ನಗರದ ಕೆಲವು ಖಾಸಗಿ ಬಸ್‌ಗಳಲ್ಲಿ ಕನ್ನಡ ಮಾಯ!
ಬಸ್‌ಗಳಲ್ಲಿರುವ ನಾಮಫಲಕದಲ್ಲಿ ಆಂಗ್ಲ ಭಾಷೆಯ ಸ್ಥಳ ಸೂಚಕ ನಮೂದು
Team Udayavani, Nov 9, 2021, 5:30 AM IST
ಮಹಾನಗರ: ಮಂಗಳೂರು ನಗರದಿಂದ ದೂರದ ಊರುಗಳಿಗೆ ತೆರಳುವ ಕೆಲವೊಂದು ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆ ಮಾಯವಾಗುತ್ತಿದೆ. ಬಸ್‌ಗಳಲ್ಲಿರುವ ನಾಮಫಲಕದಲ್ಲಿ ಕನ್ನಡ ಭಾಷೆಯ ಬದಲು ಆಂಗ್ಲ ಭಾಷೆಯ ಸ್ಥಳ ಸೂಚಕ ನಮೂದಾಗುತ್ತಿದ್ದು, ಈ ಕುರಿತು ಸಾರಿಗೆ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.
ಮಂಗಳೂರಿನಿಂದ ಉಡುಪಿ- ಮಣಿಪಾಲಕ್ಕೆ ತೆರಳುವ ಕೆಲವೊಂದು ಖಾಸಗಿ ಬಸ್‌ಗಳಲ್ಲಿ ಊರಿನ ಹೆಸರು ತಿಳಿಸುವ ಫಲಕಗಳಲ್ಲಿ ಕನ್ನಡ ಭಾಷೆ ಮಾಯವಾಗಿದೆ. ಈ ಕುರಿತು ಸಾರಿಗೆ ಇಲಾಖೆ ಅನೇಕ ಬಾರಿ ಸಂಬಂಧ ಪಟ್ಟವರಿಗೆ ಸೂಚನೆ ನೀಡಿದರೂ ಪಾಲನೆಯಾಗುತ್ತಿಲ್ಲ. ಆಂಗ್ಲ ಭಾಷೆ ಅರಿಯದ ಮಂದಿ ಮಂಗಳೂರು ಬಸ್ ನಿಲ್ದಾಣಕ್ಕೆ ಬಂದು ಬಸ್ ಹುಡುಕುವುದು ಕಷ್ಟಸಾಧ್ಯವಾಗಿದೆ.
ಕಾನೂನು ಪಾಲನೆ ಆಗುತ್ತಿಲ್ಲ
ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ,”ನಗರದ ಬಹು ತೇಕ ಖಾಸಗಿ ಬಸ್‌ಗಳಲ್ಲಿ ನಾಮಫಲಕ ಆಂಗ್ಲಭಾಷೆಯಲ್ಲಿದೆ. ಅದರ ಜತೆ ಮನಪಾ ವ್ಯಾಪ್ತಿಯ ಕೆಲವೊಂದು ವ್ಯಾಪಾರ ಮಳಿಗೆಗಳು, ಅಂಗಡಿಗಳು, ಮಾಲ್‌ಗಳಲ್ಲಿ ಆಂಗ್ಲ ಭಾಷೆ ಬಳಕೆ ಮಾಡಲಾಗುತ್ತಿದೆ. ಉದ್ದಿಮೆ ಪರವಾನಿಗೆ ನೀಡುವಾಗ ಸರಕಾರದ ಕಾನೂನಿನಂತೆ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು ಎಂದಿದ್ದರೂ ಕಾನೂನು ಪಾಲನೆ ಆಗುತ್ತಿಲ್ಲ.
ಇದನ್ನೂ ಓದಿ:ದಾಳಿ ಬಗ್ಗೆ ಸುಳಿವು : ಮುಖೇಶ್ ಅಂಬಾನಿ ನಿವಾಸದ ಭದ್ರತೆ ಹೆಚ್ಚಳ
ಇತ್ತೀಚೆಗೆ ಆನ್‌ಲೈನ್‌ನಲ್ಲಿ ಉದ್ದಿಮೆ ಪರವಾನಿಗೆ ನೀಡುತ್ತಿರುವುದರಿಂದ ಆರೋಗ್ಯ ಅಧಿಕಾರಿಗಳಿಗೆ ಹಿಡಿತ ಇಲ್ಲದಂತಾಗಿದೆ. ರೈಲು ನಿಲ್ದಾಣದಲ್ಲಿಯೂ ಕನ್ನಡ ಭಾಷೆಯನ್ನು ಕಡೆಗಣಿಸಲಾಗುತ್ತಿದೆ. ಈ ಕುರಿತಂತೆ ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾಧಿಕಾರಿ, ಮನಪಾ ಆಯುಕ್ತರು, ಸಾರಿಗೆ ಇಲಾಖೆಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದ್ದಾರೆ.
ದಂಡ ಹಾಕುತ್ತೇವೆ
ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆ ಬಳಕೆ ಮಾಡುವುದು ಕಡ್ಡಾಯ. ಕನ್ನಡ ಬಳಕೆ ಮಾಡದ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯಚರಣೆ ನಡೆಸಿ, ನಿಯಮ ಪಾಲಿಸದ ಬಸ್‌ಗಳಿಗೆ ದಂಡ ಹಾಕುತ್ತೇವೆ.
-ಆರ್. ವರ್ಣೇಕರ್, ಮಂಗಳೂರು ಆರ್‌ಟಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.