ಕರ್ಣಾಟಕ ಬ್ಯಾಂಕ್ 6,800 ಕೋ.ರೂ. ಕೃಷಿ ಮುಂಗಡ ಗುರಿ
Team Udayavani, Jul 20, 2017, 7:20 AM IST
ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ 6,800 ಕೋಟಿ ರೂ. ಕೃಷಿ ಮುಂಗಡದ ಗುರಿ ಇರಿಸಿಕೊಂಡಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ತಿಳಿಸಿದರು. ಬುಧವಾರ ಇಲ್ಲಿ ಜರಗಿದ ಬ್ಯಾಂಕಿನ ಕೃಷಿ ವ್ಯವಹಾರ ಸಮ್ಮೇಳನದಲ್ಲಿ ಅವರು ಆಶಯ ಭಾಷಣ ಮಾಡಿದರು.
ಈಗಾಗಲೇ ಶೇ. 18ರ ಕೃಷಿ ಮುಂಗಡ ಗುರಿಯನ್ನು ಬ್ಯಾಂಕ್ ಸಾಧಿಸಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಕೃಷಿಕರು- ರೈತರಿಗೆ ಸಕಾಲಿಕ ನೆರವು ಅಗತ್ಯವಿದೆ. ಬ್ಯಾಂಕಿನ ಅಧಿಕಾರಿಗಳು ಈ ಬಗ್ಗೆ ತತ್‌ಕ್ಷಣ ಸ್ಪಂದಿಸುವಂತೆ ಮಹಾಬಲೇಶ್ವರ ಅವರು ಸಲಹೆ ನೀಡಿದರು. ಕೃಷಿಕರು ದೇಶಕ್ಕೆ ಆಹಾರ ಭದ್ರತೆಯನ್ನು ಒದಗಿಸುವವರಾದ್ದರಿಂದ ಅವರ ಹಿತರಕ್ಷಣೆ ಆದ್ಯತೆಯ ಕಾರ್ಯ ಎಂದರು.
ಕೃಷಿ ಮುಂಗಡ, ಕೃಷಿ ಸಂಸ್ಕರಣ ಘಟಕ ಸಹಿತ ಗೋದಾಮು ಸೌಲಭ್ಯ. ಬಿತ್ತನೆ- ಸಾಗಾಟ, ಯಾಂತ್ರಿಕ ಕೃಷಿಗಾರಿಕೆಗೂ ಮುಂಗಡ ನೀಡಬೇಕೆಂದು ಹೇಳಿದರು. ಮಹಾಪ್ರಬಂಧಕ ಮುರಲೀಧರ ಕೃಷ್ಣ ರಾವ್ ಅವರು ಕೃಷಿ ಮುಂಗಡದ ಬಗ್ಗೆ ಮಾರ್ಗದರ್ಶನವಿತ್ತರು.
ಮುಖ್ಯ ಮಹಾಪ್ರಬಂಧಕ ರಾಘವೇಂದ್ರ ಭಟ್ ಎಂ., ಮಹಾಪ್ರಬಂಧಕರಾದ ಚಂದ್ರಶೇಖರ ರಾವ್ ಬಿ., ಸುಭಾಶ್ಚಂದ್ರ ಪುರಾಣಿಕ್, ಬಾಲಚಂದ್ರ ವೈ. ವಿ., ನಾಗರಾಜ ರಾವ್ ಬಿ. ಉಪಸ್ಥಿತರಿದ್ದರು. ಉಪಮಹಾಪ್ರಬಂಧಕ ವಿಜಯ ಶಂಕರ್ ರೈ ಕೆ.ವಿ. ಸ್ವಾಗತಿಸಿದರು. ಮುಖ್ಯ ಪ್ರಬಂಧಕ ವಿಜಯ್ ರಾಘವೇಂದ್ರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.