ಕನ್ಯಾನ: ಕಣ್ಣಿನ ಪೊರೆ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ
Team Udayavani, Jul 5, 2017, 3:50 AM IST
ವಿಟ್ಲ: ಶ್ರೀ ಧರ್ಮ ಚಕ್ರ ಟ್ರಸ್ಟ್, ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ, ಬೆಂಗಳೂರು ಎನ್.ಕೆ. ಇಂಪೆಕ್ಸ್ ಪ್ರಾಯೋಜಕತ್ವದಲ್ಲಿ ಕನ್ಯಾನ ಭಾರತ ಸೇವಾಶ್ರಮದ ಸಹಕಾರದೊಂದಿಗೆ ಕನ್ಯಾನ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ರವಿವಾರ ನಡೆಯಿತು. ಶಿಬಿರವನ್ನು ಮಹಾಜನ ವಿದ್ಯಾಸಂಸ್ಥೆಗಳ ಸಂಚಾಲಕ ಜಯದೇವ ಖಂಡಿಗೆ ಉದ್ಘಾಟಿಸಿದರು. ಕನ್ಯಾನ ಗ್ರಾ. ಪಂ. ಅಧ್ಯಕ್ಷೆ ದೇವಕಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧರ್ಮಚಕ್ರ ಟ್ರಸ್ಟ್ ನ ನೇತ್ರ ತಜ್ಞ ಡಾ| ಆನಂದ, ಆನಂದಾಶ್ರಮ ಸೇವಾ ಟ್ರಸ್ಟ್ ವತಿಯಿಂದ ಶಾಂತರಾಜ್ ಭಾಗವಹಿಸಿ ಮಾಹಿತಿ ನೀಡಿದರು. ಕನ್ಯಾನ ಗ್ರಾ.ಪಂ. ಉಪಾಧ್ಯಕ್ಷ ಕೆ. ಪಿ. ಅಬ್ದುಲ್ ರಹಿಮಾನ್, ಬೆಂಗಳೂರು ಎನ್ ಕೆ. ಇಂಪೆಕ್ಸ್‌ನ ರಾಜಶಂಕರ್ ಎನ್.ಕೆ., ಕನ್ಯಾನ ಭಾರತ ಸೇವಾಶ್ರಮದ ಈಶ್ವರ ಭಟ್ ಮಾತನಾಡಿದರು. 160 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದು, 100ಕ್ಕೂ ಅಧಿಕ ಕನ್ನಡಕ ವಿತರಿಸಲಾಯಿತು.
ಒಡಿಯೂರು ಗ್ರಾಮವಿಕಾಸ ಯೋಜನೆಯ ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ಕೆ.ಪಿ.ರಘುರಾಮ ಶೆಟ್ಟಿ, ಕನ್ಯಾನ ದ.ಕ. ಜಿ. ಪಂ. ಮಾದರಿ ಹಿ. ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಫಝಲ್ ಕೆ.ಪಿ., ಪ್ರಭಾರ ಮುಖ್ಯೋಪಾಧ್ಯಾಯ ಸೂರ್ಯನಾರಾಯಣ ಭಟ್, ಪಂಚಾಯತ್ ಸದಸ್ಯ ಗಣೇಶ್ ಕುಮಾರ್ ನೀರ್ಪಾಜೆ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ನಿಸ್ವಾರ್ಥ ಸೇವೆಗೈಯ್ಯುತ್ತಿರುವ ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಆಡಳಿತಾಧಿಕಾರಿ ಡಾ| ಎಂ. ಶ್ರೀಧರ ಭಟ್ ಮಾವೆ ಅವರನ್ನು ಸಮ್ಮಾನಿಸಲಾಯಿತು. ಕನ್ಯಾನ ಗ್ರಾ. ಪಂ.ಮಾಜಿ ಉಪಾಧ್ಯಕ್ಷ ಎನ್.ಕೆ. ಈಶ್ವರ ಭಟ್ ಸ್ವಾಗತಿಸಿದರು. ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಆಡಳಿತಾಧಿಕಾರಿ ಡಾ| ಎಂ. ಶ್ರೀಧರ ಭಟ್ ಮಾವೆ ಪ್ರಸ್ತಾವನೆಗೈದರು. ಕನ್ಯಾನ ದ.ಕ. ಜಿ.ಪಂ. ಮಾದರಿ ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿಯ ರಾಧಾಕೃಷ್ಣ ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.