ಕೈಗೂಡಿಲ್ಲ ಮರಕ್ಕಡ-ಕಟ್ಟತ್ತಾರು ಕಿಂಡಿ ಅಣೆಕಟ್ಟು ಯೋಜನೆ
Team Udayavani, Jan 15, 2019, 4:56 AM IST
ಕಾಣಿಯೂರು: ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ಕಾೖಮಣ ಗ್ರಾಮದ ಮರಕ್ಕಡ-ಕಟ್ಟತ್ತಾರು ಎನ್ನುವಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಬೇಕೆನ್ನುವ ಈ ಭಾಗದ ಜನತೆಯ ಬೇಡಿಕೆ ಇನ್ನೂ ಈಡೇರಿಲ್ಲ.
ಈ ಭಾಗದ ಜನತೆ ನಿರಂತರವಾಗಿ ಕಳೆದ 28 ವರ್ಷದಿಂದ ಮನವಿ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಆದರೆ ಫಲಿತಾಂಶ ಶೂನ್ಯ. ಈ ಭಾಗದಲ್ಲಿ ಅಣೆಕಟ್ಟು ನಿರ್ಮಾಣವಾದರೆ ಇಲ್ಲಿನ ಕೃಷಿಕರಿಗೆ ತುಂಬಾ ಅನುಕೂಲವಾಗಲಿದೆ. ನೂರಾರು ಎಕ್ರೆ ಕೃಷಿ ಭೂಮಿ ಹಚ್ಚ ಹಸುರಾಗಿ ಕಂಗೊಳಿಸಲಿದೆ.
ಈ ಹಿಂದೆ ಇಲ್ಲಿ ಜೈನರಸರ ಆಳ್ವಿಕೆ ಸಂದರ್ಭದಲ್ಲಿ ಅವರೇ ಅಣೆಕಟ್ಟು ನಿರ್ಮಿಸಿ ಕೃಷಿಕರಿಗೆ ನೆರವಾಗಿದ್ದರು,ಬಳಿಕ ಭೂ ಮಸೂದೆಯಿಂದ ಅವರ ಆಡಳಿತ ನಿಂತ ಮೇಲೆ ಈ ಅಣೆಕಟ್ಟು ಸರಿಯಾದ ನಿರ್ವಹಣೆ ಇಲ್ಲದೆ ನೀರಿನಲ್ಲಿ ಕೊಚ್ಚಿಹೋಗಿತ್ತು. ಅದರ ಕುರುಹುಗಳಿವೆ.
ನಿರಂತರ ಮನವಿ ಸಲ್ಲಿಕೆ
1991 ಡಿ. 15ರಂದು ಊರಿನವರೇ ಸೇರಿ ಬೆಳಂದೂರು ಮಂಡಲ ಪಂಚಾಯತ್‌ನ ಅಧ್ಯಕ್ಷರ ಮೂಲಕ ಸಂಬಂಧಪಟ್ಟವರಿಗೆ ಮೊದಲ ಮನವಿ ಸಲ್ಲಿಸಿದ್ದರು. ಆ ಬಳಿಕ ಪ್ರತೀ ಬಾರಿಯೂ ಶಾಸಕರಿಗೆ, ಸಂಸದರಿಗೆ ನಿರಂತರ ಮನವಿ ನೀಡಲಾಗುತ್ತಿದ್ದರೂ, ಪ್ರಯೋಜನವಾಗಿಲ್ಲ ಎನ್ನುತ್ತಾರೆ ಈ ಭಾಗದ ಜನತೆ.
ಪ್ರಧಾನಿ ಮೋದಿಗೆ ಮೊರೆ
ಮನವಿ ನೀಡಿ ಯಾವುದೇ ಬೆಳವಣಿಗೆಯಾಗದ್ದನ್ನು ಮನಗಂಡು 2017 ಫೆ. 26ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದರು. ಈ ಪರಿಣಾಮ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಯವರು ದ.ಕ.ಜಿ.ಪಂ.ಗೆ ಅನುದಾನ ಬಿಡುಗಡೆ ಮಾಡುವಂತೆ ನಿರ್ದೇಶನವನ್ನು ನೀಡಿದ್ದರು.
ಶಾಸಕರಿಗೆ ವಿವರ ಸಲ್ಲಿಕೆ
ಈ ಎಲ್ಲ ಬೆಳವಣಿಗೆಗಳ ಸವಿವರಗಳನ್ನು ಸುಳ್ಯ ಶಾಸಕರಿಗೆ 2017ರಂದೇ ಸಲ್ಲಿಸಿದ್ದು, ಈವರೆಗೂ ಯಾವುದೇ ಸ್ಪಂದನೆ ಇಲ್ಲ ಎನ್ನುತ್ತಾರೆ ಈ ಭಾಗದವರು. ಶಾಸಕರು ಪ್ರಯತ್ನ ಮಾಡಿದರೆ ಇಲ್ಲಿನ ಜನತೆಯ ಬಹುದಿನಗಳ ಬೇಡಿಕೆ ಈಡೇರುವಂತಾಗುತ್ತದೆ ಎನ್ನುತ್ತಾರೆ ಇಲ್ಲಿನ ಕೃಷಿಕರು.
ಪ್ರಸ್ತಾವನೆ ಸಲ್ಲಿಕೆ
ಮರಕ್ಕಡ-ಕಟ್ಟತ್ತಾರು ಕಿಂಡಿ ಅಣೆಕಟ್ಟು ನಿರ್ಮಾಣ ಕುರಿತ ಕಡತಗಳೊಂದಿಗೆ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆಗೊಂಡು ಅನುದಾನ ಬಿಡುಗಡೆಯಾಗಬೇಕಿದೆ. ಈ ಕುರಿತು ಪ್ರಯತ್ನ ಮಾಡಲಾಗುತ್ತಿದೆ.
-ಎಸ್. ಅಂಗಾರ, ಶಾಸಕರು, ಸುಳ್ಯ
ಆಶಾಭಾವನೆ ನಮ್ಮದು
ಕಳೆದ 28 ವರ್ಷಗಳಿಂದ ನಿರಂತರವಾಗಿ ವಿವಿಧ ಸ್ತರಗಳ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಬೇಡಿಕೆ ಈಡೇರಬಹುದು ಎನ್ನುವ ಆಶಾಭಾವನೆ ನಮ್ಮದು.
-ಸೀತಾರಾಮ ಗೌಡ ಮುಂಡಾಳ,
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.