ಕರ್ಣಾಟಕ ಬ್ಯಾಂಕ್ ಸಾಮಾಜಿಕ ಮಾಧ್ಯಮ ಜಾಲತಾಣ ಪ್ರವೇಶ
Team Udayavani, Aug 17, 2017, 6:40 AM IST
ಮಂಗಳೂರು: ಕರ್ಣಾಟಕ ಬ್ಯಾಂಕ್ ಈಗ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗಳಲ್ಲಿ ತನ್ನ ಅಧಿಕೃತ ಪೇಜ್ ತೆರೆಯುವ ಮೂಲಕ ಸಾಮಾಜಿಕ ಜಾಲತಾಣ ಮಾಧ್ಯಮಗಳನ್ನು ಪ್ರವೇಶಿಸಿದೆ. ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಅಧಿಕೃತ ಸಂಪರ್ಕ: @karnatakabank ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಆ. 16ರಂದು ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ. ಎಸ್. ಅವರು ಈ ಬಗ್ಗೆ ಚಾಲನೆ ನೀಡಿದರು. “ಸಾಮಾಜಿಕ ಮಾಧ್ಯಮ ಜಾಲತಾಣಗಳು ಪರಸ್ಪರ ಸಂಪರ್ಕಕ್ಕೆ ಹೊಸ ಆಯಾಮ ನೀಡಿವೆ.
ಯುವಜನತೆ ಈ ನಿಟ್ಟಿನಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ. ಬ್ಯಾಂಕಿನ ಗ್ರಾಹಕರು ಈ ಜಾಲತಾಣಗಳೊಂದಿಗೆ ಸಂಪರ್ಕ ಹೊಂದಿ ಮಾಹಿತಿ ಪಡೆಯಬಹುದು’ ಎಂದವರು ವಿವರಿಸಿದರು.