ಕಾರವಾರ-ಬೆಂಗಳೂರು : ರಾತ್ರಿ ರೈಲಿನ ಮಾರ್ಗ ಬದಲಾವಣೆಗೆ ಆಗ್ರಹ
Team Udayavani, Apr 15, 2017, 3:04 PM IST
ಮಂಗಳೂರು: ಬೆಂಗಳೂರು-ಕಾರವಾರ ರಾತ್ರಿ ರೈಲು ಅನ್ನು ಮೈಸೂರಿನಿಂದ ಹೊರಟು ಬೆಂಗಳೂರು-ಹಾಸನ ಮಾರ್ಗವಾಗಿ ಕಾರವಾರಕ್ಕೆನೇರ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಬದಲಾಯಿಸ ಬೇಕು ಎಂದು ಹಂಪಿಯಲ್ಲಿ ಜೈಭಾರ್ಗವ ಬಳಗ ಆಶ್ರಯದಲ್ಲಿ ನಡೆದ ಕರಾವಳಿ ಭಾಗದ ಜನರ ಸಭೆ ಆಗ್ರಹಿಸಿದೆ.
ಪ್ರಸ್ತುತ ಈ ರೈಲು ಬೆಂಗಳೂರಿನಿಂದ ಹೊರಟು ಮೈಸೂರು ಮಾರ್ಗವಾಗಿ ಕಾರವಾರಕ್ಕೆ ಸುತ್ತಿಬಳಸಿ ಸಂಚರಿಸುತ್ತಿರುವುದರಿಂದ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಅದರ ಬದಲು ಈ ರೈಲು ಮೈಸೂರಿನಿಂದ ಹೊರಟು ಬೆಂಗಳೂರು ಮೂಲಕ ಕುಣಿಗಲ್-ಹಾಸನ ಮಾರ್ಗವಾಗಿ ಕಾರವಾರಕ್ಕೆ ಸಂಚರಿಸಿದರೆ ಕರಾವಳಿ ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಮೈಸೂರು, ಬೆಂಗಳೂರಿ ನಿಂದ ನೇರವಾಗಿ ಮಂಗಳೂರಿಗೆ ರೈಲುಸಂಪರ್ಕ ಕೂಡ ದೊರೆಯಲಿವೆ. ಹೀಗಾಗಿ ಪ್ರಸ್ತುತ ಸಂಚರಿಸುತ್ತಿರುವ ಬೆಂಗಳೂರು-ಕಾರವಾರ ರಾತ್ರಿ ರೈಲಿನ ಮಾರ್ಗಬದಲಾವಣೆ ಮಾಡುವಂತೆ ಸಭೆ ಆಗ್ರಹಿಸಿದೆ.
ಕುಡ್ಲ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಸ್ತುತ ಇರುವ ರೈಲುಗಳ ಸಂಚಾರ, ಆಗಬೇಕಾದ ಬದಲಾವಣೆಗಳು ಹಾಗೂ ಬೇಡಿಕೆಗಳ ಈಡೇರಿಕೆಗೆ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಿತು. ಎ. 9ರಂದು ಉದ್ಘಾಟನೆಗೊಂಡ ಹಗಲು ಸಂಚಾರದ ಕುಡ್ಲ ಎಕ್ಸ್‌ಪ್ರೆಸ್ ರೈಲು ಕಾರವಾರದ ವರೆಗೆ ವಿಸ್ತರಣೆಗೊಳ್ಳಬೇಕು, ಆ ಮೂಲಕ ಸಮಸ್ತ ಕರಾವಳಿಗರಿಗೂ ರಾಜ್ಯ ರಾಜಧಾನಿಯೊಂದಿಗೆ ಬೆಸೆಯಲು ಸುಲಭ ಸಾಧ್ಯವಾಗಬೇಕು, ಕುಡ್ಲ ಎಕ್ಸ್‌ಪ್ರೆಸ್ ಹಗಲು ಸಮಯದ ಬದಲಿಗೆ ರಾತ್ರಿ ಸಂಚರಿಸುವ ರೈಲಾಗಬೇಕು, ಬೆಂಗಳೂರಿನಿಂದ ಕರಾವಳಿಗೆ ರಾತ್ರಿ ರೈಲು ಬೇಕು ಮೊದಲಾದ ಬೇಡಿಕೆಗಳು ಸಭೆಯಲ್ಲಿ ವ್ಯಕ್ತವಾಯಿತು.
ಬೇಡಿಕೆಗಳ ಈಡೇರಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುವುದು, ರೈಲ್ವೇ ಸಚಿವಾಲ ಯಕ್ಕೆ, ರೈಲ್ವೇ ಸಚಿವರಿಗೆ ಟ್ವೀಟ್ ಮೂಲಕ ಬೇಡಿಕೆ ಮಂಡಿಸುವುದು, ವಿವಿಧ ಸಂಘಟನೆಗಳ ಜತೆ ಚರ್ಚಿಸಿ ಅವರ ಬೆಂಬಲ ಪಡೆದುಕೊಳ್ಳುವುದು, ಕೇಂದ್ರ ಸಚಿವರನ್ನು ಭೇಟಿಯಾಗಿ ಬೇಡಿಕೆಯನ್ನು ಅವರಿಗೆ ವಿವರಿಸಿ ಮನವರಿಕೆ ಮಾಡುವುದು ಮುಂತಾದ ಕ್ರಮಗಳಿಗೆ ನಿರ್ಧರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.