ಮಂಗಳೂರು ವಿಧಾನಸಭಾ ಕ್ಷೇತ್ರ (ಉಳ್ಳಾಲ)
Team Udayavani, Apr 25, 2018, 9:00 AM IST
ತ್ಯಾಜ್ಯ ವಿಲೇವಾರಿ, ಒಳಚರಂಡಿ, ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ, ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ – ಹೀಗೆ ದಕ್ಷಿಣ ಕನ್ನಡಕ್ಕೂ ಕೇರಳಕ್ಕೂ ಸಂಪರ್ಕದ ಕೊಂಡಿಯಾಗಿರುವ ಈ ಕ್ಷೇತ್ರ ಹಲವು ಆಶೋತ್ತರಗಳನ್ನು ಹೊಂದಿದೆ. ಮಂಗಳೂರು ನಗರದ ವಿಸ್ತರಣೆಯಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಭಾಗದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿವೆ, ಆಸ್ಪತ್ರೆಗಳಿವೆ, ಕೈಗಾರಿಕೆಗಳಿವೆ.
1. ಸಮಗ್ರ ಕುಡಿಯುವ ನೀರು
ಸಮಗ್ರ ಕುಡಿಯುವ ನೀರಿಗೆ ಸಂಬಂಧಿಸಿ ಬೇಡಿಕೆ ಈಡೇರಿಲ್ಲ. ಈ ಬಾರಿ ಹರೇಕಳದಲ್ಲಿ ಡ್ಯಾಂ ನಿರ್ಮಿಸಿ ನೀರು ಸರಬರಾಜು ಯೋಜನೆಗೆ ಅನುಮೋದನೆ ಸಿಕ್ಕಿದ್ದರೂ ಮುಂದಿನ ಸರಕಾರದ ಮೇಲೆ ಈ ಯೋಜನೆ ನಿರ್ಧಾರವಾಗಲಿದೆ.
2. ತ್ಯಾಜ್ಯ ವಿಲೇವಾರಿ, ಒಳಚರಂಡಿ
ತ್ಯಾಜ್ಯ ವಿಲೇವಾರಿ ಪ್ರಮುಖ ಸಮಸ್ಯೆ. ಉಳ್ಳಾಲದಲ್ಲಿ ಒಳಚರಂಡಿ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ. ತ್ಯಾಜ್ಯ ವಿಲೇವಾರಿ ಘಟಕ, ಉಳ್ಳಾಲ, ಕೋಟೆಕಾರು, ಸೋಮೇಶ್ವರದಲ್ಲಿ ಒಳಚರಂಡಿ ನಿರ್ಮಾಣ ಅತೀ ಅವಶ್ಯವಾಗಿದೆ.
3. ತೊಕ್ಕೊಟ್ಟು – ಮೆಲ್ಕಾರ್ ರಸ್ತೆ ವಿಸ್ತರಣೆ
ಉನ್ನತ ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜು ಸೇರಿದಂತೆ ಕೈಗಾರಿಕಾ ವಲಯವನ್ನು ಸಂಪರ್ಕಿಸುವ ತೊಕ್ಕೊಟ್ಟು- ಮೆಲ್ಕಾರ್ ರಸ್ತೆ ಅಗಲ ಅತೀ ಅಗತ್ಯ. ರಸ್ತೆ ಅವ್ಯವಸ್ಥೆಯಿಂದ ದೊಡ್ಡ ಕೈಗಾರಿಕೆಗಳು ಇಲ್ಲಿಗೆ ಬರಲು ಹಿಂದೆ ಸರಿಯುತ್ತಿವೆ.
4. ಪ್ರವಾಸೋದ್ಯಮ
ಸೋಮೇಶ್ವರ, ಉಚ್ಚಿಲ ಮತ್ತು ಉಳ್ಳಾಲದಲ್ಲಿ ಬೀಚ್ ಅಭಿವೃದ್ಧಿ, ಕಲ್ಲಾಪು, ಪಾವೂರು, ಹರೇಕಳ, ಉಳಿಯದಲ್ಲಿ ನೇತ್ರಾವತಿ ನದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದ್ದು, ಸಂಬಂಧಿಸಿದಂತೆ ಯೋಜನೆ ಅಗತ್ಯ.
5. ಅಗ್ನಿಶಾಮಕ ಠಾಣೆ, ಕ್ರೀಡಾಂಗಣ
ಉಳ್ಳಾಲದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ಅತೀ ಅಗತ್ಯ. ಕೊಣಾಜೆಯಲ್ಲಿ ಠಾಣೆ ಸ್ಥಾಪನೆಗೆ ಇನ್ಫೋಸಿಸ್ ಉತ್ಸುಕವಾಗಿದ್ದು, ಆಡಳಿತ ಮುಂದಾಗಬೇಕಾಗಿದೆ. ಉಳ್ಳಾಲದಲ್ಲಿ ಸುಸಜ್ಜಿತ ಕ್ರೀಡಾಂಗಣದ ಬೇಡಿಕೆ ಇನ್ನೂ ಈಡೇರಿಲ್ಲ.
6. ಕಡಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿ
ಉಳ್ಳಾಲದಲ್ಲಿ ಕಡಲ್ಕೊರೆತಕ್ಕೆ ಸಂಬಂಧಿಸಿ ಶಾಶ್ವತ ಕಾಮಗಾರಿ ನಡೆದರೂ ಕೋಟೆಪುರದಿಂದ ಸೋಮೇಶ್ವರ ಉಚ್ಚಿಲದವರೆಗೆ ಕಡಲ್ಕೊರೆತ ಸಮಸ್ಯೆ ಹಾಗೇ ಉಳಿದಿದೆ. ಈ ಪ್ರದೇಶದಲ್ಲಿ ಶಾಶ್ವತ ಕಾಮಗಾರಿ ಅತ್ಯಂತ ಆವಶ್ಯಕವಾಗಿದೆ.
7. ಅಬ್ಬಕ್ಕ ಭವನ ನಿರ್ಮಾಣ
ಉಳ್ಳಾಲದಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಕಳೆದ 10 ವರ್ಷಗಳಿಂದ ಬೇಡಿಕೆಯಿದ್ದರೂ ನಿರ್ಮಾಣವಾಗಿಲ್ಲ. 8 ಕೋಟಿ ರೂ. ವೆಚ್ಚದಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಯೋಜನೆ ರೂಪಿತವಾಗಿದ್ದರೂ ಈವರೆಗೂ ಕಾಮಗಾರಿ ಆರಂಭವಾಗಿಲ್ಲ.
8. ಮಹಿಳಾ, ತಾಂತ್ರಿಕ ಕಾಲೇಜು
ಮಹಿಳಾ ಕಾಲೇಜು ಸ್ಥಾಪನೆ ಈವರೆಗೆ ಆಗಿಲ್ಲ. ಇದರೊಂದಿಗೆ ತಾಂತ್ರಿಕ ವಿದ್ಯಾಲಯ (ಐಟಿಐ, ಕೆಪಿಟಿ) ಸ್ಥಾಪನೆಗೆ ಬೇಡಿಕೆಯಿದ್ದು, ಸ್ಥಳ ಪರಿಶೀಲನೆ ನಡೆದರೂ ಈವರೆಗೆ ಸ್ಥಾಪನೆಯಾಗಿಲ್ಲ.
9. ತುಂಬೆ ಪ್ರದೇಶಕ್ಕೆ ನೀರಿಲ್ಲ
ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ತುಂಬೆಯಿಂದ ನೀರು ಸರಬರಾಜು ಆದರೂ ಮಂಗಳೂರು ಕ್ಷೇತ್ರದ ತುಂಬೆ, ಪುದು, ಕೊಡ್ಮಾಣ್, ಮೇರೆಮಜಲು ಪ್ರದೇಶಕ್ಕೆ ಕುಡಿಯುವ ನೀರು ಇನ್ನೂ ಸಿಕ್ಕಿಲ್ಲ.
10. ನೇತ್ರಾವತಿ ತೀರ ಹೂಳೆತ್ತುವಿಕೆ
ನೇತ್ರಾವತಿ ನದಿ ತೀರದಲ್ಲಿ ಹೂಳೆತ್ತದೆ ಅಂಬ್ಲಿಮೊಗರು, ಹರೇಕಳ, ಪಾವೂರು ಪ್ರದೇಶಗಳಲ್ಲಿ ಕೃಷಿ ಭೂಮಿ ಬಂಜರು ಬಿದ್ದಿದೆ. ಮಳೆ ನೀರು ಕೃಷಿಭೂಮಿ ಸೇರಿ ಕೃಷಿಗೆ ಅಯೋಗ್ಯವಾಗಿದೆ. ಹೂಳೆತ್ತಿದರೆ ಕೃಷಿ ಕಾರ್ಯಕ್ಕೆ ಪೂರಕವಾಗಬಹುದು.
11. ಗಡಿಯಲ್ಲಿ ಬಸ್ಸುನಿಲ್ದಾಣ, ಶೌಚಾಲಯ
ತಲಪಾಡಿಯಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ ಮತ್ತು ಶೌಚಾಲಯ ಅತೀ ಅಗತ್ಯ. ಪ್ರತಿದಿನ ಸಾವಿರಾರು ಜನ ಈ ಪ್ರದೇಶದಿಂದ ಹಾದು ಹೋಗುತ್ತಿದ್ದು, ತಂಗುದಾಣ ಮತ್ತು ಶೌಚಾಲಯದ ಕೊರತೆಯಿಂದ ಪರದಾಡುವಂತಾಗಿದೆ.
12. ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ
ಉಳ್ಳಾಲ ಮತ್ತು ಮುಡಿಪು ವ್ಯಾಪ್ತಿಯಲ್ಲಿ ಸುಸಜ್ಜಿತ ಮಾರುಕಟ್ಟೆ ಇಲ್ಲ. ಬೆಳೆದ ವಸ್ತುಗಳನ್ನು ಮಂಗಳೂರು ಮಾರುಕಟ್ಟೆಗೆ ಒಯ್ಯುವ ಪರಿಸ್ಥಿತಿ ಇಲ್ಲಿಯ ಜನರದ್ದು. ಸುಸಜ್ಜಿತ ಮಾರುಕಟ್ಟೆ ಈ ಪ್ರದೇಶ ವ್ಯಾವಹಾರಿಕ ಅಭಿವೃದ್ಧಿಗೆ ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.