ಕನಕದಾಸರು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ: ಡಾ| ಆಳ್ವ
ಮಂಗಳಗಂಗೋತ್ರಿಯಲ್ಲಿ ಕನಕ ಸಾಹಿತ್ಯ ಸಮ್ಮೇಳನ
Team Udayavani, Jul 23, 2022, 1:49 AM IST
ಉಳ್ಳಾಲ: ಕನಕದಾಸರು, ಪುರಂದರದಾಸರು, ನಾರಾಯಣ ಗುರುಗಳಂತಹ ಸಂತರು ಯಾವುದೇ ಜಾತಿ ಧರ್ಮಕ್ಕೆ ಸೀಮಿತರಾದವರಲ್ಲ. ಅವರು ಅಧಿಕಾರಶಾಹಿಯ ದರ್ಪದ ವಿರುದ್ಧ, ಆರ್ಥಿಕ ಸಂಗ್ರಹದ ಆಸೆಯ ವಿರುದ್ಧ ಧ್ವನಿಯೆತ್ತಿ ಸಮಾನತೆಯ ನಿರ್ಮಲ ಬದುಕಿನ ದಾರಿಯನ್ನು ತೋರಿದವರು ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.
ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನಕದಾಸ ಸಂಶೋಧನ ಕೇಂದ್ರ ಮತ್ತು ಬೆಂಗಳೂರಿನ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಹಯೋಗ ದೊಂದಿಗೆ ಆರಂಭವಾದ ಎರಡು ದಿನ ಗಳ “ಕನಕ ಸಾಹಿತ್ಯ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದರು.
ಕನಕದಾಸರ ಕುರಿತಾಗಿಯೇ ನಡೆಯುತ್ತಿರುವ ಮೊದಲ ಸಾಹಿತ್ಯ ಸಮ್ಮೇಳನ ಚಾರಿತ್ರಿಕ ಮಹಣ್ತೀವನ್ನು ಹೊಂದಿದೆ ಎಂದರು.
ಮಂಗಳೂರು ವಿ.ವಿ.ಗೆ ಸೆಪ್ಟಂಬರ್ ವೇಳೆಗೆ ಸಾಂಸ್ಕೃತಿಕ ನೀತಿಯನ್ನು ರೂಪಿಸಲಾಗುವುದು. ಈ ಮೂಲಕ ವಿ.ವಿ.ಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಯುವ ತಲೆಮಾರಿಗೆ ಆಸಕ್ತಿ ಉಂಟಾಗುವಂತೆ ತಲುಪಿಸಲಾಗುವುದು ಎಂದು ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದರು.
ಕನಕದಾಸ ಪೀಠದ ಚಟುವಟಿಕೆ ಗಳು ಸಮಾಜಕ್ಕೆ ಉಪಯುಕ್ತ ಚಿಂತನೆ ನೀಡುತ್ತಿವೆ ಎಂದು ಕುಲಸಚಿವ ಪ್ರೊ| ಕಿಶೋರ್ ಕುಮಾರ್ ಹೇಳಿದರು.
ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ| ಬಿ. ಶಿವರಾಮ ಶೆಟ್ಟಿ ತಾವು ಕಳೆದ ಬಾರಿ ಪಡೆದ ಕನಕ ಪುರಸ್ಕಾರದ ಮೊತ್ತವನ್ನು ಮಂಗಳೂರು ವಿ.ವಿ.ಯ ಕನಕ ಪೀಠಕ್ಕೆ ದೇಣಿಗೆಯಾಗಿ ನೀಡಿದರು.
ವಿ.ವಿ. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ| ಧನಂಜಯ ಕುಂಬ್ಳೆ ಸ್ವಾಗತಿಸಿದರು. ಬೆಂಗಳೂರಿನ ರಾಷ್ಟ್ರೀಯ ಸಂತ ಕವಿ ಕನಕದಾಸ ಸಂಶೋಧನ ಕೇಂದ್ರದ ಎಂ.ಆರ್. ಸತ್ಯನಾರಾಯಣ ಪ್ರಸ್ತಾ ವಿಸಿದರು. ಆನಂದ ಎಂ. ಕಿದೂರು ವಂದಿಸಿದರು. ಉಪನ್ಯಾಸಕ ಅರುಣ್ ಉಳ್ಳಾಲ ನಿರ್ವಹಿಸಿದರು.
ವಿ.ವಿ.ಯಲ್ಲಿ ಕವಿ ಮುದ್ದಣ ಪೀಠ
ಮಂಗಳೂರು ವಿ.ವಿ.ಯಲ್ಲಿ ಮುದ್ದಣ ಪೀಠ ಸ್ಥಾಪಿಸುವಂತೆ ಬೇಡಿಕೆ ಇದ್ದು, ಡಿಸೆಂಬರ್ ಒಳಗೆ ಕ್ರಮ ಕೈಗೊಳ್ಳಲಾಗುವುದು. ಸರಕಾರದಿಂದ 25 ಲಕ್ಷ ರೂ. ಅನುದಾನ ನಿರೀಕ್ಷೆಯೊಂದಿಗೆ ಪೀಠ ಕಾರ್ಯಾಚರಿಸಲು ದಾನಿಗಳ ಸಹಕಾರವೂ ಅಗತ್ಯ ಎಂದು ಪ್ರೊ| ಯಡಪಡಿತ್ತಾಯ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.