್ಧವಾಗುತ್ತದೆ ಎಂಬುದು ಇಂದಿನ ಪೀಳಿಗೆಗೆ ಗೊತ್ತಿಲ್ಲ. ಹೀಗಾಗಿ ಕೆಲವೊಂದೆಡೆ ವಿದ್ಯಾರ್ಥಿಗಳನ್ನು ಗದ್ದೆಗೆ ಕರೆದುಕೊಂಡು ಹೋಗಿ ಕೃಷಿ ಪಾಠವನ್ನು ನೀಡಲಾಗುತ್ತದೆ. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ಪೂರ್ತಿ ಅರಿವು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಕೆಮ್ಮಟೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಎಸ್‌ಡಿಎಂ ಪದಾಧಿಕಾರಿಗಳು, ಊರವರು ಸೇರಿಕೊಂಡು ಶಾಲೆಯ ಮುಂಭಾಗದಲ್ಲಿ ಸಣ್ಣದಾಗಿ ಗದ್ದೆಯೊಂದನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಭತ್ತದ ಪೈರು ಉತ್ತಮವಾಗಿ ಬೆಳೆದಿದ್ದು, ತಿಂಗಳೊಳಗೆ ತೆನೆ ಬಿಡುವ ಹಂತಕ್ಕೆ ಮುಟ್ಟಿದೆ. ಶಾಲೆಯ ಗೌರವ ಶಿಕ್ಷಕಿ ವಸಂತಿ ಪಿ. ನಿಡ್ಲೆ ಅವರ ಕಲ್ಪನೆಯಲ್ಲಿ ಗದ್ದೆ ರೂಪುಗೊಂಡಿದೆ. ಆರಂಭದಲ್ಲಿ ಹಟ್ಟಿ ಗೊಬ್ಬರ ಬಳಸಲಾಗಿದ್ದು, ಕೆಲವು ದಿನಗಳ ಹಿಂದೆ ರಾಸಾಯನಿಕ ಗೊಬ್ಬರವನ್ನೂ ಬಳಸಲಾಗಿದೆ.

ಹೀಗಾಗಿ ಪೈರು ಚೆನ್ನಾಗಿದ್ದು, ಉತ್ತಮ ಮಳೆ ಬರುತ್ತಿರುವುದರಿಂದ ನೀರಿನ ಕೊರತೆಯೂ ಎದುರಾಗಿಲ್ಲ. ನಮ್ಮ ಕಾರ್ಯದಲ್ಲಿ ಊರವರ ಜತೆಗೆ ಮಕ್ಕಳು ಕೂಡ ಸೇರಿದ್ದು, ಭತ್ತ ಕೃಷಿ ಹೇಗೆ ಮಾಡಬಹುದು ಎಂಬ ಕಲ್ಪನೆ ಮೂಡಿಸುವ ಉದ್ದೇಶದಿಂದ ಈ ರೀತಿ ಗದ್ದೆ ಮಾಡಲಾಗಿದೆ ಎಂದು ಶಿಕ್ಷಕಿ ವಸಂತಿ ತಿಳಿಸಿದ್ದಾರೆ.

ಇನ್ನಷ್ಟು ಬೆಳೆಸುವ ಆಶಯ
ಈ ವರ್ಷ ಮೊದಲ ಬಾರಿಗೆ ಗದ್ದೆ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಗದ್ದೆಯನ್ನು ಇನ್ನಷ್ಟು ವಿಸ್ತಾರಗೊಳಿಸುವ ಆಶಯ ಇವರಲ್ಲಿದೆ. ಶಾಲೆಗೆ ಸುಮಾರು 2 ಎಕರೆಯಷ್ಟು ಸ್ಥಳವಿದ್ದು, ಮೈದಾನವೂ ವಿಸ್ತಾರವಾಗಿದೆ. ಈ ಬಾರಿ ಉತ್ತಮ ಬೆಳೆ ಸಿಕ್ಕರೆ ಮುಂದೆ ಮೈದಾನದ ಒಂದು ಬದಿಯಲ್ಲಿ ದೊಡ್ಡ ಗದ್ದೆ ಮಾಡಲಾಗುವುದು. ಈ ಭಾಗದಲ್ಲಿ ಪ್ರಾಣಿ, ಪಕ್ಷಿಗಳ ಹಾವಳಿ ಹೆಚ್ಚಿದ್ದು, ಪೈರನ್ನು ನಾಶ ಮಾಡುವ ಆತಂಕವಿತ್ತು. ಜತೆಗೆ ಶಾಲೆಗೆ ಆವರಣ ಗೋಡೆ ಇಲ್ಲದಿರುವುದರಿಂದ ಜಾನುವಾರುಗಳು ತಿಂದು ಹಾಕುವ ಭೀತಿಯೂ ಇತ್ತು. ಹೀಗಾಗಿ ಸಣ್ಣ ಮಟ್ಟದಲಿ ಬೆಳೆದು, ಮುಂದೆ ವಿಸ್ತರಿಸುವ ಆಲೋಚನೆ ಇದೆ ಎಂದು ಶಿಕ್ಷಕಿ ಹೇಳುತ್ತಾರೆ.

ಹೊಸ ಅಕ್ಕಿ ಊಟ
ಪ್ರಸ್ತುತ ಇರುವ ಗದ್ದೆಯಿಂದ ಉತ್ತಮ ಭತ್ತ ಲಭಿಸಿ, ಅಕ್ಕಿ ಸಿಕ್ಕರೆ ಮಕ್ಕಳ ಜತೆಗೆ ಊರವರನ್ನೂ ಕರೆದು ಹೊಸ ಅಕ್ಕಿ ಊಟ ಮಾಡಿಸುವ ಆಲೋಚನೆ ಶಾಲೆಯ ಮುಂದಿದೆ. ಆದರೆ ಭತ್ತದ ತೆನೆಯನ್ನು ನೋಡದೆ ಏನೂ ಹೇಳುವಂತಿಲ್ಲ ಎಂದು ಅಭಿಪ್ರಾಯಿಸುತ್ತಾರೆ.

ಸಮೃದ್ಧ ಫೈರು 
ಶಾಲೆಯವರ ಜತೆ ಊರವರು ಸೇರಿಕೊಂಡು ಶಾಲೆಯ ಮುಂದಿನ ಒಂದಷ್ಟು ಭಾಗವನ್ನು ಹಾರೆ-ಪಿಕ್ಕಾಸು ಬಳಸಿ ಹದ ಮಾಡಿಕೊಂಡು, ಬಳಿಕ ಸ್ಥಳೀಯ ಕೃಷಿಕರಿಂದ ಭತ್ತದ ಪೈರನ್ನು ಪಡೆದು ನೆಡಲಾಗಿತ್ತು. ಜುಲೈ ಆರಂಭದಲ್ಲಿ ನಾಟಿ ಮಾಡಲಾಗಿದ್ದು, ಧಾರಾಕಾರ ಮಳೆಯಿಂದಾಗಿ ಭತ್ತದ ಪೈರು ನಾಶವಾಗುತ್ತದೆ ಎಂಬ ಆತಂಕದ ನಡುವೆಯೂ ಪ್ರಸ್ತುತ ಪೈರು ಸಮೃದ್ಧವಾಗಿ ಬೆಳೆದಿದೆ.

ಕಲಿಕೆಗೆ ಹೆಚ್ಚಿನ ಆಸಕ್ತಿ
ಕೃಷಿ ಕುರಿತು ಮಕ್ಕಳಿಗೆ ಅರಿವು ಮೂಡಬೇಕು ಎಂಬ ಕಲ್ಪನೆಯಿಂದ ಶಿಕ್ಷಕರು, ಹೆತ್ತವರು ಸೇರಿಕೊಂಡು ಈ ಕಾರ್ಯ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಲು ಸಾಧ್ಯ. ಸರಕಾರಿ ಶಾಲೆಗಳಲ್ಲಿ ಇಂತಹ ಪ್ರಯೋಗಗಳನ್ನು ಮಾಡಿದಾಗ, ಶಾಲೆಗಳ ಉಳಿವಿಗೆ ಅನುಕೂಲವಾಗುತ್ತದೆ.
 - ಅಬೂಬಕ್ಕರ್‌ ಅಧ್ಯಕ್ಷರು, ಎಸ್‌ಡಿಎಂಸಿ.

ಶಿಕ್ಷಕಿಯ ಪ್ರಯತ್ನ 
ಶಿಕ್ಷಕಿ ವಸಂತಿ ಅವರ ಪ್ರಯತ್ನದ ಜತೆಗೆ ಊರವರ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ. ಭತ್ತವನ್ನು ಹೇಗೆ ಬೆಳೆಯಲಾಗುತ್ತದೆ, ಕಟಾವು ಹೇಗೆ ಎಂಬ ಕ್ರಮಗಳು ಮಕ್ಕಳಿಗೆ ತಿಳಿಯಬೇಕು ಎಂಬ ಆಶಯದೊಂದಿಗೆ ಶ್ರಮ ವಹಿಸಲಾಗಿದೆ. 
– ಶಿಲ್ಪಾ ಮುಖ್ಯ ಶಿಕ್ಷಕಿ

ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.