“ಧಾರ್ಮಿಕ ವಿಚಾರಗಳ ಅರಿವು ಮೂಡಿಸುವ ಕಾರ್ಯವಾಗಲಿ’
Team Udayavani, Feb 22, 2017, 2:49 PM IST
ಆಲಂಕಾರು : ಧಾರ್ಮಿಕ ಪ್ರವಚನಗಳ ಮೂಲಕ ಧರ್ಮ, ಜಾತಿಗಳನ್ನು ಎತ್ತಿಕಟ್ಟುವುದನ್ನು ಬಿಟ್ಟು ಧಾರ್ಮಿಕ ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಗಳಾಗಬೇಕು ಎಂದು ದೈವಗಳ ಮಧ್ಯಸ್ಥ ಅಜಿತ್ ಗೌಡ ಐವರ್ನಾಡು ಹೇಳಿದರು.
ಆಲಂಕಾರು ಗ್ರಾಮದ ಕರ್ತುಟೇಲು ದುಗಲಾಯಿ ಮತ್ತು ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.ಇಂದು ಧಾರ್ಮಿಕ ಪ್ರವಚನದ ಹೆಸರಲ್ಲಿ ಸಮಾಜ ಒಡೆಯುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಈ ಕಾರ್ಯ ನಿಲ್ಲಬೇಕಾದರೆ ಧಾರ್ಮಿಕ ಆಚಾರ ವಿಚಾರಗಳುಳ್ಳ ಚಟುವಟಿಗಳು ಹೆಚ್ಚಾಗಬೇಕು. ದೈವಾರಾಧನೆ ಹಿಂದುಗಳಿಗೆ ಮಾತ್ರ ಸೀಮಿತವಲ್ಲ, ಎಲ್ಲಾ ಧರ್ಮದವರ ಒಗ್ಗಟ್ಟಿನಲ್ಲಿ ನಡೆಯುವುದೇ ದೈವಾರಾಧನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕ ಎಸ್. ಅಂಗಾರ ಅವರು ಮಾತನಾಡಿ, ಧರ್ಮದಲ್ಲಿ ರಾಜಕೀಯ ಬೇಡ ಆದರೆ ರಾಜಕೀಯದಲ್ಲಿ ಧರ್ಮವಿರಲಿ ಎಂದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್, ಆಲಂಕಾರು ಸಿ.ಎ. ಬ್ಯಾಂಕ್‌ನ ಅಧ್ಯಕ್ಷ ರಮೇಶ್ ಉಪ್ಪಂಗಳ, ತಾ.ಪಂ. ಸದಸ್ಯೆ ತಾರಾಕೇಪುಳು, ಆಲಂಕಾರು ಗ್ರಾ.ಪಂ. ಅಧ್ಯಕ್ಷೆ ಸುನಂದಾ ಬಾರ್ಕುಲಿ, ಶರವೂರು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಮಲಾಕ್ಷ ರೈ ಪರಾರಿಗುತ್ತು, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ಬುಡೇರಿಯಾ ಉಳ್ಳಾಲ್ತಿ ಕ್ಷೇತ್ರದ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಆಲಂಕಾರು, ಉಪಸ್ಥಿತರಿದ್ದು ಶುಭ ಹಾರೈಸಿದರು.
ಆಡಳಿತ ಮಂಡಳಿಯ ಗೌರವಾಧ್ಯಕ್ಷ ಜಯಕೀರ್ತಿ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಉಪಸ್ಥಿತರಿದ್ದರು.
ಸಮ್ಮಾನ
ದೈವದ ಕಾರ್ಯದಲ್ಲಿ ಪ್ರಮುಖರಾದ ಆಲಡ್ಕ ದೇವಪ್ಪ ಗೌಡ, ರಾಮಣ್ಣ ಗೌಡರ ಪುತ್ರ ಶೇಖರ ಕಣಿಯ, ಲಿಂಗ ಆಜಿಲರ ಪುತ್ರ ಆನಂತ ಅಜಿಲ (ದೈವದ ಪಾತ್ರಿ), ರಾಮಣ್ಣ ಗೌಡ ಆಯರೆಕೋಡಿ, ಬಟ್ಯ ಅಜಿಲ ಅವರ ಪುತ್ರ ರಾಮು ಅಜಿಲ (ದೈವದ ಪಾತ್ರಿ), ಬಾಬು ಮಡಿವಾಳ, ಜತ್ತಪ್ಪ ಗೌಡ, ಗುತ್ತಿನ ಗುರಿಕಾರ ಜಯಕೀರ್ತಿ ಹೆಗ್ಡೆ, ಹಾಗೂ ದೈವಸ್ಥಾನ ನಿರ್ಮಾಣದ ಕೆಲಸಕ್ಕೆ ಸಹಕರಿಸಿದ ಭಾಸ್ಕರ ಆಚಾರ್ಯ, ಸುಬ್ರಹ್ಮಣ್ಯ ಭಟ್, ಶಂಕರನಾರಾಯಣ ಭಟ್, ಚಂದ್ರಶೇಖರ ಪಟ್ಟೆಮಜಲು, ಸುಂದರ ಗೌಡ, ರಾಮರಾಜ, ಬೇರಿಕೆ, ಕುಂಞಣ್ಣ ಗೌಡ ಆಲಡ್ಕ, ರಮೇಶ್ ಮೇಸಿŒ, ವಸಂತ ಗೌಡ, ನಾಗೇಶ್ ಗೌಡ, ವಸಂತ, ತಿಮ್ಮಪ್ಪ ಮುಗೇರ, ಕೇಶವ ಕೇಪುಳು, ಅನಂತ ಆಚಾರಿ, ಗೋಪಾಲಕೃಷ್ಣ, ಹರೀಶ್‌ಮೇಸ್ತ್ರೀ, ಇವರುಗಳನ್ನು ಶಾಸಕರು ನೆನೆಪಿನ ಕಾಣಿಕೆ ನೀಡಿ ಗೌರವಿಸಿದರು.
ಆಡಳಿತ ಸಮಿತಿಯ ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ, ದಯಾನಂದ ಗೌಡ ಆಲಡ್ಕ ಸ್ವಾಗತಿಸಿದರು. ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ವಂದಿಸಿ ಶಿಕ್ಷಕ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು.
ನರ್ತಕರಿಗೆ ಸಹಾಯ ನೀಡೋಣ
ತಮ್ಮ ಪ್ರತಿಷ್ಠೆಯನ್ನು ಪ್ರದರ್ಶಿಸುವ ಹಿನ್ನೆಲೆಯಲ್ಲಿ ಸುಧಾರಿತ ಧ್ವನಿವರ್ಧಕ, ಸಿಡಿಲಬ್ಬರದ ಸಿಡಿಮದ್ದು ಪ್ರದರ್ಶನದ ಜೊತೆಗೆ ಕಿಲೋ ಮೀಟರ್ ದೂರದವರೆಗೆ ಅಬ್ಬರದ ಲೈಟಿಂಗ್ಸ್ ಮಾಡಿ ಲಕ್ಷಾಂತರ ರೂಪಾಯಿಯ ದುಂದು ವೆಚ್ಚದಲ್ಲಿ ದೈವಗಳ ನರ್ತನೋತ್ಸವವನ್ನು ಮಾಡಿಸುತ್ತಾರೆ. ಆದರೆ ದೈವ ನರ್ತಕರಿಗೆ ಮಾತ್ರ ಬಿಡಿಗಾಸು ನೀಡಿ ಸತಾಯಿಸುತ್ತಾರೆ. ಜೊತೆಗೆ ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯಬೇಕಾದ ನರ್ತನೋತ್ಸವವನ್ನು ಕಾಲಮಿತಿ ಯಕ್ಷಗಾನದಂತೆ ಪ್ರದರ್ಶಿಸಲು ಒತ್ತಡ ಹಾಕುತ್ತಾರೆ. ಇಂತಹ ದುಂದುವೆಚ್ಚದ ಭಕ್ತಿಯನ್ನು ಪ್ರದರ್ಶಿಸುವುದಕ್ಕಿಂತ ದೈವ ನರ್ತಕನಿಗೆ ಸಮರ್ಪಕ ಸಂಬಳದ ಜೊತೆಗೆ ಆತನ ಮಕ್ಕಳ ವಿದ್ಯಾಭ್ಯಾಸ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯಕ್ಕೆ ಸಹಾಯಹಸ್ತವನ್ನು ನೀಡಬೇಕಾಗಿದೆ ಎಂದು ಅಜಿತ್ ಗೌಡ ಐವರ್ನಾಡು ಕರೆ ಅವರು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.