ಕಟೀಲು ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಲೋಕಾರ್ಪಣೆ
Team Udayavani, Apr 30, 2019, 6:34 AM IST
ಕಟೀಲು: ಆರ್ಥಿಕವಾಗಿ ಕಷ್ಟ ದಲ್ಲಿರುವವರಿಗೆ ಸ್ಪಂದಿಸುವುದಕ್ಕಿಂತ ದೊಡ್ಡ ಪೂಜೆ ದೇವರಿಗೆ ಬೇರೆ ಇಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಕಟೀಲು ಆಸುಪಾಸಿನ 20 ಗ್ರಾಮದ ಜನರಿಗಾಗಿ ನಿರ್ಮಾಣಗೊಂಡ 100
ಬೆಡ್‌ಗಳ ಸೂಪರ್ ಸ್ಪೆಷಾಲಿಟಿ ದುರ್ಗಾಸಂಜೀವನಿ ಮಣಿಪಾಲ್ ಆಸ್ಪತ್ರೆಯನ್ನು ಶ್ರೀಪಾದರು ಸೋಮವಾರ ಲೋಕಾರ್ಪಣೆಗೈದು ಮಣಿಪಾಲ ಆಸ್ಪತ್ರೆಗೆ ಹಸ್ತಾಂತರಿಸಿ ಆಶೀರ್ವಚನ ನೀಡಿದರು.
ಕಟೀಲು ದುರ್ಗೆ ಹಾಗೂ ಶ್ರೀಕೃಷ್ಣ ದೇವರ ಅನುಗ್ರಹದಿಂದ ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಉತ್ತಮ ರೀತಿಯ ಸೇವೆ ಮೂಲಕ ಯಶಸ್ಸು ಗಳಿಸಲೆಂದು ಸ್ವಾಮೀಜಿಯವರು ಶುಭ ಹಾರೆÂಸಿದರು.
ಮಣಿಪಾಲ ಸಂಸ್ಥೆ ನಿರ್ವಹಣೆ
ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಆರೋಗ್ಯ ರಕ್ಷಣೆ ಅತೀ ಮುಖ್ಯ. ಕಟೀಲಿನ ಆಸ್ಪತ್ರೆಯ ನಿರ್ವಹಣೆಯನ್ನು ಮಣಿಪಾಲ ಸಂಸ್ಥೆ ನಡೆಸಲಿದೆ. ಈಗಾಗಲೇ ಐವರು ವೈದ್ಯರ ನೇಮಕವಾಗಿದ್ದು 3 ತಿಂಗಳೊಳಗೆ ಆಸ್ಪತ್ರೆ ಕಾರ್ಯಾರಂಭಿಸಲಿದೆ ಎಂದರು.
25 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಿದ ಮೂಲತಃ ಕಟೀಲಿನ ಮುಂಬಯಿಯ ಸಂಜೀವನಿ ಸಂಸ್ಥೆಯ ಅಧ್ಯಕ್ಷ ಡಾ| ಕೆ. ಸುರೇಶ್ ರಾವ್, ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮೊಕ್ತೇಸರ ಸನತ್ ಕುಮಾರ ಶೆಟ್ಟಿ ಕೊಡೆತ್ತೂರುಗುತ್ತು ಶುಭಾಶಂಸನೆಗೈದರು.
ಕೆಎಂಸಿಯ ನಿರ್ದೇಶಕ ಡಾ| ರಂಜನ್ ಪೈ, ವೈದ್ಯಕೀಯ ಅಧೀಕ್ಷಕ ಡಾ| ಆನಂದ ವೇಣುಗೋಪಾಲ್, ಶ್ರೀಮತಿ ಸುರೇಶ್ ರಾವ್, ಡಾ| ಕಲ್ಲಡ್ಕ ಪ್ರಭಾಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಕಟೀಲು ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರ್ತಿ, ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಐಕಳ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಸಮ್ಮಾನ
ಗುತ್ತಿಗೆದಾರ ದಿವಾಕರ ಕೋಟ್ಯಾನ್, ಆರ್ಕಿಟೆಕ್ಟ್ ಸಾಧನಾ ಕಾಮತ್, ಆಸ್ಪತ್ರೆಗೆ ಜಾಗ ನೀಡಿದ ಅಶೋಕ್ ಆಳ್ವ, ಕ್ಯಾಪ್ಟನ್ ಬೆಳ್ಳಿಯಪ್ಪ, ಕಿಶೋರ್ ಕಾಮತ್, ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಮತ್ತು ತಿಮ್ಮಪ್ಪ ಕೋಟ್ಯಾನ್ ಅವರನ್ನು ಗೌರವಿಸಲಾಯಿತು.
ಶ್ರಿ ಹರಿನಾರಾಯಣ ದಾಸ ಆಸ್ರಣ್ಣರು ಸ್ವಾಗತಿಸಿ, ಪತ್ರಕರ್ತ ಮನೋಹರ್ ಪ್ರಸಾದ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.