ಮಂಗಳೂರು ಉತ್ತರ ಶ್ರೀಮಂತ ಕ್ಷೇತ್ರದಲ್ಲಿ ಅಸಮಾಧಾನ!


Team Udayavani, Apr 27, 2018, 8:40 AM IST

MRPL-26-4.jpg

ಮಂಗಳೂರು: ಮಂಗಳೂರು ಉತ್ತರ ನಾಮಾಂಕಿತ ನಿಕಟಪೂರ್ವ ಸುರತ್ಕಲ್‌ ಕ್ಷೇತ್ರ ದೇಶದ ಮಹತ್ವದ ವಿಧಾನಸಭಾ ಕ್ಷೇತ್ರಗಳಲ್ಲೊಂದು ಎಂಬ ಮನ್ನಣೆಗೆ ಪಾತ್ರವಾಗಿದೆ. ಆರ್ಥಿಕ ವ್ಯವಹಾರದ ದೃಷ್ಟಿಕೋನದಲ್ಲಿದು ಅತೀ ಶ್ರೀಮಂತ ಕ್ಷೇತ್ರ ಕೂಡ ಹೌದು!

ಇದಕ್ಕೆ ಕಾರಣ: ದೇಶದ ಅತೀ ಪ್ರಮುಖ ಉದ್ಯಮಗಳಲ್ಲೊಂದಾದ ಎಂಆರ್‌ಪಿಎಲ್‌- ಒಎನ್‌ಜಿಸಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ದೇಶದ ಪ್ರಮುಖ ಬಂದರುಗಳಲ್ಲೊಂದಾದ ನವ ಮಂಗಳೂರು ಬಂದರು ಮಹತ್ವದ ರಸಗೊಬ್ಬರ ಉತ್ಪಾದನಾ ಕೇಂದ್ರವಾದ MCF, ಬೈಕಂಪಾಡಿ ಕೈಗಾರಿಕಾ ಎಸ್ಟೇಟ್‌, ಬಿಎಎಸ್‌ಎಫ್‌, ವಿಶೇಷ ಆರ್ಥಿಕ ವಲಯ, ಭಾಗಶಃ ಮಂಗಳೂರು ಅಂ. ವಿಮಾನ ನಿಲ್ದಾಣ.. ಹೀಗೆ ಎಲ್ಲವೂ ಈ ಕ್ಷೇತ್ರದಲ್ಲಿದೆ. ದೇಶದ ಪ್ರಮುಖ ತಾಂತ್ರಿಕ ಶಿಕ್ಷಣ ಸಂಸ್ಥೆ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕರ್ನಾಟಕ- ಎನ್‌ಐಟಿಕೆ (ಮೊದಲು ಕೆಆರ್‌ಇಸಿ) ಇಲ್ಲಿದೆ. ಇನ್ನು ಧಾರ್ಮಿಕ, ಸಾಂಸ್ಕೃತಿಕ, ಲಲಿತ ಕಲೆ, ಕ್ರೀಡೆ, ಮನೋರಂಜನೆ, ಸಾಮುದ್ರಿಕ ಚಟುವಟಿಕೆ… ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಗಣನೀಯವಾದ ಸಾಧನೆಯ ಪರಂಪರೆ.

ಮಂಗಳೂರು ಉತ್ತರ ಎಂಬ ಹೊಸ ಭೌಗೋಳಿಕ ಸ್ವರೂಪ ಸಹಿತವಾದ ನಾಮಕರಣವನ್ನು 2008ರಲ್ಲಿ ಸುರತ್ಕಲ್‌ ಪಡೆಯಿತು. 1952ರಿಂದ 2004ರ ವರೆಗೆ ಇದು ಸುರತ್ಕಲ್‌ ಕ್ಷೇತ್ರ. ವಿಧಾನಸಭೆಗೆ ಉಪ ಚುನಾವಣೆ ನಡೆದ ರಾಜ್ಯದ ಕೆಲವೇ ಕ್ಷೇತ್ರಗಳಲ್ಲಿ ಸುರತ್ಕಲ್‌ ಕೂಡ ಒಂದು: 1957ರಲ್ಲಿ ಆಯ್ಕೆಯಾದ ಬಿ.ಆರ್‌. ಕರ್ಕೇರ ಅವರು ನಿಧನರಾದ ಹಿನ್ನೆಲೆಯಲ್ಲಿ 1959ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೀನುಗಾರಿಕಾ ಇಲಾಖೆಯ ನಿವೃತ್ತ ನಿರ್ದೇಶಕ ಕೆ. ದೂಮಪ್ಪ ಅವರು ಸ್ಪರ್ಧಿಸಿ ಜಯಿಸಿದರು. ಮುಂದೆ ಅವರು ವಿ.ಪ. ಸದಸ್ಯರೂ ಆಗಿದ್ದರು.

ಸುರತ್ಕಲ್‌-  ಮಂಗಳೂರು ಉತ್ತರ ಕ್ಷೇತ್ರ ಎಲ್ಲಾ ಚುನಾವಣೆಗಳಲ್ಲಿಯೂ ಸ್ವಾರಸ್ಯಕರವಾದ ಕಣವನ್ನು ಹೊಂದಿರುತ್ತದೆ. ದೇಶದ ಪ್ರಮುಖ ಉದ್ಯಮ- ಸಂಸ್ಥೆಗಳವರು ಕೂಡಾ ಇಲ್ಲಿನ ಫಲಿತಾಂಶಕ್ಕೆ ಕುತೂಹಲದಿಂದ ಕಾದಿರುತ್ತಾರೆ. ಹಾಗಾಗಿ ಆಂಗ್ಲ ಮಾಧ್ಯಮಗಳು – This is the consituency of National importance ಎಂದು ವ್ಯಾಖ್ಯಾನಿಸುತ್ತವೆ. ಈ ಕ್ಷೇತ್ರದಲ್ಲಿ ಮಹಾನ್‌ ಮುಂದಾಳುಗಳು, ಹೊಸ ಚಿಂತನೆಯ ಯುವಕರು ಸ್ಪರ್ಧಿಸಿರುವ ಮತ್ತು ಸ್ಪರ್ಧಿಸುತ್ತಿರುವ ಇತಿಹಾಸವಿದೆ. ಈ ವರೆಗಿನ ಉಪಚುನಾವಣೆ ಸಹಿತ 15 ಚುನಾವಣೆಗಳಲ್ಲಿ ಕಾಂಗ್ರೆಸ್‌- 9, ಬಿಜೆಪಿ- 3, ಪ್ರಜಾ ಸೋಶಲಿಸ್ಟ್‌ ಪಾರ್ಟಿ- 2 ಬಾರಿ; ಜನತಾ ಪಾರ್ಟಿ ಒಂದು ಬಾರಿ ಇಲ್ಲಿ ಜಯಿಸಿದೆ.

ಈ ಬಾರಿ ಬಿಜೆಪಿ ಪಾಳಯದಲ್ಲಿ ಒಂದಷ್ಟು ಅಸಮಾಧಾನ ಬಹಿರಂಗವಾಗಿಯೇ ಭುಗಿಲೆದ್ದಿದೆ. ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್‌, ಯುವ ಮುಖಂಡ ಸತ್ಯಜಿತ್‌ಗೆ ಟಿಕೆಟ್‌ ನೀಡಿಲ್ಲ ಎಂಬುದು ಈ ಅಸಮಾಧಾನದ ಮೂಲ ಕಾರಣ. ಮೊದಲು ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಈ ಕ್ಷೇತ್ರ ಈಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಂದಿದೆ.

ಅಂದ ಹಾಗೆ…
ರಾ. ಹೆದ್ದಾರಿ, ವಿಮಾನ ಯಾನ, ಸಮುದ್ರ ಸಂಪರ್ಕ, ಕೊಂಕಣ ರೈಲ್ವೇ ಸಂಪರ್ಕ ಸಹಿತವಾದ ಈ ಕ್ಷೇತ್ರ ಹಲವು ಪ್ರಥಮಗಳನ್ನು ದಾಖಲಿಸಿದೆ: 1959ರಲ್ಲಿ ಉಪ ಚುನಾವಣೆ; ಸ್ವಾತಂತ್ರ್ಯ ಹೋರಾಟಗಾರರಾದ ಬಿ. ಆರ್‌. ಕರ್ಕೇರ, ಡಾ | ಸಂಜೀವನಾಥ ಐಕಳ, ಎಂ. ಲೋಕಯ್ಯ ಶೆಟ್ಟಿ ಗೆಲುವು; ಯಕ್ಷಗಾನ ಕಲಾವಿದರಾದ ಪಿ. ವಿ. ಐತಾಳ್‌, ಕುಂಬ್ಳೆ ಸುಂದರ ರಾವ್‌ ಜಯ; ಕಾರ್ಮಿಕ ನಾಯಕರಾದ ಎನ್‌. ಎಂ. ಅಡ್ಯಂತಾಯ, ಲೋಕಯ್ಯ ಶೆಟ್ಟಿ ಆಯ್ಕೆ; ಸತತ ಎರಡು ಬಾರಿ ಆಯ್ಕೆ ಮತ್ತು ಗರಿಷ್ಠ 70,057 ಮತ ಪಡೆದ ಜೆ. ಕೃಷ್ಣ  ಪಾಲೆಮಾರ್‌; ಸಚಿವರಾದ ಸುಬ್ಬಯ್ಯ ಶೆಟ್ಟಿ , ಪಾಲೆಮಾರ್‌. ಈ ಬಾರಿ ಯಾವ ದಾಖಲೆ? ಕಾದು ನೋಡಬೇಕು!

— ಮನೋಹರ ಪ್ರಸಾದ್‌

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.