ಕತ್ತಲಲ್ಲಿ ಕಾರ್ನಾಡು ಕೈಗಾರಿಕಾ ಪ್ರದೇಶ
Team Udayavani, Sep 19, 2018, 10:36 AM IST
ಮೂಲ್ಕಿ : ರಾಜ್ಯ ಸರಕಾರದಿಂದ ಕಾರ್ನಾಡು ಕೈಗಾರಿಕಾ ಪ್ರದೇಶದ ರಸ್ತೆ ಬದಿಯಲ್ಲಿ ಕಾಮಗಾರಿ ಮತ್ತು ದಾರಿದೀಪದ ವ್ಯವಸ್ಥೆಯಲ್ಲಿ ಮಾಡಿರುವ ಎಡವಟ್ಟಿನಿಂದ ರಸ್ತೆಯಲ್ಲಿ ಹೋಗುವವರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.
ರಸ್ತೆಗೆ ಕಳೆದೆರಡು ವರ್ಷಗಳ ಹಿಂದೆ ಅಳವಡಿಸಲಾದ ದಾರಿದೀಪಗಳು ಕೆಟ್ಟುಹೋಗಿದ್ದು ರಸ್ತೆ ಕತ್ತಲೆಯಲ್ಲಿದೆ. ಕಾಮಗಾರಿ ಸಂದರ್ಭದಲ್ಲಿ ಇಲ್ಲಿನ ವಿದ್ಯುತ್ ತಂತಿಗಳನ್ನು ತೆಗೆದು ಹಾಕಿದ್ದು, ಈಗ ಕಾಮಗಾರಿ ನಡೆದ ಅನಂತರ ಮರು ಜೋಡಿಸಲಾಗಿಲ್ಲ. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ದಾರಿದೀಪಗಳನ್ನು ಇಲ್ಲಿಗೆ ಅಳವಡಿಸಲಾಗಿತ್ತು.
ಇದು ಕೈಗಾರಿಕಾ ಪ್ರದೇಶದ ವ್ಯಾಪ್ತಿಯಾದುದರಿಂದ ನಗರ ಪಂಚಾಯತ್ ಯಾವುದೇ ಜವಾಬ್ದಾರಿಯ ನಿರ್ವಹಣೆಯನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿಲ್ಲ. ಈ ಪ್ರದೇಶದ ಉಸ್ತುವಾರಿ ವಹಿಸಿರುವ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ತೀರಾ ಬೇಜವಾಬ್ದಾರಿಯಿಂದ ತನ್ನ ಕಾರ್ಯವೈಖರಿ ನಡೆಸುತ್ತಿರುವುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ.
ಸೂಕ್ತ ಕ್ರಮ
ಕಾರ್ನಾಡು ಕೈಗಾರಿಕಾ ಪ್ರದೇಶದಲ್ಲಿ ಬಹಳಷ್ಟು ಅಭಿವೃದ್ಧಿ ಯೋಜನೆಗಳು ನಡೆದಿವೆ. ರಸ್ತೆ ಬದಿ ಕಾಮಗಾರಿ ಮತ್ತು ದಾರಿದೀಪದ ಅವ್ಯವಸ್ಥೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಮೂಲಕ ವರದಿ ತರಿಸಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು.
– ಕೆ.ಎಸ್.ಕುಮಾರಪ್ಪ, ಡೆಪ್ಯುಟಿ ಡೆವಲಪ್‌ಮೆಂಟ್ ಆಫೀಸರ್
ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ¸ಬೈಕಂಪಾಡಿ
ಪತ್ರ ಬರೆದರೂ ಪ್ರಯೋಜನವಿಲ್ಲ
ಇಲ್ಲಿ ಐದಾರು ಸಾವಿರ ಸಂಖ್ಯೆಯಲ್ಲಿರುವ ಬಡ ಕೂಲಿ ಕಾರ್ಮಿಕರು ಇದೇ ರಸ್ತೆಯ ಮೂಲಕ ನಡೆದುಕೊಂಡು ಹೋಗಬೇಕಾಗಿದೆ. ಕಾಮಗಾರಿ ಸುಸೂತ್ರವಾಗಿ ನಡೆದರೆ ಜನರಿಗೂ ಉಪಯೋಗವಾಗುತ್ತದೆ. ದಾರಿ ದೀಪಗಳು ಬಹಳಷ್ಟು ಸಮಯದಿಂದ ಉರಿಯದೇ ಕೆಟ್ಟು ಹೋಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆದರೂ ಇನ್ನೂ ಸಮಸ್ಯೆ ಪರಿಹಾರವಾಗಿಲ್ಲ.
– ಎನ್. ಜಯ ಶೆಟ್ಟಿ, ಸ್ಥಳೀಯರು
ವಿಶೇಷ ವರದಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.