ಸೆಕ್ಷನ್ ನಡುವೆಯೂ ಸಂಭ್ರಮ: SP ಭೇಟಿ
Team Udayavani, May 16, 2018, 8:50 AM IST
ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗೆಲುವಿನ ಸುದ್ದಿ ಆಗುತ್ತಿದ್ದಂತೆ ಬಿ.ಸಿ. ರೋಡಿನ ಬಿಜೆಪಿ ಕಚೇರಿ ಎದುರು ಅಪಾರ ಸಂಖ್ಯೆಯಲ್ಲಿ ಯುವ ಕಾರ್ಯಕರ್ತರು, ಅಭಿಮಾನಿಗಳು, ಪಕ್ಷ ನೇತಾರರು ಸೇರಿದ್ದರು. ಬೆಳಗ್ಗೆ 11 ಗಂಟೆ ಬಳಿಕ ಕಚೇರಿಯ ಎದುರು ಡಿಜೆ ಹಾಕಿ ಕುಣಿಯಲು ಆರಂಭಿಸಿದ ಯುವಕರನ್ನು ಪೊಲೀಸರು ತಡೆದುದು ಸ್ವಲ್ಪ ಮಟ್ಟಿನ ಘರ್ಷಣೆಗೆ ಕಾರಣವಾಗಿದ್ದು, ಪೊಲೀಸ್ ಸಿಬಂದಿ, ಗಡಿಭದ್ರತಾ ಪಡೆ ಸಿಬಂದಿ ಜತೆ ತಳ್ಳಾಟವು ನಡೆಯಿತು. ಆದರೆ ಪ್ರಮುಖರು ಮಧ್ಯಪ್ರವೇಶಿಸಿ ಮಾತುಕತೆ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಘಟನೆಯ ಬಳಿಕ ಸ್ಥಳಕ್ಕೆ ಬಂದಿದ್ದ ಎಸ್‌ಪಿ ಡಾ| ರವಿಕಾಂತೇ ಗೌಡ ಡಿಜೆ ಹಾಕಿ ಕುಣಿಯದಂತೆ ಸೂಚಿಸಿದ್ದಲ್ಲದೆ, ಸ್ಥಳದಿಂದ ತೆರಳುವಂತೆ ಆದೇಶಿಸಿದರು. ಕಾರ್ಯಕರ್ತರು ಕದಲದೇ ಇದ್ದಾಗ ಪೊಲೀಸರು, ವಜ್ರ, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಮತ್ತು ಹೆಚ್ಚುವರಿ ಪೊಲೀಸ್ ಸಿಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದರಾದರೂ ಸಂಯಮದಿಂದ ವರ್ತಿಸಿ ಗುಂಪನ್ನು ನಿಧಾನವಾಗಿ ಕರಗುವಂತೆ ಕಳುಹಿಸತೊಡಗಿದ್ದು, ಮಧ್ಯಾಹ್ನ 1 ಗಂಟೆಯ ಬಳಿಕ ಕಾರ್ಯಕರ್ತರ ಗುಂಪು ಚದುರ ತೊಡಗಿತ್ತು.
ಬಿಜೆಪಿ ಅಭ್ಯರ್ಥಿ ರಾಜೇಶ್ ನಾೖಕ್ ಸ್ಥಳಕ್ಕೆ ಬರುವ ತನಕ ತಾವು ಕುಣಿಯುವುದಾಗಿ ಕೆಲವರು ಎಸ್.ಪಿ. ಅವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸಮ್ಮತಿಸಿದ ಎಸ್ಪಿ ಅವರು ಡಿಜೆ ರಹಿತವಾಗಿ ರಸ್ತೆಯಿಂದ ಆಚೆಯ ಬದಿಗೆ ಇರುವುದಕ್ಕೆ ಸೂಚಿಸಿದರು. ಕೊನೆಯಲ್ಲಿ ಸ್ವತಃ ರಾಜೇಶ್ ನಾೖಕ್ ಅವರಿಗೆ ಫೋನಾಯಿಸಿ ಆದಷ್ಟು ಬೇಗ ಸ್ಥಳಕ್ಕೆ ಬರುವಂತೆ ಸೂಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.