ಕನಕಮಜಲು: ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸುಧಾರಣೆ
ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದ ಮೇಲೆ 3ಜಿ ಸೌಲಭ್ಯ
Team Udayavani, Apr 21, 2019, 6:00 AM IST
ಕನಕಮಜಲಿನಲ್ಲಿರುವ ಬಿಎಸ್ಸೆನ್ನೆಲ್ ಟವರ್.
ಕನಕಮಜಲು: ಗ್ರಾಮದಲ್ಲಿ ತೀವ್ರವಾಗಿದ್ದ ನೆಟ್‌ವರ್ಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರಕಿದೆ. ಹಲವು ಕಡೆಗಳಲ್ಲಿ ಈಗ 3ಜಿ ನೆಟ್‌ವರ್ಕ್ ಸೌಲಭ್ಯ ಸಿಗುವಂತಾಗಿದೆ. ಪ್ರಧಾನಿ ಕಚೇರಿಗೆ ಸ್ಥಳೀಯರು ಪತ್ರ ಬರೆದ ಮೇಲೆ ನೆಟ್‌ವರ್ಕ್ ಸುಧಾರಿಸಿದೆ ಎನ್ನುವುದು ಗಮನಾರ್ಹ.
ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಅತಿಯಾಗಿದೆ. ಸ್ಥಳೀಯರು ಬಿಎಸ್ಸೆನ್ನೆಲ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಗಡಿಭಾಗ ಗಳಲ್ಲಿ ರೋಮಿಂಗ್ ಸಮಸ್ಯೆ ನಿವಾರಣೆ ಯಾಗಿದ್ದರೂ 3ಜಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿತ್ತು. ಮೂರು ವರ್ಷಗಳ ಹಿಂದೆ ಕನಕಮಜಲು ಗ್ರಾಮದಲ್ಲಿ ಬಿಎಸ್ಸೆನ್ನೆಲ್ ಟವರ್ ಅಳವಡಿಸಲಾಗಿತ್ತು. ಗ್ರಾಹಕರಿಗೆ 2ಜಿ ನೆಟ್‌ವರ್ಕ್ ಸಿಗುತ್ತಿತ್ತು. ಇದರಿಂದ ಇಂಟರ್ನೆಟ್ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿತ್ತು. 3ಜಿ ಸೌಲಭ್ಯವಿಲ್ಲದೆ ಗ್ರಾ.ಪಂ., ಸೊಸೈಟಿ, ಶಾಲೆ ಹಾಗೂ ಇತರ ಸಂಸ್ಥೆಗಳಲ್ಲಿ ಪ್ರತಿನಿತ್ಯದ ಕೆಲಸಗಳಿಗೆ ಅಡಿªಯಾಗುತಿತ್ತು. ಕಚೇರಿಗಳಲ್ಲೂ ಕೆಲಸದ ಸಮಯ ಪೋಲಾಗುತ್ತಿತ್ತು.
ಮನವಿ ನೀಡಿದ್ದರು
ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಗ್ರಾಮಸ್ಥರು ಹಲವು ಮನವಿಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಭಾಗದಲ್ಲಿ ಜನರು ಬಿಎಸ್ಸೆನ್ನೆಲ್ ಸಿಮ್‌ಗಳನ್ನೇ ಬಳಸುವುದು ಜಾಸ್ತಿ. ಆದರೆ, 2ಜಿ ಮಾತ್ರ ಸಿಗುತ್ತಿದ್ದ ಕಾರಣ ಸಾಮಾಜಿಕ ಜಾಲತಾಣಗಳ ಬಳಕೆ, ಡೌನ್‌ಲೋಡ್ ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಸಂಸದರಿಗೆ ಮನವಿ ಕೊಟ್ಟರೂ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರಧಾನಿ ಕಾರ್ಯಾಲಯಕ್ಕೆ ಪತ್ರ
ನೆಟ್‌ವರ್ಕ್ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜಾಣ ಮೌನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರಾದ ಗುರುಪ್ರಸಾದ್ ನರಿಯೂರು, ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಡಿಜಿಟಲ್ ಇಂಡಿಯಾ ಯೋಜನೆ ಕುರಿತು ಪ್ರಸ್ತಾವಿಸಿ, ನೆಟ್‌ವರ್ಕ್ ಸಮಸ್ಯೆಯಿಂದ ಇದಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ, 3ಜಿ ಸೌಲಭ್ಯಕ್ಕೆ ಮೇಲ್ದರ್ಜೆಗೇರಿಸಲು ದೂರಸಂಪರ್ಕ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದರು. ಗುರುಪ್ರಸಾದ್ ಅವರು ಪತ್ರ ಬರೆದು 15 ದಿವಸಗಳು ಕಳೆದ ಅನಂತರ ಪ್ರಧಾನಿ ಕಾರ್ಯಾಲಯದಿಂದ ಉತ್ತರ ಬಂದಿತ್ತು. ಮನವಿ ಸ್ವೀಕರಿಸಲಾಗಿದೆ, ಸಂಬಂಧ ಪಟ್ಟ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿತ್ತು.
ಸಮಸ್ಯೆ ಬಗೆಹರಿಸಲು ಕ್ರಮ: ಅಧಿಕಾರಿಗಳು
ಅಧಿಕಾರಿಗಳು 3ಜಿ ನೆಟ್‌ವರ್ಕ್ ಸೌಲಭ್ಯ ಸಿಗುತ್ತಿದೆ ಎಂದು ಹೇಳುತ್ತಿದ್ದರೂ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಎ. 11ರಿಂದ ಇಲ್ಲಿ ಬಿಎಸ್ಸೆನ್ನೆಲ್ 3ಜಿ ನೆಟ್ ವರ್ಕ್ ಸೌಲಭ್ಯ ಸಿಗುತ್ತಿದೆ. ಆದರೂ ನೆಟ್‌ವರ್ಕ್ ಸಮಸ್ಯೆ ಇನ್ನೂ ಇದೆ. ಟವರ್ ಹತ್ತಿರದಲ್ಲಿ ಮಾತ್ರ 3ಜಿ ಸಿಗುತ್ತಿದೆ. ತುಂಬಾ ಸ್ಲೋ ಇದ್ದು, ಆಗಾಗ ಸ್ಥಗಿತಗೊಳ್ಳುತ್ತವೆ. ಸರಿಯಾಗಿ ಮಾತಾಡಲೂ ಸಾಧ್ಯವಾಗುತ್ತಿಲ್ಲ. ಟವರ್ ನಿರ್ವಹಣೆ ಸಮರ್ಪಕವಾಗಿಲ್ಲದೆ ವಿದ್ಯುತ್ ಕೈಕೊಟ್ಟರೆ ನೆಟ್‌ವರ್ಕ್ ಇರುವುದೇ ಇಲ್ಲ. ತುರ್ತು ಸ್ಥಿತಿಯಲ್ಲಿ ನಮ್ಮವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಾಣಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಮಸ್ಯೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸುತ್ತಿರುವುದಾಗಿ ಬಿಎನ್ನೆನ್ನೆಲ್ ಅಧಿಕಾರಿಗಳು ತಿಳಿಸಿದ್ದಾರೆ.
ಶಾಶ್ವತ ಪರಿಹಾರ ಬೇಕು
ಮಾಣಿ- ಮೈಸೂರು ರಾಜ್ಯ ರಸ್ತೆಯಲ್ಲಿರುವ ಕನಕಮಜಲಿನಲ್ಲಿ ಮೂರು ವರ್ಷಗಳಿಂದ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ ಇತ್ತು. ಈ ಬಗ್ಗೆ ಅಧಿಕಾರಿಗಳಿಗೆ, ಸಂಸದರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ. ಕೊನೆಗೆ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದೆವು. ಪತ್ರಕ್ಕೆ ತ್ವರಿತವಾಗಿ ಸ್ಪಂದಿಸಿ, ಇಲಾಖೆಗೆ ಆದೇಶ ನೀಡಿದರು. ನಿಗಮವು ಭರವಸೆ ನೀಡಿದ್ದರೂ ಸಮಸ್ಯೆ ಪೂರ್ಣವಾಗಿ ಬಗೆಹರಿದಿಲ್ಲ. 3ಜಿ ತುಂಬ ನಿಧಾನಗತಿಯಲ್ಲಿದೆ. ಎಲ್ಲ ಕಡೆಗಳಲ್ಲಿ ಸಿಗುತ್ತಿಲ್ಲ. ಶೀಘ್ರ ಇದಕ್ಕೆ ಶಾಶ್ವತ ಪರಿಹಾರ ಆಗಬೇಕು.
ಗುರುರಾಜ್ ನರಿಯೂರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದವರು
ಶಿವಪ್ರಸಾದ್ ಮಣಿಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.