![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 18, 2024, 12:13 AM IST
ಮೂಡುಬಿದಿರೆ: ಭೂ ಅಭಿವೃದ್ಧಿಯ ಹೆಸರಿನಲ್ಲಿ ಕರಿಂಜೆಯ ಪುರಾತನ ಉಳ್ಳಾಲ್ದ ಕೋಟೆ ದೈವಸ್ಥಾನದ ಕಟ್ಟಡದ ಬುಡದವರೆಗೂ ಜೆಸಿಬಿ ಮೂಲಕ ಅಪಾಯಕಾರಿಯಾಗಿ ಅಗೆದು ಹಾಕಿರುವ ಘಟನೆಯಿಂದ ಭಕ್ತರು ಕಂಗಾಲಾಗಿದ್ದಾರೆ. ಈ ಬಗ್ಗೆ ವಿಚಾರಿಸಿದ ಭಕ್ತರ ಜತೆ ಉಡಾಫೆಯಾಗಿ ವರ್ತಿಸಿ ಭಾವನೆಗಳಿಗೆ ಘಾಸಿಗೊಳಿಸಿದ ಘಟನೆ ನಡೆದಿದೆ.
ಏಳೆಂಟು ಶತಮಾನಗಳ ಹಿನ್ನೆಲೆ ಇರುವ ಈ ದೈವಸ್ಥಾನದಲ್ಲಿ ಕೊಡಮಣಿತ್ತಾಯ, ಬ್ರಹ್ಮ ಬೈರ್ದಕಳ, ಮಾಯಿಂದಲೆ ದೇವಿ ಮುಂತಾದ ಶಕ್ತಿಗಳನ್ನು ಇಲ್ಲಿನ ಗ್ರಾಮಸ್ಥರು ಆರಾಧಿಸಿಕೊಂಡು ಬರುತ್ತಿದ್ದಾರೆ.ಹತ್ತಿರದಲ್ಲೇ ಹೊಸಂಗಡಿ ಅರಮನೆಯ (ಹಳೆಯ) ಶಿಥಿಲ ಕಟ್ಟಡವಿದ್ದು ಸುತ್ತಲೂ ಕೃಷಿ ಭೂಮಿ ಇದೆ. ಇದೀಗ ಇಲ್ಲಿ ಭೂ ಅಭಿವೃದ್ಧಿಯ ಕಾಮಗಾರಿ ನಡೆಯುತ್ತಿದ್ದು ದೆ„ವಸ್ಥಾನದ ಕಟ್ಟಡದ ಬದಿ ಜೆಸಿಬಿಯಿಂದ ಅಗೆದು ಹಾಕಲಾಗಿದೆ. ಇದರಿಂದ ಆವರಣ ಗೋಡೆಗೆ ಹಾನಿಯಾಗಿದ್ದು ಅಡುಗೆ ಕೋಣೆ ಸೇರಿ ದೈವಸ್ಥಾನದ ಕಟ್ಟಡಗಳ ಬುಡ ಕುಸಿಯುವ ಅಪಾಯವನ್ನು ಎದುರಿಸುತ್ತಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಹಾಗೂ ಉದ್ಯಮಿ ಕಾರ್ತಿಕ್ ನಡುವೆ ವಾಗ್ವಾದ ನಡೆದಿದೆ. ಉಳ್ಳಾಲ್ದ ಕೋಟೆ ಜಾಗವು ಅರಮನೆಗೆ ಸೇರಿದೆಂದು ಭೂ ಅಭಿವೃದ್ಧಿ ಮಾಡುತ್ತಿರುವವರು ಗ್ರಾಮಸ್ಥರೊಂದಿಗೆ ತಕರಾರು ಎತ್ತಿ, ಹಿರಿಯರ ಜತೆ ಅಗೌರವದಿಂದ ವರ್ತಿಸಿರುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬಂ ಧಿಸಿದಂತೆ ಎರಡೂ ಕಡೆಗಳಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸದ್ಯ ಜೆಸಿಬಿ ಕೆಲಸವನ್ನು ಪೊಲೀಸರು ನಿಲ್ಲಿಸಿದ್ದಾರೆ.
ಜ. 21: ಭಕ್ತರ ಸಭೆ
ಪುರಾತನವಾದ ಈ ದೈವಸ್ಥಾನವನ್ನು ಉಳಿಸುವ ನಿಟ್ಟಿನಲ್ಲಿ ಇದೇ 21ರಂದು ಬೆಳಗ್ಗೆ 10ಕ್ಕೆ ದೈವಸ್ಥಾನದಲ್ಲಿ ಗ್ರಾಮಸ್ಥರ ಸಭೆಯನ್ನು ಕರೆಯಲಾಗಿದೆ ಎಂದು ದೈವಸ್ಥಾನದ ಆಡಳಿತದಾರ ಕರಿಂಜೆಗುತ್ತು ಕೃಷ್ಣರಾಜ ಹೆಗ್ಡೆ ತಿಳಿಸಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.