ಕಾಶಿಪಟ್ನ : 14 ಬಾಂಗ್ಲಾ ವಲಸಿಗರ ಬಂಧನ
Team Udayavani, Feb 24, 2017, 3:04 PM IST
ಬೆಳ್ತಂಗಡಿ : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿಪಟ್ನದಲ್ಲಿ 14 ಮಂದಿ ಬಾಂಗ್ಲಾ ವಲಸಿಗ ಅಕ್ರಮ ನಿವಾಸಿಗರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾ ದೇಶದಿಂದ ಯಾವುದೇ ರಹದಾರಿ ಹೊಂದದೆ, ಯಾವುದೋ ರೀತಿಯಲ್ಲಿ ನುಸುಳಿ ಭಾರತಕ್ಕೆ ಬಂದು ಅನಧಿಕೃತವಾಗಿ ಭಾರತ ದೇಶದಲ್ಲಿದ್ದು ಬೆಳ್ತಂಗಡಿ ತಾಲೂಕು, ಕಾಶಿಪಟ್ನ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸದಲ್ಲಿ ತೊಡಗಿದ್ದ 14 ಮಂದಿ ಬಾಂಗ್ಲಾ ದೇಶದವರನ್ನು ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಡಿವೈಎಸ್‌ಪಿ ರವೀಶ್ ಅವರ ನೇತೃತ್ವದಲ್ಲಿ, ಸಿಪಿಐ ನಾಗೇಶ್ ಕದ್ರಿ , ವೇಣೂರು ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಎಸ್. ಶೀನಪ್ಪ ಗೌಡ ರವರು ಸಿಬಂದಿಗಳಾದ ಎಎಸ್‌ಐ ಓಡಿಯಪ್ಪ ಗೌಡ, ಅಶೋಕ ಸಪಲ್ಯ, ಶಿವರಾಮ, ಹರೀಶ್ ನಾಯ್ಕ, ರೋಹಿನಾಥ್ ರವರೊಂದಿಗೆ ತೆರಳಿ ಬಂಧಿಸಿದ್ದಾರೆ.
ಬಾಂಗ್ಲಾ ದೇಶದ ಢಾಕಾ ರಾಜ್ಯದ ರಾಜಸೈ ಎಂಬಲ್ಲಿಯವರಾದ ಮಹಮ್ಮದ್ ಜಹಾಂಗೀರ್ (26), ಅಬ್ದುಲ್ ಹಾಕಿಂ (25), ಮಹಮ್ಮದ್ ಆಲಂಗೀರ್ (27), ಅಬ್ದುಲ್ ಹಾಲಿಂ (19), ಎಮ್.ಡಿ ಮಹಮ್ಮದ್ ಅಜೀಜಲ್É (19), ಎಮ್. ಡಿ. ಬಾಬು (20), ಜೋಹರುಲ್É ಇಸ್ಲಾಂ (24), ಮಹಮ್ಮದ್‌ಸೊಹಿದುಲ್ ಇಸ್ಲಾಂ (30) ಮಹಮ್ಮದ್ ಇಕ್ಬಾಲ್‌ಆಲಿ (19), ಮಹಮ್ಮದ್ ಸೋಹೆಲ್ ರಾಣಾ (19), ಜೋಹರುಲ್ಲಾ ಇಸ್ಲಾಂ (35), ಮಹಮ್ಮದ್ ಸುಮನ್ ಆಲಿ (24), ಮಹಮ್ಮದ್ ಮೋಮಿನ್ (20), ಮಹಮ್ಮದ್ ಪುಲ್ಲಾಲ್ (19) ಹಾಗೂ ಇವರಿಗೆ ಆಶ್ರಯ ನೀಡಿ ಕೆಲಸ ಮಾಡಿಸುತ್ತಿದ್ದ ಸ್ಥಳೀಯ ನಿಸಾರ್ ಅಹಮ್ಮದ್ ಮೂಡಬಿದಿರೆ ಬಂಧಿತರು.
ಜಿಲ್ಲೆಯಲ್ಲಿ ಇಂತಹ ಅಕ್ರಮ ವಲಸಿಗರ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿ ಮುಂಬರುವ ದಿನಗಳಲ್ಲಿ ವಿದೇಶಿ ಅಕ್ರಮ ವಲಸಿಗರ ವಿರುದ್ದ ಸೂಕ್ತ ಕಾನೂನು ಸಮರ ಕೈಗೊಳ್ಳಲಾಗುವುದು. ಜತೆಗೆ ಅಂತಹ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದವರ ವಿರುದ್ಧವೂ ಕಾನೂನು ಕ್ರಮ ಜರಗಿಸಲಾಗುವುದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್. ಜಿ. ಬೊರಸೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.