ಸಿಡಿಲು ಬಡಿದು ವರ್ಷ ಸಂದರೂ ದುರಸ್ತಿಯಾಗದ ಕಂದ್ರಪ್ಪಾಡಿ ಶಾಲೆ
Team Udayavani, Apr 4, 2019, 2:16 PM IST
ಗುತ್ತಿಗಾರು : ಬಿರುಕು ಬಿಟ್ಟ ಗೋಡೆ, ದುರಸ್ತಿಯಾಗದೇ ಉಳಿದ ಶೌಚಾಲಯಗಳು, ಸುಟ್ಟು ಹೋದ ವೈರಿಂಗ್, ಒಟ್ಟಾರೆಯಾಗಿ ಮೂಲ ಸೌಕರ್ಯಗಳೇ ಹಾಳಾಗಿರುವ ಈ ಕಟ್ಟಡದಲ್ಲಿ 2018ರ ಲೋಕಸಭಾ ಚುನಾವಣೆಗೆ ಬೂತ್ ನಿರ್ಮಾಣ. ಇದು ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಶಾಲೆಯಲ್ಲಿ ಕಂಡುಬರುವ ದೃಶ್ಯ.
ಮೂಲ ಸೌಕರ್ಯಕ್ಕೆ ಧಕ್ಕೆ
ಈ ಶಾಲೆಯ ಕಟ್ಟಡಕ್ಕೆ ಕಳೆದ ವರ್ಷ ಮೇ 29ರಂದು ಗಾಳಿ- ಮಳೆ ಸುರಿದ ಸಂದರ್ಭದಲ್ಲಿ ಸಿಡಿಲು ಹೊಡೆದಿತ್ತು. ಅದರ ತೀವ್ರತೆಗೆ ಕಟ್ಟಡ, ವೈರಿಂಗ್, ಶೌಚಾಲಯ ಸಹಿತ ಹಲವು ಸೌಕರ್ಯಗಳಿಗೆ ಧಕ್ಕೆಯಾಗಿವೆ. ಅದೇ ಕಟ್ಟಡದಲ್ಲಿ ವರ್ಷವಿಡೀ ಆತಂಕದಲ್ಲೇ ಪಾಠ ಹೇಳಲಾಗಿದೆ.
ಈಗ ಲೋಕಸಭಾ ಚುನಾವಣೆಗೂ ಬೂತ್ ನಿರ್ಮಿಸಲಾಗಿದ್ದು, ಚುನಾವಣೆ ಸಿಬಂದಿ ಕರ್ತವ್ಯ ನಿರ್ವಹಿಸಲು ಅಗತ್ಯ ಸೌಕರ್ಯಗಳನ್ನೂ ಮಾಡಿಕೊಂಡಿಲ್ಲ.
ಮಹಿಳಾ ಸಿಬಂದಿಗೆ ಕಷ್ಟ
ಸಿಡಿಲ ಬಡಿತಕ್ಕೆ ಶಾಲಾ ಶೌಚಾಲಯದ ಬಾಗಿಲುಗಳು ಹಾಳಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಸುಳ್ಯ ವಿಧಾನಸಭಾ ವ್ಯಾಪ್ತಿಯ ಬೂತ್ ನಂ. 160 ಮತ್ತು 161ನ್ನು ಇಲ್ಲಿ ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬಂದಿ ಶೌಚಾಲಯ ಹಾಗೂ ಇತರ ವ್ಯವಸ್ಥೆಗಳಿಲ್ಲದೆ ತೊಂದರೆ ಅನುಭವಿಸುವ ಸಾಧ್ಯತೆ ಇದೆ.
ವೈರಿಂಗ್ ತಾತ್ಕಾಲಿಕ ದುರಸ್ತಿ
ಸಿಡಿಲಿನಿಂದಾಗಿ ಸುಟ್ಟು ಹೋಗಿರುವ ವೈರಿಂಂಗ್ ಅನ್ನು ದೇವಚಳ್ಳ ಗ್ರಾ.ಪಂ. ವತಿಯಿಂದ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಆದರೆ ಕಟ್ಟಡದ ಬಹುತೇಕ ವೈರಿಂಗ್ ಇನ್ನೂ ಅಪಾಯಕಾರಿ ಸ್ಥಿತಿಯಲ್ಲೇ ಇದೆ. ಮತ್ತೆ ಮಳೆಗಾಲ ಸಮೀಪಿಸುತ್ತಿದ್ದು, ಆಗಾಗ ಸಂಜೆ ವೇಳೆ ಸಿಡಿಲು, ಗುಡುಗು ಸಹಿತ ಮಳೆಯಾಗುತ್ತಿದೆ. ಇನ್ನೂ ಕೆಲವು ದಿನ ಶಾಲೆಯೂ ನಡೆಯಲಿದ್ದು, ಅಪಾಯದ ಸಾಧ್ಯತೆ ಇರುವ ಕಾರಣ ತ್ವರಿತವಾಗಿ ದುರಸ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೃಷ್ಣಪ್ರಸಾದ್ ಕೋಲ್ಚಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.