ಕಂದಾವರ ವಿಶೇಷ ಗ್ರಾಮಸಭೆ

Team Udayavani, Feb 1, 2018, 1:53 PM IST

1-Feb-10.jpg

ಕಂದಾವರ : ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊಳಂಬೆ ಗ್ರಾಮದ ವಸತಿ ನಿರ್ಮಾಣಕ್ಕೆ ಸಮತಟ್ಟು ಮಾಡುವ ಬಗ್ಗೆ ನರೇಗಾ ಯೋಜನೆಯಡಿಯಲ್ಲಿ ನಿಧನ ಹೊಂದಿದ ಮಹಿಳೆ ಹಾಗೂ ವಿದೇಶದಲ್ಲಿದ್ದವರ ಬ್ಯಾಂಕ್‌ ಖಾತೆಗೆ ಹಣ ಪಾವತಿಯಾಗಿದ್ದು, ಈ ಬಗ್ಗೆ ಕಂದಾವರ ಸಾಮಾಜಿಕ ಪರಿಶೋಧನ ವಿಶೇಷ ಗ್ರಾಮ ಸಭೆಯಲ್ಲಿ ಯೋಜನೆಯ ತಾಲೂಕು ಸಂಯೋಜಕಿ ಪವಿತ್ರಾ ಅವರು ವಸೂಲಾತಿಗೆ ಬರೆದಿದ್ದಾರೆ.

ಕಂದಾವರ ಗ್ರಾ.ಪಂ. ವ್ಯಾಪ್ತಿಯ 2017-18ನೇ ಸಾಲಿನ ದ್ವಿತೀಯ ಹಂತದ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನ ವಿಶೇಷ ಗ್ರಾಮ ಸಭೆಯು ಬುಧವಾರ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ
ನಡೆಯಿತು. ಮಂಗಳೂರು ಅಕ್ಷರ ದಾಸೋಹ ಇಲಾಖೆಯ ಜೀವನ್‌ ಅವರು ನೋಡಲ್‌ ಅಧಿಕಾರಿಯಾಗಿ ಅಧ್ಯಕ್ಷತೆ ವಹಿಸಿದ್ದರು.

ವಸೂಲಾತಿಗೆ ಕ್ರಮ
ಸ್ಥಳ ಭೇಟಿ ಸಂದರ್ಭ ಜೆಸಿಂತಾ ಹಾಗೂ ಜೇಮ್ಸ್‌ ಡಿ’ಸೋಜಾ ಅವರು ಕೆಲಸ ಮಾಡದೇ ಇದ್ದರೂ ಅವರ ಖಾತೆಗೆ ತಲಾ 3,540 ರೂ. ಹಣ ಬಂದಿದೆ. ಪ್ಲೊರೀನ್‌ ಡಿ’ಸೋಜಾ ಅವರು ನಿಧನ ಹೊಂದಿ 2 ವರ್ಷಗಳಾಗಿವೆ. ಜೈಸನ್‌ ಡಿ’ಸೋಜಾ ವಿದೇಶದಲ್ಲಿದ್ದಾರೆ ಅವರ ಖಾತೆಗೂ ಹಣ ಜಮೆಯಾಗಿದೆ. ಸೆಲಿನ್‌ ಲೋಬೋ ಅವರು ಕೆಲಸ ಮಾಡದೇ ಬೇರೆಯವರಿಗೆ ಹಣ ತೆಗೆಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ ಇದನ್ನು ಕೂಡ ವಸೂಲಾತಿಗೆ ಬರೆದಿದ್ದಾನೆ ಎಂದು ಪವಿತ್ರಾ ತಿಳಿಸಿದರು.

ಕೊಳಂಬೆ ಗ್ರಾಮದ ಕಾಲು ಸಂಕ ಕಾಮಗಾರಿಯಲ್ಲಿ ಇಬ್ಬರು ಮಹಿಳೆಯರು ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ
ಆದರೂ ಹಣ ಪಾವತಿಯಾಗಿದೆ. ಒಟ್ಟು ವಸೂಲಾತಿಗೆ 24,308 ರೂ. ಬರೆಯಲಾಗಿದೆ ಎಂದರು.

ಯೋಜನೆ ಬಗ್ಗೆ ಮಾಹಿತಿ ನೀಡಿದ ಅವರು, ನಾಲ್ಕು ಪ್ರವರ್ಗದಲ್ಲಿ ಕಾಮಗಾರಿಗಳು ನಡೆಯುತ್ತದೆ. ಲೋಕೋಪಯೋಗಿ ಕಾಮಗಾರಿ, ದುರ್ಬಲ ಪ್ರವರ್ಗವರಿಗೆ ಪ್ರಥಮ ಆದ್ಯತೆ, ಮಹಿಳೆ ಸ್ವಸಹಾಯ ಸಂಘ, ಈ ಯೋಜನೆಯಲ್ಲಿ ಆದ್ಯತೆ ನೀಡಲಾಗುತ್ತದೆ. ಒಟ್ಟು ಮೂರು ಹಂತದ ಫೋಟೋಗಳು ಬೇಕಾಗಿವೆ. ಎರಡನೇ ಹಂತದಲ್ಲಿ ಕಾಮಗಾರಿ ನಡೆಸುವ ಫೋಟೋಗಳು ಬೇಕಾಗಿವೆ. 33 ಕಾಮಗಾರಿಗಳ ಪೈಕಿ ಕೆಲವುಗಳಲ್ಲಿ ನಾಮಫಲಕ ಮಾತ್ರ ಅಳವಡಿಸಲಾಗಿದೆ. ಕೆಲವು ಭೌತಿಕ ಅಳಕೆ ಆಗಿಲ್ಲ. ಕಾಮಗಾರಿ ಮುಕ್ತಾಯದ ದಿನ ನಮೂದಿಸಿಲ್ಲ. ಪಿಡಿಒ ಹಾಗೂ ಅಧ್ಯಕ್ಷರ ಸಹಿ ಇಲ್ಲ. ಒಟ್ಟು 75,992 ರೂ. ಆಕ್ಷೇಪಣೆ ಬರೆಯಲಾಗಿದೆ ಎಂದು ಸಂಯೋಜಕಿ ಪವಿತ್ರಾ ತಿಳಿಸಿದರು.

ನಿಧನ ಹಾಗೂ ವಿದೇಶದಲ್ಲಿದ್ದವರ ಖಾತೆಗೆ ಹಣ ವರ್ಗಾವಣೆ ಆದ ಬಗ್ಗೆ ಭಾರೀ ಚರ್ಚೆಯಾಯಿತು. ಜೈಸನ್‌ ಇತ್ತೀಚಿಗೆ
ವಿದೇಶಕ್ಕೆ ಹೋಗಿದ್ದಾರೆ. ಮನೆಯವರ ಹೆಸರಲ್ಲಿ ಅವರು ಕೆಲಸ ಮಾಡಿದ್ದಾರೆ. ಮನೆಯವರಿಗೆ ಈ ಬಗ್ಗೆ ಗೊತ್ತಿಲ್ಲ ಎಂದು
ಗ್ರಾ.ಪಂ. ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಹೇಳಿದರು. ಕಾರ್ಯಕ್ಕೆ ಬಂಧು ನೇಮಿಸಿದರೂ ಆ ಕಾರ್ಯಕ್ಕೆ ಯಾರೂ ಬರುವುದಿಲ್ಲ. ವಸೂಲಾತಿಗೆ ಬರೆಯುವುದರಿಂದ ಬರುವವರೂ ಇಲ್ಲದಂತಾಗುತ್ತದೆ ಎಂದು ಪಿಡಿಒ ರೋಹಿಣಿ ತಿಳಿಸಿದರು. ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿ ಉಷಾರಾಣಿ ಯೋಜನೆಯ ಕಾಮಗಾರಿಯ ವಿವರ ನೀಡಿ, ಒಟ್ಟು 671 ಉದ್ಯೋಗ ಚೀಟಿಯಲ್ಲಿ 486 ಸಕ್ರಿಯವಾಗಿದ್ದು, ಒಟ್ಟು 33 ಕಾಮಗಾರಿಯಲ್ಲಿ 31 ಗ್ರಾಮ ಪಂಚಾಯತ್‌, 2 ತೋಟಗಾರಿಕೆಗೆ ಸಂಬಂಧಪಟ್ಟದ್ದಾಗಿದೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಉಪಾಧ್ಯಕ್ಷ ದೇವೇಂದ್ರ, ಯೋಜನೆಯ ಎಂಜಿನಿಯರ್‌ ರೇಷ್ಮಾ, ಗ್ರಾಮ ಸಂಪನ್ಮೂಲ ವ್ಯಕ್ತಿ ಮಂಗಳಾಶ್ರೀ ಉಪಸ್ಥಿತರಿದ್ದರು. ಪಿಡಿಒ ರೋಹಿಣಿ ಸ್ವಾಗತಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿ ಸುನೀತಾ ನಿರೂಪಿಸಿದರು.

ನರೇಗಾ ಬೇಡ
ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿಯಾದರೂ ಹಣ ಬಿಡುಗಡೆಯಾಗುತ್ತಿಲ್ಲ. ವಿಶೇಷ ಗ್ರಾಮ ಸಭೆ ಕರೆದು ಈ ಯೋಜನೆ ನಮಗೆ ಅಗತ್ಯವಿಲ್ಲ ಎಂದು ನಿರ್ಣಯ ಮಾಡುತ್ತೇವೆ ಎಂದು ಗ್ರಾ.ಪಂ. ಸದಸ್ಯ ಶಿವಶಂಕರ್‌ 
ಆರೋಪಿಸಿದರು. ಇದಕ್ಕೆ ಉತ್ತರಿಸಿದ ನೋಡೆಲ್‌ ಅಧಿಕಾರಿ ಜೀವನ್‌, ಲೋಪದೋಷಗಳಿಲ್ಲದೆ ಕಾಮಗಾರಿ ಮಾಡಬೇಕಾಗಿದೆ. ವಿದೇಶದಲ್ಲಿ ರೊಬೋಟ್‌ಗಳನ್ನು ಅಳವಡಿಸಲಾಗುತ್ತದೆ. ಹಾಗಾಗಿ ಅಲ್ಲಿ ಆಮಿಷಕ್ಕೊಳಗಾಗದೆ
ಕಾರ್ಯಗಳು ಸಾಗುತ್ತವೆ. ನರೇಗಾ ಯೋಜನೆ ತಿರಸ್ಕರಿಸುವ ಅಧಿಕಾರ ಯಾವ ಪಂಚಾಯತ್‌ಗೂ ಇಲ್ಲ ಎಂದರು.

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.