ಹೊಳೆಗೆ ಬಿದ್ದ ಕಾರು ಪ್ರಕರಣ : ನೀರುಪಾಲದ ಯುವಕರಿಬ್ಬರ ಮೃತದೇಹ ಪತ್ತೆ, ಊಹಾಪೋಹಗಳಿಗೆ ತೆರೆ

ಸಿಸಿ ಕೆಮೆರಾ ದೃಶ್ಯ ಆಧರಿಸಿ 3 ದಿನಗಳಿಂದ ನಿರಂತರ ಶೋಧ ಕಾರ್ಯ

Team Udayavani, Jul 12, 2022, 10:27 AM IST

3death

ಕಾಣಿಯೂರು : ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಮಸೀದಿ ಬಳಿ ಕಿರುಸೇತುವೆಯಿಂದ ಶನಿವಾರ ರಾತ್ರಿ ಹೊಳೆಗೆ ಬಿದ್ದ ಕಾರಿನೊಂದಿಗೆ ನೀರು ಪಾಲಾಗಿದ್ದ ಯುವಕರ ಮೃತದೇಹ ಮಂಗಳವಾರ ಪತ್ತೆಯಾಗಿದೆ.

ಬಂಟ್ವಾಳ ತಾಲೂಕಿನ ವಿಟ್ಲಮುಟ್ನೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್‌ (26) ಮತ್ತು ವಿಟ್ಲ ಕನ್ಯಾನ ಕೊಣಲೆ ನಿವಾಸಿ ತನಿಯಪ್ಪ ನಾಯ್ಕ ಅವರ ಪುತ್ರ ಧನು ಯಾನೇ ಧನಂಜಯ (21) ಮೃತಪಟ್ಟವರು.

ಚೋಮ ಅವರಿಗೆ ಧುನುಷ್‌ ಓರ್ವನೇ ಪುತ್ರನಾಗಿದ್ದು, ಹೆತ್ತವರನ್ನು ಅಗಲಿದ್ದಾರೆ. ತನಿಯಪ್ಪ ಅವರ ಮೂವರು ಮಕ್ಕಳಲ್ಲಿ ಧನಂಜಯ ಹಿರಿಯವನಾಗಿದ್ದು, ಹೆತ್ತ ವರು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.

ತಡರಾತ್ರಿ ಅವಘಡ
ಯುವಕರಿಬ್ಬರು ಶನಿವಾರ ತಡರಾತ್ರಿ ಸಾಗುತ್ತಿದ್ದ ಕಾರು ಬೈತಡ್ಕದಲ್ಲಿ ನಿಯಂತ್ರಣ ತಪ್ಪಿ ಸೇತುವೆಯ ತಡೆಬೇಲಿಗೆ ಢಿಕ್ಕಿ ಹೊಡೆದು ತುಂಬಿ ಹರಿಯುತ್ತಿರುವ ಗೌರಿ ಹೊಳೆಗೆ ಬಿದ್ದಿತ್ತು. ಈ ದೃಶ್ಯ ಸಮೀಪದ ಮಸೀದಿಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು ರವಿವಾರ ಮುಂಜಾವ ಘಟನೆ ಬೆಳಕಿಗೆ ಬಂದಿತ್ತು.

ತತ್‌ಕ್ಷಣವೇ ಕಾರು ಹಾಗೂ ಯುವಕರಿಗೆ ಶೋಧ ಆರಂಭಿಸಿದ್ದು, ಮಧ್ಯಾಹ್ನದ ವೇಳೆಗೆ ಕಾರು ಪತ್ತೆಯಾಗಿತ್ತು. ಮುಳುಗು ತಜ್ಞರು, ಅಗ್ನಿಶಾಮಕ ದಳದ ಸಿಬಂದಿ ಸಂಜೆ ಯವರೆಗೆ ಹುಡುಕಾಡಿದರೂ ಯುವಕರು ಪತ್ತೆಯಾಗಿರಲಿಲ್ಲ. ಸೋಮವಾರದ ಕಾರ್ಯಾ ಚರಣೆಯೂ ಫ‌ಲ ನೀಡಿರಲಿಲ್ಲ.ಮಂಗಳವಾರ ಬೆಳಗ್ಗಿನಿಂದ ಮತ್ತೆ ಶೋಧ ಕಾರ್ಯ ಮುಂದುವರಿಸಲಾಗಿತ್ತು.

ಈ ನಡುವೆ ಸೇತುವೆಯಿಂದ 200 ಮೀಟರ್‌ ಕೆಳಗೆ ಮರಕ್ಕಡ ಜೇಡರಕೇರಿಯಲ್ಲಿ ಒಂದು ಮೃತದೇಹ ಇರುವುದು ಸ್ಥಳೀಯ ದಿನೇಶ್‌ ಅವರ ಗಮನಕ್ಕೆ ಬಂದಿತು. ಈಜುಗಾರರಾದ ಜಯಂತ್‌ ಅನವುಮೂಲೆ, ಕೇಶವ ಗೌಡ ಬೈತಡ್ಕ, ಗುತ್ತಿಗಾರಿನ ವಿಪತ್ತು ನಿರ್ವಹಣ ತಂಡದ ಸದಸ್ಯರು ಮೃತದೇಹವನ್ನು ಹಗ್ಗಕಟ್ಟಿ ಮೇಲೆತ್ತಿದರು.

ಸ್ವಲ್ಪ ಸಮಯದಲ್ಲೇ ಅಲ್ಲಿಂದ 10 ಮೀ. ಕೆಳಗೆ ಮತ್ತೂಂದು ದೇಹವೂ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಗಾಗಿ ಪುತ್ತೂರಿಗೆ ಸಾಗಿಸಲಾಯಿತು. ಮೃತರ ಸಂಬಂಧಿ ಗುತ್ತಿಗಾರಿನ ಮನೋಜ್‌ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಹಶೀಲ್ದಾರ್‌ ಅನಂತ ಶಂಕರ್‌, ಕಂದಾಯ ನಿರೀಕ್ಷಕ ಅವಿನ್‌ ರಂಗತ್ತಮಲೆ, ಬೆಳ್ಳಾರೆ ಠಾಣಾಧಿಕಾರಿ ರುಕ್ಮ ನಾಯ್ಕ…, ಬಿಜೆಪಿ ಬೆಳಂದೂರು ಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್‌ ಉದನಡ್ಕ, ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಸದಸ್ಯ ಮೋಹನ್‌ ಅಗಳಿ ಉಪಸ್ಥಿತರಿದ್ದರು.

ವದಂತಿಗಳಿಗೆ ತೆರೆ
ಕಾರು ಹೊಳೆಗೆ ಬಿದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹತ್ತು ಹಲವು ಸಂಶಯ ಊಹಾಪೋಹಗಳು ಎದ್ದಿದ್ದವು. ಸಾಮಾಜಿಕ ಜಾಲ ತಾಣಗಳಲ್ಲಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿದ್ದವು. ಕಾರು ಮಾತ್ರ ಬಿದ್ದಿದೆ ಯುವಕರಿಬ್ಬರು ಪರಾರಿಯಾಗಿ¨ªಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಕಾರಿನಲ್ಲಿ ಬಂದ ಯುವಕರು ಸವಣೂರು ಚೆಕ್‌ ಪೋಸ್ಟಿನಲ್ಲಿ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ನಾವು ಸುಳ್ಯದ ಗುತ್ತಿಗಾರಿಗೆ ಹೋಗುವುದಾಗಿ ಹೇಳಿ ಬಂದಿದ್ದರು. ರಾತ್ರಿ 11.30ರ ವೇಳೆಗೆ ಸವಣೂರು ಮೂಲಕ ಬಂದಿದ್ದ ಯುವಕರು 11.50ರ ವೇಳೆಗೆ ಸಂಬಂಧಿಕರಿಗೆ ಕರೆ ಮಾಡಿ ನಾವು ಉಡುಪಿಯ ಆಲಂಗಾರಿನಲ್ಲಿದ್ದೇವೆ. ನಮ್ಮ ಕಾರಿಗೆ ಲಾರಿಯೊಂದು ಢಿಕ್ಕಿಯಾಗಿ ಬದುಕುಳಿದಿದ್ದೇವೆ ಎಂದು ಸುಳ್ಳು ಹೇಳಿದ್ದರು. ಬಳಿಕ 12.03ಕ್ಕೆ ಕಾರು ಸೇತುವೆಯಿಂದ ಕೆಳಗೆ ಬಿದ್ದಿದೆ. ಈ ಎಲ್ಲ ಕಾರಣಗಳಿಂದ ಕಾರು ಹೊಳೆಗೆ ಬಿದ್ದ ಬಳಿಕ ಅದರಲ್ಲಿದ್ದವರು ಪರಾರಿಯಾಗಿ¨ªಾರೆಯೇ ಎಂಬುದಾಗಿಯೂ ತರ್ಕಿಸಲಾಗಿತ್ತು. ಇನ್ನೊಂದೆಡೆ ಮೂವರು ಕಾರಿನಲ್ಲಿದ್ದು ಅವರು ನೀರು ಪಾಲಾಗಿ¨ªಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಮಧ್ಯೆ ಮೃತರ ಪೈಕಿ ಓರ್ವನ ಮೇಲೆ ಅತ್ಯಾಚಾರ ಪ್ರಕರಣವಿದ್ದು, ಆದ್ದರಿಂದ ಕಾರನ್ನು ಹೊಳೆಗೆ ದೂಡಿ ಹಾಕಿ ತಲೆಮರೆಸಿಕೊಂಡಿ¨ªಾರೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಮೃತ ಧನುಷ್‌ ಈ ಹಿಂದೆ ಯುವಕನೊಬ್ಬನಿಗೆ ಕೊಲೆ ಬೆದರಿಕೆ ಹಾಕಿದ್ದ ಕಾರಣ ಬೆದರಿಕೆ ಇದ್ದ ವ್ಯಕ್ತಿ ಇವರನ್ನು ಕೊಲೆ ಮಾಡಿರಬಹುದು ಎನ್ನುವ ಸುದ್ದಿ ಹಬ್ಬಿತ್ತು. ಬೆದರಿಕೆ ಇದ್ದ ವ್ಯಕ್ತಿಯನ್ನು ಕರೆಸಿ ಪೊಲೀಸರು ವಿಚಾರಣೆ ಮಾಡಿದ್ದರು. ಕೊನೆಗೂ ಇಬ್ಬರ ದೇಹಗಳೂ ಪತ್ತೆಯಾಗುವುದರೊಂದಿಗೆ ವದಂತಿಗಳಿಗೆ ತೆರೆ ಬಿದ್ದಿದೆ.

ಟಾಪ್ ನ್ಯೂಸ್

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.