![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 29, 2018, 1:05 PM IST
ಕಾಣಿಯೂರು: ಪುತ್ತೂರು ಕಾಣಿಯೂರು- ಸುಬ್ರಹ್ಮಣ್ಯ ರಸ್ತೆಯ ಕೆಲವೆಡೆ ಮರಗಳು ರಸ್ತೆ ಬಾಗಿನಿಂತಿದ್ದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.
ಈ ಭಾಗದ ಕೂಡುರಸ್ತೆ, ಕಟ್ಟತ್ತಾರು ಭಾಗದಲ್ಲಿ ರಸ್ತೆ ಬದಿಯ ನೆಡುತೋಪಿನಲ್ಲಿರುವ ಎರಡೂ ಬದಿಯ ಮರಗಳು ಸಂಪೂರ್ಣವಾಗಿ ರಸ್ತೆಗೆ ವಾಲಿ ನಿಂತಿದ್ದು,ಈ ರಸ್ತೆಯ ಮೂಲಕ ದಿನ ನಿತ್ಯ ಹಲವಾರು ವಾಹನಗಳು ತೆರಳುತ್ತಿದ್ದು, ಪ್ರಮುಖ ಯಾತ್ರಸ್ಥಳವಾಗಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇದೇ ರಸ್ತೆಯ ಮೂಲಕ ಯಾತ್ರಿಗಳು ತೆರಳುತ್ತಿದ್ದು, ಮರ ರಸ್ತೆಗೆ ಬಿದ್ದರೆ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇದೆ. ಅಲ್ಲದೆ ವಾಹನ ಚಲಾವಣೆ ವೇಳೆಯೂ ಮರ ಬಿದ್ದರೆ ಹಾನಿಯಾಗುವ ಸಾಧ್ಯತೆಯೂ ಇದೆ.
ಮರಗಳು ವಾಲಿ ನಿಂತಿದೆ
ಇದೇ ರಸ್ತೆಯ ಬೆಳಂದೂರು ಜಂಕ್ಷನ್ ನಲ್ಲಿಯೂ ಅಕೇಶಿಯಾ ಮರಗಳು ರಸ್ತೆಗೆ ವಾಲಿ ನಿಂತಿದ್ದು,ಬೀಳುವ ಅಪಾಯವಿದೆ. ಇಲ್ಲಿನ ಮರಗಳು ಧರಶಾಹಿಯಾದರೆ ವಿದ್ಯುತ್ ಕಂಬಗಳಿಗೂ ಹಾನಿಯಾಗುವ ಸಾಧ್ಯತೆ ಇದೆ. ಈ ಕುರಿತು ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಗಮನಹರಿಸಬೇಕಿದೆ.
ಅಪಾಯ ತಪ್ಪಿಸಿ
ಹೆದ್ದಾರಿ ಬದಿಗಳಲ್ಲಿರುವ ಅಪಾಯಕಾರಿ ಸ್ಥಿತಿಯಲ್ಲಿರುವ ಮರ ಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆ ಗಮನಹರಿಸಿ, ಸಂಭಾವ್ಯ ಅಪಾಯವನ್ನು ತಪ್ಪಿಸಬೇಕಿದೆ ಎಂದು ಚಾರ್ವಾಕ ಪ್ರಾ. ಕೃ.ಪ.ಸ.ಸಂಘ ಕಾಣಿಯೂರು ಅಧ್ಯಕ್ಷರು ಧರ್ಮೇಂದ್ರ ಕಟ್ಟತ್ತಾರು ಆಗ್ರಹಿಸಿದ್ದಾರೆ.
ತೆರವಿಗೆ ಕ್ರಮ
ದ್ದಾರಿಯ ಬದಿಯಲ್ಲಿರುವ ಮರಗಳನ್ನು ಕೂಡಲೇ ತೆರವುಮಾಡಲಾಗುವುದು.ಈ ಕುರಿತು ಈಗಾಗಲೇ ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಶನಿವಾರದೊಳಗೆ ಮರಗಳನ್ನು ಪರಿಶೀಲಿಸಿತೆರವುಗೊಳಿಸಲಾಗುವುದು.
– ಪ್ರಮೋದ್ ಕುಮಾರ್
ಸಹಾಯಕ ಎಂಜಿನಿಯರ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.