ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಸಾಂಪ್ರದಾಯಿಕ ಅವಲಕ್ಕಿ ಮೆರುಗು
Team Udayavani, Jan 31, 2020, 10:01 PM IST
ಬ್ರಹ್ಮಕಲಶೋತ್ಸವದ ಪ್ರಯುಕ್ತ ಅವಲಕ್ಕಿ ತಯಾರಿಸಿರುವುದು.
ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರವು ಅನ್ನದಾನಕ್ಕೆ ಪ್ರಸಿದ್ಧಿಯಾದ ಸುಕ್ಷೇತ್ರ ವಾಗಿದೆ. ಬ್ರಹ್ಮಕಲಶೋತ್ಸವದ 10 ದಿನಗಳಲ್ಲಿ ಇಲ್ಲಿಯವರೆಗೆ ಸುಮಾರು ಲಕ್ಷಾಂತರ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ.
ಸುವ್ಯವಸ್ಥಿತ ಭೋಜನಾಲಯ ಮತ್ತು ಸ್ವಯಂ ಸೇವಕರ ಕಾರ್ಯ ನಿರ್ವಹಣೆಯಿಂದ ಅನ್ನದಾನವು ಯಶಸ್ವಿಯಾಗಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಬ್ರಹ್ಮಕಲಶೋತ್ಸವದ ಅನ್ನಪ್ರಸಾದಕ್ಕೆ ಅವಲಕ್ಕಿಯ ತಿಂಡಿ-ತಿನಿಸುಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಬೆಳಗ್ಗೆ, ಸಂಜೆ ಉಪಾಹಾರಕ್ಕೆ ಬಗೆಬಗೆಯ ಅವಲಕ್ಕಿ ತಿಂಡಿಗಳನ್ನು ಮಾಡಲಾಗಿದೆ. ಇದರಲ್ಲಿ ಅವಲಕ್ಕಿ, ಪೊಂಗಲ್, ಬಿಸಿ ಬೆಳೆಬಾತ್, ಉಸ್ಲಿ, ಚಿತ್ರಾನ್ನ, ಕೇಸರಿ ಬಾತ್, ಅವಲಕ್ಕಿ ಒಗ್ಗರಣೆ ಮುಂತಾದವುಗಳು ಭಕ್ತರ ಬಾಯಿ ರುಚಿಯನ್ನು ಹೆಚ್ಚಿಸಿದೆ.
ಶುಕ್ರವಾರ 60 ಸಾವಿರ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ. ರವೆಲಾಡು, ಕಡ್ಲೆ ಪಾಯಸ, ಸಾರು, ಬೂದಿಕುಂಬಳ ಸಾಂಬರ್, ತೊಂಡೆ, ಕಡ್ಲೆ ಪಲ್ಯ, ಮುಲಂಗಿ ಪಲ್ಯ,ಉಪ್ಪಿನಕಾಯಿ ಮಾಡಲಾಗಿತ್ತು. ಪಲ್ಯ ತಯಾರಿಗೆ 12 ಮಂದಿ, ಅಡುಗೆಗೆ 20 ಮಂದಿ, ನೈವೇದ್ಯಕ್ಕೆ 25 ಮಂದಿ ಅಡುಗೆಯವರು ದಿನಾ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 80 ಮಂದಿ ಅಡುಗೆಯವರು ಭಾಗಿಯಾಗುತ್ತಾರೆ.
ಬಹ್ಮಕಲಶೋತ್ಸವಕ್ಕೆ 20 ಸಾವಿರದ ಕಡಾಯಿ ಪಾತ್ರೆಗಳನ್ನು ಉಪಯೋಗಿಸಲಾಗಿದೆ. ನಾಗ ಮಂಡಲೋತ್ಸವಕ್ಕೆ 2 ಲಕ್ಷ ಜನರು ಬರುವ ಸಂಭವವಿದ್ದು ಇದಕ್ಕಾಗಿ 20 ಸಾವಿರದ ದೊಡ್ಡ ಕಡಾಯಿ ಪಾತ್ರೆಗಳನ್ನು ಉಪಯೋಗಿಸಲು ಯೋಚಿಸಲಾಗಿದೆ. ದಿನನಿತ್ಯ ಅಡುಗೆಗೆ 15 ಸಾವಿರದ ಪಾತ್ರೆಗಳನ್ನು ಉಪಯೋಗಿಸಲಾಗಿತ್ತು.
ಉಪಾಹಾರಕ್ಕೆ 432 ಗೋಣಿ ಅವಲಕ್ಕಿ
ಬ್ರಹ್ಮಕಲಶೋತ್ಸವದ 10 ದಿನಗಳಲ್ಲಿ ಉಪಾಹಾರಕ್ಕೆ 432 ಗೋಣಿ ಅವಲಕ್ಕಿ, 23 ಕ್ವಿಂಟಲ್ ಬೆಲ್ಲ, 6,400 ತೆಂಗಿನ ಕಾಯಿಯನ್ನು ಉಪಯೋಗಿಸಲಾಗಿದೆ. 8 ಮಂದಿ ತಿಂಡಿ ಮಾಡುವವರು. ನಿರಂತರವಾಗಿ ಬೆಳಗ್ಗೆ 5.30ರಿಂದ ರಾತ್ರಿ 2.30ರ ವರೆಗೆ ತಿಂಡಿ ಮಾಡುವದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶನಿವಾರ ಜರಗುವ ನಾಗಮಂ ಡಲೋತ್ಸವಕ್ಕೆ 10 ಸಾವಿರ ಮಂದಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಸೆಟ್ ದೋಸೆ, ಗಸಿ, ಅವಲಕ್ಕಿ ಮಸಾಲೆ, ಖಾರ ಪೊಂಗಲ್ ಮಾಡಲಾಗಿದೆ. ಸಂಜೆ ಅವಲಕ್ಕಿ ಒಗ್ಗರಣೆ, ಗೋಳಿ ಬಜೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.