![Rashmika-Mandanna-2](https://www.udayavani.com/wp-content/uploads/2024/12/Rashmika-Mandanna-2-415x292.jpg)
Kateel Mela: ಯಕ್ಷಗಾನ ಸದ್ಯಕ್ಕೆ ಕಾಲಮಿತಿಯಲ್ಲೇ ಮುಂದುವರಿಕೆ
Team Udayavani, Jan 13, 2024, 11:23 PM IST
![Kateel Mela: ಯಕ್ಷಗಾನ ಸದ್ಯಕ್ಕೆ ಕಾಲಮಿತಿಯಲ್ಲೇ ಮುಂದುವರಿಕೆ](https://www.udayavani.com/wp-content/uploads/2024/01/kateel-1-620x435.jpg)
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿಯ ಆರೂ ಮೇಳಗಳೂ ಕಾಲಮಿತಿಯಲ್ಲಿಯೇ ಸದ್ಯ ಯಕ್ಷಗಾನ ಪ್ರದರ್ಶನ ಮುಂದುವರಿಸಲಿವೆ.
ಜ. 14ರಿಂದ ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶಿಸುವ ಪದ್ಧತಿಗೆ ಮರಳುತ್ತಿರುವುದಾಗಿ ಕೆಲವು ದಿನಗಳ ಹಿಂದೆ ದೇವಸ್ಥಾನದ ಆಡಳಿತ ಸಮಿತಿ ಪ್ರಕಟನೆ ನೀಡಿತ್ತು. ಆದರೆ ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್ ಯಕ್ಷಗಾನವನ್ನು ರಾತ್ರಿ ಇಡೀ ಪ್ರದರ್ಶಿಸುವಾಗ ಶಬ್ದಮಾಲಿನ್ಯ ನಿಯಮಾವಳಿ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳ ಅಂಶವನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು ಎಂದು ಜ. 10ರಂದು ಆದೇಶ ಹೊರಡಿಸಿದ್ದರು.
ರಾತ್ರಿ ಪೂರ್ತಿ ಯಕ್ಷಗಾನ ನಡೆಸುವಾಗ ಧ್ವನಿವರ್ಧಕ ಬಳಕೆಯಾದರೆ ಶಬ್ದಮಾಲಿನ್ಯ ಉಂಟಾ ಗುವ ಸಾಧ್ಯತೆ ಇದೆ ಎಂದು ಕಲಾವಿದರೂ ಯಕ್ಷಾಭಿಮಾನಿಗಳೂ ಭೀತಿ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಮೇಳದ ಕೆಲವು ಕಲಾವಿದರೂ ಕಾಲಮಿತಿ ಪದ್ಧತಿಯನ್ನೇ ಮುಂದು ವರಿಸಬೇಕು ಎಂದು ಆಡಳಿತ ಸಮಿತಿಗೆ ಮನವಿ ಮಾಡಿದ್ದರು. ಈ ನಡುವೆ ಜ. 14ರಿಂದ ಪೂರ್ಣ ರಾತ್ರಿ ಆಟ ನಡೆಸುವುದೇ ಎಂದು ನಿರ್ಧರಿಸಿದ್ದ ಆಡಳಿತ ಮಂಡಳಿ ಸದ್ಯಕ್ಕೆ ಯೋಚನೆ ಕೈಬಿಟ್ಟಿದೆ.
ಕಾನೂನು ಸಲಹೆ ಪಡೆಯಲು ನಿರ್ಧಾರ
ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳ ಆದೇಶದ ಅಂಶವನ್ನೊಳಗೊಂಡಂತೆ ಯಕ್ಷಗಾನ ಇಡೀ ರಾತ್ರಿ ಪ್ರದರ್ಶನದ ಬಗ್ಗೆ ಕಾನೂನು ಸಲಹೆಗಾರರ ಮೊರೆಹೋಗಲು ನಿರ್ಧರಿಸಲಾಗಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಉದಯವಾಣಿಗೆ ತಿಳಿಸಿದ್ದಾರೆ.
ಇನ್ನು ಒಂದು ವಾರ ಅಥವಾ 10 ದಿನಗಳಲ್ಲಿ ನಮ್ಮ ವಕೀಲರು ಕಾನೂನು ಸಲಹೆ ನೀಡುವ ನಿರೀಕ್ಷೆ ಇದೆ. ಅಲ್ಲಿಯವರೆಗೆ ಈಗಿನಂತೆ ಕಾಲಮಿತಿಯಲ್ಲಿಯೇ ಆಟಗಳು ಮುಂದುವರಿಯುತ್ತವೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
![Rashmika-Mandanna-2](https://www.udayavani.com/wp-content/uploads/2024/12/Rashmika-Mandanna-2-415x292.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ](https://www.udayavani.com/wp-content/uploads/2024/12/1-33-150x90.jpg)
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
![Rashmika-Mandanna-2](https://www.udayavani.com/wp-content/uploads/2024/12/Rashmika-Mandanna-2-150x106.jpg)
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
![2-mng](https://www.udayavani.com/wp-content/uploads/2024/12/2-mng-150x90.jpg)
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
![1-eqeeqwe](https://www.udayavani.com/wp-content/uploads/2024/12/1-eqeeqwe-150x89.jpg)
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
![1-shirva](https://www.udayavani.com/wp-content/uploads/2024/12/1-shirva-150x90.jpg)
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.