ಕಾಣಿಯೂರು ರೈಲ್ವೇ ನಿಲ್ದಾಣಕ್ಕೆ ಮೇಲ್ದರ್ಜೆ ಯೋಗ?

Team Udayavani, Jul 2, 2018, 2:45 AM IST

kaniyur-railway-station-600.jpg

ಕಾಣಿಯೂರು: ಪುತ್ತೂರು ತಾಲೂಕಿನ ಕಾಣಿಯೂರು ರೈಲ್ವೇ ನಿಲ್ದಾಣ ಶೀಘ್ರ ಮೇಲ್ದರ್ಜೆಗೇರಲಿದೆ. ಅರೆಕಾಲಿಕ ಟಿಕೆಟ್‌ ಏಜೆಂಟರು ಕಾರ್ಯ ನಿರ್ವಹಿಸುವ ಈ ರೈಲ್ವೇ ನಿಲ್ದಾಣವನ್ನು ಸ್ಟೇಷನ್‌ ಮಾಸ್ಟರ್‌ ಮತ್ತು ಸಿಗ್ನಲ್‌ ಇರುವ ಪೂರ್ಣ ಪ್ರಮಾಣದ ರೈಲ್ವೇ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸುವಂತೆ ಸ್ಥಳೀಯರ ಬೇಡಿಕೆ ಇತ್ತು. ಒಂದು ವರ್ಷ ಕಾಲ ಈ ರೈಲ್ವೇ ನಿಲ್ದಾಣದಲ್ಲಿ ಟಿಕೆಟ್‌ ಏಜೆಂಟರೇ ಇರಲಿಲ್ಲ! ಎರಡು ತಿಂಗಳ ಹಿಂದಷ್ಟೇ ಟಿಕೆಟ್‌ ಏಜೆಂಟರ ನೇಮಕವಾಗಿದೆ.

ಮಂಗಳೂರು – ಹಾಸನ ರೈಲು ಮಾರ್ಗವು ಮೀಟರ್‌ ಗೇಜ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಫರಂಗಿಪೇಟೆ, ಕಲ್ಲಡ್ಕ, ನೇರಳಕಟ್ಟೆಗಳಲ್ಲಿ ಟಿಕೆಟ್‌ ಏಜೆಂಟ್‌ ರೈಲು ನಿಲ್ದಾಣಗಳಿದ್ದವು. ಬ್ರಾಡ್‌ಗೇಜ್‌ ಗೆ ಪರಿವರ್ತನೆಯಾದ ಬಳಿಕ ಕಲ್ಲಡ್ಕ ಮತ್ತು ಫರಂಗಿಪೇಟೆ ರೈಲು ನಿಲ್ದಾಣಗಳು ರದ್ದುಗೊಂಡವು. ನೇರಳ ಕಟ್ಟೆ ರೈಲು ನಿಲ್ದಾಣವನ್ನು ಸ್ಟೇಷನ್‌ ಮಾಸ್ಟರ್‌ ಮತ್ತು ಸಿಗ್ನಲ್‌ ವ್ಯವಸ್ಥೆ ಇರುವ ಪರಿಪೂರ್ಣ ರೈಲ್ವೇ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಇಲ್ಲಿ ಬೆಂಗಳೂರು ಮತ್ತು ಲೋಕಲ್‌ ರೈಲುಗಳಿಗೆ ನಿಲುಗಡೆ ನೀಡುವಂತೆ ಪ್ರಯಾಣಿಕರಿಂದ ಬೇಡಿಕೆ ವ್ಯಕ್ತವಾಯಿತು. ಅದರಂತೆ ಲೋಕಲ್‌ ರೈಲು ಬಂಡಿಗೆ ನಿಲುಗಡೆ ನೀಡಲಾಯಿತು. ಆದರೆ ಪ್ರಯಾಣಿಕರ ಸ್ಪಂದನ ಇಲ್ಲದ ಹಿನ್ನೆಲೆಯಲ್ಲಿ ಇಲ್ಲಿ ಎಲ್ಲ ರೈಲುಗಳ ನಿಲುಗಡೆ ರದ್ದಾಯಿತು. ಈಗ ನೇರಳಕಟ್ಟೆ ರೈಲು ನಿಲ್ದಾಣ ಕ್ರಾಸಿಂಗ್‌ ನಿಲ್ದಾಣವಾಗಿ ಬಳಕೆಯಾಗುತ್ತಿದೆ.

ಕಾಣಿಯೂರಿಗೆ ಅಗತ್ಯ
ಕಬಕ – ಪುತ್ತೂರು ರೈಲ್ವೇ ನಿಲ್ದಾಣವನ್ನು ಬಿಟ್ಟರೆ ತಾಲೂಕಿನ ಪ್ರಮುಖ ಸ್ಥಳ ಕಾಣಿಯೂರು. ಕಾಣಿಯೂರಿನಲ್ಲಿ ಪೂರ್ಣ ಪ್ರಮಾಣದ ರೈಲು ನಿಲ್ದಾಣವು ನಿರ್ಮಾಣಗೊಂಡರೆ ಈ ಪರಿಸರದ 12 ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ. ಏಕೆಂದರೆ ಕಾಣಿಯೂರು ರೈಲ್ವೇ ನಿಲ್ದಾಣವು ಪಟ್ಟಣದ ಹೃದಯಭಾಗದಲ್ಲಿದೆ. ಪೇಟೆಗೆ ಹೊಂದಿಕೊಂಡಂತೆ ಕೇಂದ್ರಸ್ಥಳದಲ್ಲಿ ಈ ರೈಲು ನಿಲ್ದಾಣ ಇದೆ. ಆದಕಾರಣ ಈ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದರೆ ಪ್ರಯಾಣಿಕರಿಗೂ ಅನುಕೂಲ ರೈಲ್ವೇಗೂ ಆದಾಯ ಬರುತ್ತದೆ.

ಕೇರಳದವರು ಮಾದರಿ
ರೈಲ್ವೇ ಪ್ರಯಾಣಿಕ ಸೇವೆಯನ್ನು ಬಳಸಿಕೊಳ್ಳುವುದರಲ್ಲಿ ಕೇರಳದವರು ಮಾದರಿಯಾಗಿದ್ದಾರೆ. ಕೇರಳದ ಯಾವುದೇ ರೈಲ್ವೇ ನಿಲ್ದಾಣದಲ್ಲೂ ರೈಲು ನಿಲುಗಡೆಯಾದರೆ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಲಭ್ಯರಾಗುತ್ತಾರೆ. ರೈಲ್ವೇ ಸೌಲಭ್ಯವಿರುವ ಕೇರಳದ ಊರಿನ ಜನರು ರಸ್ತೆ ಸಾರಿಗೆಗಿಂತ ರೈಲ್ವೇಯನ್ನೇ ಆಯ್ಕೆ ಮಾಡುತ್ತಾರೆ. ಈ ಕಾರಣದಿಂದಲೇ ಮಂಗಳೂರಿನಿಂದ ಕೇರಳ ಕಡೆಗೆ ತೆರಳುವ ಎಲ್ಲ ರೈಲುಗಳಲ್ಲೂ ಪ್ರಯಾಣಿಕರ ದಟ್ಟಣೆ ಇರುತ್ತದೆ. ಆದರೆ ದ.ಕ. ಜಿಲ್ಲೆಯ ಜನರು ರೈಲ್ವೇ ಪ್ರಯಾಣದ ಅಭ್ಯಾಸವನ್ನು ಹೆಚ್ಚಾಗಿ ರೂಢಿಸಿಕೊಂಡಿಲ್ಲ.

ಸಂಸದರ ಆಸಕ್ತಿ
ಕಾಣಿಯೂರು ರೈಲು ನಿಲ್ದಾಣವನ್ನು ಮತ್ತು ಕಾಣಿಯೂರಿನಲ್ಲಿ ಬೆಂಗಳೂರು ರೈಲಿಗೆ ನಿಲುಗಡೆ ನೀಡುವ ವಿಚಾರದ ಕುರಿತಂತೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಆಸಕ್ತಿ ಹೊಂದಿದ್ದಾರೆ. ಕಾಣಿಯೂರಿನ ಸಾರ್ವಜನಿಕರು ಸುಳ್ಯ ಶಾಸಕ ಎಸ್‌. ಅಂಗಾರ ಮೂಲಕ ಸಂಸದರಿಗೆ ಮನವಿ ನೀಡಿದ್ದರು. ಕಳೆದ ವಾರ ಕಾಣಿಯೂರಿಗೆ ಭೇಟಿ ನೀಡಿದ್ದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕಾಣಿಯೂರು ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಸರಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದ್ದರು. ಅಲ್ಲದೆ ತಾನು ವೈಯಕ್ತಿಕ ಆಸಕ್ತಿ ವಹಿಸಿ ಜನರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.

ಸೇವೆಯ ಬಳಕೆ ಅಗತ್ಯ
ಕೇವಲ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದರೆ ಅಥವಾ ರೈಲುಗಳಿಗೆ ನಿಲುಗಡೆಯನ್ನು ಮಾಡಿಸಿದರಷ್ಟೇ ಸಾಲದು, ರೈಲ್ವೇ ಸೇವೆಯನ್ನು ಬಳಸಿಕೊಳ್ಳಲು ಜನರು ಆರಂಭಿಸಬೇಕು. ಪ್ರಯಾಣಿಕರ ಸ್ಪಂದನವಿಲ್ಲದಿದ್ದರೆ ರೈಲ್ವೇ ಇಲಾಖೆ ರೈಲುಗಳಿಗೆ ನಿಲುಗಡೆ ನೀಡುವುದಿಲ್ಲ. ಒಂದು ರೈಲ್ವೇ ನಿಲ್ದಾಣದಲ್ಲಿ ರೈಲು ನಿಲುಗಡೆಗೊಂಡು ಮತ್ತೆ ಯಾನ ಆರಂಭಿಸುವ ಸಂದರ್ಭ ರೈಲ್ವೇ ಎಂಜಿನ್‌ ಗೆ 150 ಲೀ.ಗೂ ಮಿಕ್ಕಿ ಡೀಸೆಲ್‌ ಬೇಕಾಗುತ್ತದೆ. ಇಷ್ಟು ವೆಚ್ಚವನ್ನು ಮಾಡಿ ಪ್ರಯಾಣಿಕರು ರೈಲು ಹತ್ತದಿದ್ದರೆ ಇಲಾಖೆಗೆ ನಷ್ಟವೇ ಹೊರತು ಯಾವ ಲಾಭವೂ ಇಲ್ಲ.

ಪ್ರಯಾಣಿಕರಿಗೆ ಅನುಕೂಲ
ಕಾಣಿಯೂರು ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದರೆ ಪ್ರಯಾಣಿಕರಿಗೆ ಅನುಕೂಲ. ಮುಂದಿನ ದಿನಗಳಲ್ಲಿ ಎಲ್ಲ ಪ್ರಯಾಣಿಕ ರೈಲುಗಳಿಗೂ ಇಲ್ಲಿ ನಿಲುಗಡೆ ನೀಡುವ ಮೂಲಕ ಗ್ರಾಮಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಆದರೆ ಪ್ರಯಾಣಿಕರು ಕೂಡ ರೈಲ್ವೇ ಸೇವೆಯನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು. 
– ಡಿ.ಕೆ. ಭಟ್‌, ಸಂಚಾಲಕರು, ರೈಲ್ವೇ ಯಾತ್ರಿಕರ ಸಂಘ, ಪುತ್ತೂರು

ಪ್ರಾಮಾಣಿಕ ಪ್ರಯತ್ನ
ಕಾಣಿಯೂರು ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ರೈಲ್ವೇ ಸಚಿವರ ಬಳಿ ಮಾತುಕತೆ ನಡೆಸಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾಣಿಯೂರು ಮತ್ತು ಪರಿಸರದ ಗ್ರಾಮಸ್ಥರು ರೈಲ್ವೇ ಸೌಲಭ್ಯದ ಕುರಿತು ಸಲ್ಲಿಸಿದ ಬೇಡಿಕೆ ನ್ಯಾಯಯುತವಾಗಿದೆ. 
– ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ. ಜಿಲ್ಲೆ

— ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Aranthodu ಕಲ್ಲುಗುಂಡಿ: ಕಾರು ಪಲ್ಟಿ, ನಾಲ್ವರಿಗೆ ಗಾಯ

Aranthodu ಕಲ್ಲುಗುಂಡಿ: ಕಾರು ಪಲ್ಟಿ, ನಾಲ್ವರಿಗೆ ಗಾಯ

1(1

Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !

1-vitla

Vitla: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿ ಪಲ್ಟಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.