Karnataka Bank; ಹಾಲು ಉತ್ಪಾದಕರಿಗೆ ಹಣಕಾಸು ಸೇವೆ
ಡಿಜಿವೃದ್ಧಿ ಸಂಸ್ಥೆ ಜತೆ ಕರ್ಣಾಟಕ ಬ್ಯಾಂಕ್ ಒಪ್ಪಂದ
Team Udayavani, Jan 10, 2024, 12:23 AM IST
ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಕೃಷಿ ಬಂಡವಾಳವನ್ನು ವಿಸ್ತರಿಸಲು ಹಾಗೂ ಹೈನು ಉದ್ಯಮದ ಸರಪಳಿಯಲ್ಲಿ ಆರ್ಥಿಕ ಸೇವೆಯನ್ನು ಎಲ್ಲರಿಗೂ ತಲುಪಿಸುವ ಮಹದುದ್ದೇಶದೊಂದಿಗೆ ಫಿನ್‌ಟೆಕ್ ಸಂಸ್ಥೆ ಡಿಜಿವೃದ್ಧಿ ಸಹಯೋಗದಲ್ಲಿ ಹಲವು ಸೇವೆಗಳನ್ನು ಒದಗಿಸಲಿದೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದೊಂದಿಗೆ (ಕೆಎಂಎಫ್) ಸಂಯೋಜಿತವಾಗಿರುವ ಗ್ರಾಮಾಂತರ ಹಾಗೂ ಇತರ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಈ ಸೇವೆಗಳು ಲಭ್ಯವಾಗಲಿವೆ. ಚಾಮರಾಜನಗರ ಹಾಲು ಒಕ್ಕೂಟಕ್ಕೆ ಸಂಬಂಧಿಸಿದ ಹಾಲಿನ ಸೊಸೈಟಿಗಳಿಗೆ ಪ್ರಸ್ತುತ ಈ ಸೇವೆ ಲಭ್ಯವಾಗಿದೆ ಮತ್ತು ಶೀಘ್ರವಾಗಿ ಇತರ ಎಲ್ಲ ಹೈನು ಒಕ್ಕೂಟಗಳಿಗೆ ವಿಸ್ತರಿಸಲಾಗುವುದು.
ಈ ಕುರಿತು ಮಾತನಾಡಿದ ಬ್ಯಾಂಕ್‌ನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್. ಅವರು ಕರ್ಣಾಟಕ ಬ್ಯಾಂಕ್ ಫಿನ್‌ಟೆಕ್ ಉಪಕ್ರಮಗಳನ್ನು ವೇಗಗೊಳಿಸುತ್ತಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪಾಲುದಾರ ರೊಂದಿಗೆ ಸಹಯೋಗವನ್ನು ಹೆಚ್ಚಿಸುತ್ತಿ ದೆ. ಗ್ರಾಹಕಸ್ನೇಹಿ ನವೀನ ಡಿಜಿಟಲ್ ತಂತ್ರಜ್ಞಾನದೊಂದಿಗೆ ಕರ್ಣಾಟಕ ಬ್ಯಾಂ ಕ್ ಸಮಾಜದ ಎಲ್ಲ ವರ್ಗದ ಜನರನ್ನು ತಲಪುತ್ತಿದೆ. “ಡಿಜಿವೃದ್ಧಿ’ ಸಂಸ್ಥೆಯೊಂದಿಗೆ ನಮ್ಮ ಬ್ಯಾಂಕ್ ಮಾಡಿಕೊಂಡಿರುವ ಒಪ್ಪಂದದಿಂದ ಹೈನು ಮಾರುಕಟ್ಟೆಗಳಿಗೆ ಮತ್ತು ಗ್ರಾಹಕರಿಗೆ ಹಲವಾರು ರೀತಿಯ ಅನುಕೂಲವಾಗಲಿದೆ ಎಂದು ಹೇಳಿದರು.
ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರುಕೃಷಿ ಆಧಾರಿತ ಸಾಲಗಳನ್ನು ನೀಡುವುದ
ರಲ್ಲಿ ಹಾಗೂ ವಿವಿಧ ಬ್ಯಾಂಕಿಂಗ್ ಉತ್ಪನ್ನ ಗಳನ್ನು ಕೃಷಿ ರಂಗಕ್ಕೆ ನೀಡುವುದರಲ್ಲಿ ಕರ್ಣಾಟಕ ಬ್ಯಾಂಕ್ ಪ್ರಾರಂಭದಿಂದಲೂ ಹೆಸರುವಾಸಿ. ನುರಿತ ಕೃಷಿ ಅಧಿಕಾರಿಗಳು ಕರ್ಣಾಟಕ ಬ್ಯಾಂಕಿನ ಗ್ರಾಹಕರಿಗೆ ಸೂಕ್ತ ಬ್ಯಾಂಕಿಂಗ್ ಮಾರ್ಗದರ್ಶನಗಳನ್ನು ನೀಡುತ್ತಿರುವುದಲ್ಲದೆ ಅವರ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸುಲಭಗೊಳಿಸು ತ್ತಿದ್ದಾರೆ. “ಡಿಜಿವೃದ್ಧಿ’ ಸಂಸ್ಥೆಯೊಂದಿಗೆ ನಮ್ಮ ಬ್ಯಾಂಕು ಮಾಡಿಕೊಂಡಿರುವ ಒಪ್ಪಂದದಿಂದ ಎರಡೂ ಸಂಸ್ಥೆಗಳಿಗೂ ಅನುಕೂಲವಾಗಲಿದೆ. ಹೈನುಗಾರಿಕಾ ಕ್ಷೇತ್ರಕ್ಕೆ ನೂತನ ಬ್ಯಾಂಕಿಂಗ್ ಉತ್ಪನ್ನಗಳ ಮೂಲಕ ಕರ್ಣಾಟಕ ಬ್ಯಾಂಕ್ ಇನ್ನಷ್ಟು ನೆರವಾಗಲಿದೆ ಎಂದು ಹೇಳಿದರು.
ಸಹಭಾಗಿತ್ವದ ಕುರಿತು ಮಾತನಾಡಿದ ಡಿಜಿವೃದ್ಧಿ ಸಂಸ್ಥಾಪಕ ಮತ್ತು ಸಿಇಒ ರಾಘವನ್ ವೆಂಕಟೇಶನ್ ಅವರು, ಕರ್ಣಾಟಕ ಬ್ಯಾಂಕ್ ದಕ್ಷಿಣ ಭಾರತದಲ್ಲಿ ನಮ್ಮ ಸಂಸ್ಥೆಯ ಆದ್ಯತೆಯ ಬ್ಯಾಂಕಿಂಗ್ ಪಾಲುದಾರ, ನಮ್ಮ ಡಿಜಿ ಪೇ ಉತ್ಪನ್ನವು ಡೈರಿ ರೈತರಿಗೆ ಪಾವತಿ ಸರಪಳಿಯನ್ನು ಸರಳಗೊಳಿಸುತ್ತದೆ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುವುದು ಸೇರಿದಂತೆ ತಮ್ಮ ಮೂಲಭೂತ ಬ್ಯಾಂಕಿಂಗ್ ಅಗತ್ಯಗಳಿಗೆ ಸಹಾಯ ಮಾಡುತ್ತದೆ. ಅದರಂತೆ “ಡಿಜಿ ಮನಿ’ ಉತ್ಪನ್ನವು ಸಾಲಸೌಲಭ್ಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರೊಂದಿಗೆ ಇನ್ನೂ ನಮ್ಮ ಅನೇಕ ಆರ್ಥಿಕ ಉತ್ಪನ್ನಗಳು ಹೈನುಗಾರಿಕಾ ಉದ್ಯಮಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.