ಚಿನ್ನಾಭರಣ ಲೂಟಿದ ಕಥೆ ಕಟ್ಟಿದ: ದೂರುದಾರನೇ ಆರೋಪಿಯಾದ!
Team Udayavani, Mar 27, 2018, 10:55 AM IST
ಮಂಗಳೂರು: ಜಪ್ಪು ಮಹಾಕಾಳಿ ಪಡ್ಪು ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮೆಣಸಿನ ಪುಡಿ ಎರಚಿ 54 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದಾರೆ ಎಂದು ದೂರು ನೀಡಿದ ವ್ಯಕ್ತಿಯನ್ನೇ ಪೊಲೀಸರು ಬಂಧಿಸಿ, ಆತನ ದೂರು ಕಟ್ಟುಕಥೆ ಎಂಬುದನ್ನು ಬಯಲಿಗೆಳೆದಿದ್ದಾರೆ. ಮಾ.21ರಂದು ನಗರದ ರಥಬೀದಿಯಲ್ಲಿ ಚಿನ್ನದ ಕೆಲಸ ಮಾಡಿ ಚಿನ್ನಾಭರಣ ಹಿಡಿದು ಕೊಂಡು ತೊಕ್ಕೊಟ್ಟು ಹಾಜಿ ಜುವೆಲರಿಗೆ ಕೊಡಲು ಹೋಗುತ್ತಿದ್ದಾಗ ಮಹಾಕಾಳಿಪಡ್ಪು ಬಳಿ ಅಪರಿಚಿತರು ಅಡ್ಡಗಟ್ಟಿ ಕಣ್ಣಿಗೆ ಮೆಣಸಿನ ಹುಡಿ ಎರಚಿ ಸುಮಾರು 1,35,000 ರೂ. ಮೌಲ್ಯದ 54 ಗ್ರಾಂ ಚಿನ್ನದ ಗಟ್ಟಿಯನ್ನು ಲೂಟಿ ಮಾಡಿದ್ದಾರೆಂದು ಹರೀಶ್ ಆಚಾರ್ಯ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಮಾ. 22ರಂದು ರಾತ್ರಿ ತಲಪಾಡಿಯ ಕಿನ್ಯಾ ಗ್ರಾಮದ ಕನಕಮುಗೇರಿನಲ್ಲಿರುವ ತನ್ನ “ಕಾಳಿಕಾಂಬಾ ನಿಲಯ’ ಮನೆಗೆ ನುಗ್ಗಿ 1 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ಉಳ್ಳಾಲ ಠಾಣೆಯಲ್ಲೂ ಅವರು ದೂರು ದಾಖಲಿಸಿದ್ದರು. ಈ ಎರಡೂ ಪ್ರಕರಣಗಳ ಬಗ್ಗೆ ಹರೀಶ್ ಆಚಾರ್ಯರನ್ನು ಕೂಲಂಕಷವಾಗಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಸುಳ್ಳು ದೂರು ನೀಡಿರುವುದು ತಿಳಿದು ಬಂತು. ತಾನು ಆರ್ಥಿಕ ನಷ್ಟದಲ್ಲಿದ್ದ ಕಾರಣ ಕಥೆ ಸೃಷ್ಟಿಸಿ ನಾನೇ ಒಡವೆಗಳನ್ನು ಕಳವು ಮಾಡಿದ್ದಾಗಿ ಆತ ಒಪ್ಪಿಕೊಂಡಿರುತ್ತಾನೆ.
ಸ್ವಯಂ ಮೆಣಸಿನ ಪುಡಿ ಎರಚಿಕೊಂಡಿದ್ದ
ತೊಕ್ಕೊಟ್ಟಿನಲ್ಲಿರುವ ಹಾಜಿ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಮಾಲಕರು ನೀಡಿದ್ದ ಚಿನ್ನಾಭರಣದ ಗಟ್ಟಿಯನ್ನು ಕರಗಿಸಿ, ಒಡವೆ ಮಾಡಿ ನೀಡಬೇಕಾಗಿರುವುದರಿಂದ ಹರೀಶ್ ಆಚಾರ್ಯ ತಾನೇ ಕಣ್ಣಿಗೆ ಮೆಣಸಿನ ಹುಡಿ ಎರಚಿಕೊಂಡು ನಾಟಕ ಮಾಡಿದ್ದ.
ಅತ್ತೆ ಮಾವನ ಚಿನ್ನಾಭರಣ ಕದ್ದಿದ್ದ
ಹಾಜಿ ಗೋಲ್ಡ್ ಗೆ ನೀಡಬೇಕಾದ ಚಿನ್ನಾ ಭರಣ ಸರಿದೂಗಿಸಲು ತನ್ನ ಮನೆಗೆ ಬಂದ ಅತ್ತೆ, ಮಾವನ 1ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ತಾನು ಮಾಡಿದ ಕೃತ್ಯವನ್ನು ಮುಚ್ಚಿಸಲು ನಾಟಕವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಸೋಮವಾರ ಕೆ.ಸಿ. ರೋಡ್ ಬಳಿ ಬಂಧಿಸಿ ಆತನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹದಳ ತಂಡ ಈ ಪ್ರಕರಣವನ್ನು ಭೇದಿಸಿದೆ. ಉಳ್ಳಾಲ ಪಿಐ ಗೋಪಿಕೃಷ್ಣ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.