15 ದಿನಗಳ ಒಳಗೆ ಕಟೀಲು ಮೇಳದ ಇಬ್ಬರ ಅಗಲುವಿಕೆ: ಪಟ್ಲ ಸತೀಶ್ ಶೆಟ್ಟಿ ಖೇದ
ಪರಿಸ್ಥಿತಿ, ವಾತಾವರಣದ ದೋಷವೂ ಇರಬಹುದು....ಕಲಾವಿದರು ಜಾಗರೂಕರಾಗಿರಬೇಕು
Team Udayavani, Dec 24, 2022, 5:25 PM IST
ಮಂಗಳೂರು : 15 ದಿನಗಳ ಒಳಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಇಬ್ಬರ ಅಗಲುವಿಕೆ ತೀವ್ರ ನೋವು ತಂದಿದೆ ಎಂದು ಖ್ಯಾತ ಭಾಗವತ, ಪಟ್ಲ ಫೌಂಡೇಶನ್ ನ ಪಟ್ಲ ಸತೀಶ್ ಶೆಟ್ಟಿ ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ ‘ಬಹಳ ಬೇಸರದ ವಿಷಯ ಕಲಾವಿದನಿಗೆ ಒಳ್ಳೆಯ ಮರಣವಾದರೂ ಹೀಗೆ ಆಗಬಾರದು ಎಂದು ಆಶಿಸುತ್ತೇನೆ. ಪರಿಸ್ಥಿತಿ, ವಾತಾವರಣದ ದೋಷವೂ ಇರಬಹುದು. ಮುಂಚೆ ಇಂತಹ ಘಟನೆಗಳು ಇಷ್ಟು ಪಕ್ಕ ಪಕ್ಕನೆ ಕಟೀಲು ಮೇಳದಲ್ಲಿ ಆಗಿರಲಿಲ್ಲ, 15 ದಿನಗಳ ಒಳಗೆ ಇಬ್ಬರು ಸಾವನ್ನಪ್ಪಿದ್ದಾರೆ. ಯಾವ ಮೇಳ ಅನ್ನುವುದು ಮುಖ್ಯವಲ್ಲ. ಹಿಂದೆ ಯಕ್ಷಗಾನ ರಂಗದಲ್ಲಿ ಹಿರಿಯ ಕಲಾವಿದರಾದ ಶಂಭು ಹೆಗಡೆ, ಗೇರು ಕಟ್ಟೆ ಗಂಗಯ್ಯ ಶೆಟ್ಟಿ ಸೇರಿ ಅನೇಕ ಕಲಾವಿದರು ಇದೆ ರೀತಿ ಮರಣವನ್ನಪ್ಪಿದ್ದರು’ ಎಂದರು.
‘ಕಲಾವಿದರು ಜಾಗರೂಕರಾಗಿ ತಮ್ಮ ಕಲಾ ಪ್ರೌಢಿಮೆ ತೋರಬೇಕು. ಕಲಾವಿದರಿಗೆ ಒತ್ತಡಗಳೂ ಇರಬಹುದು. ಒತ್ತಡಗಳನ್ನೂ ಕಡಿಮೆ ಮಾಡಬೇಕು ಎಂದು ನನ್ನ ವಿನಮ್ರ ಮನವಿ. ಆರೋಗ್ಯದಲ್ಲಿ ಏನಾದರೂ ಏರು ಪೇರಾದರೂ ಕೂಡಲೇ ವೈದ್ಯರಲ್ಲಿ ಪರೀಕ್ಷಿಸಬೇಕು. ಸರಕಾರ ಕೂಡ ಕಲಾವಿದರ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡುತ್ತೇನೆ’ ಎಂದರು.
‘ಸೌಕೂರು ಮೇಳದ ಇಬ್ಬರು ಕಲಾವಿದರು ಅಪಘಾತಕ್ಕೆ ಬಲಿಯಾಗಿದ್ದರು.ಅವರಿಗೆ ನಮ್ಮ ಫೌಂಡೇಶನ್ ನೆರವಿನಿಂದ 8 ಲಕ್ಷ ರೂ. ವಿಮೆಯನ್ನು ನೀಡಿದ್ದೆವು ಎಂದರು.
7 ವರ್ಷ ದಿಂದ 8.5 ಕೋಟಿ ರೂ. ಸಹಾಯ ಧನವನ್ನು ದಾನಿಗಳ ನೆರವಿನಿಂದ ನಮ್ಮ ಫೌಂಡೇಶನ್ ವತಿಯಿಂದ ಯಕ್ಷಗಾನ, ಭೂತಾರಾಧನೆ ಮತ್ತು ನಾಟಕ ರಂಗದ ಕಲಾವಿದರಿಗೆ ನೀಡಿದ್ದೇವೆ ಎಂದರು.
ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು (58) ಅವರು ಗುರುವಾರ (ಡಿ.22) ರಾತ್ರಿ ಕಟೀಲಿನ ಸರಸ್ವತಿ ಸದನದಲ್ಲಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭದಲ್ಲಿ ರಂಗಸ್ಥಳದಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಡಿ. 5 ರಂದು ಕಟೀಲು ಐದನೇ ಮೇಳದ ಚೌಕಿ ಸಹಾಯಕ ಮಣಿನಾಲ್ಕೂರು ಗ್ರಾಮದ ಕೊಡಂಗೆ ನಿವಾಸಿ ಅಚ್ಯುತ ನಾಯಕ್ ( 45) ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.