ಕಟೀಲು: 200 ಮಕ್ಕಳ ವಿದ್ಯಾರಂಭ
Team Udayavani, Oct 1, 2017, 12:44 PM IST
ಕಟೀಲು: ಪುರಾಣ ಪ್ರಸಿದ್ಧ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸಂಭ್ರಮ ದೊಂದಿಗೆ ಸಂಪನ್ನಗೊಂಡಿತು.
ವಿಜಯದಶಮಿ ಅಂಗವಾಗಿ ಶನಿವಾರ ದೇವಳದಲ್ಲಿ ಎಳೆಯ ಮಕ್ಕಳಿಗೆ ವಿದ್ಯಾರಂಭ ಸಂಸ್ಕಾರ ವಿಶೇಷವಾಗಿ ನಡೆಯಿತು. ಸುಮಾರು 200ರಷ್ಟು ಮಕ್ಕಳು ವಿದ್ಯಾರಂಭ ಪ್ರಾರಂಭಿಸಿದರು. ವಿಜಯ ದಶಮಿ ದಿನ ಮಕ್ಕಳಿಗೆ ದೇವರ ಸನ್ನಿಧಿಯಲ್ಲಿ ವಿದ್ಯಾರಂಭ ಪ್ರಾರಂಭಿಸಿದರೆ ಸರಸ್ವತಿಯ ಅನುಗ್ರಹವಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ವಿಜಯ ದಶಮಿಯನ್ನು ವಿದ್ಯಾ ದಶಮಿ ಎಂದೂ ಕರೆಯುದುಂಟು. ಮಕ್ಕಳ ಕೈಯಲ್ಲಿ ಅರಶಿಣ ತುಂಡಿನ ಮೂಲಕ ಬೆಳ್ತಿಗೆ ಅಕ್ಕಿಯಲ್ಲಿ ಬರೆಸುವ ಮೂಲಕ ಅಕ್ಷರಾಭ್ಯಾಸ ಪ್ರಾರಂಭಿಸಲಾಗುತ್ತದೆ.
8,307 ಹೂವಿನ ಪೂಜೆ
ಮಹಾನವಮಿಯ ದಿನವಾದ ಶುಕ್ರ ವಾರ ದಾಖಲೆಯ ಸಂಖ್ಯೆ ಅಂದರೆ 8,307 ಹೂವಿನ ಪೂಜೆಗಳು ನಡೆದರೆ, 2,213ರಷ್ಟು ವಾಹನ ಪೂಜೆ ನಡೆದವು. ಮಹಾನವಮಿ ಪ್ರಯುಕ್ತ ಭಕ್ತರಿಗೆ ಮೂಡೆ ಪ್ರಸಾದದ ಊಟ ಬಡಿಸಲಾಯಿತು. 12 ಮುಡಿ ಉದ್ದು, 36 ಮುಡಿ ಅಕ್ಕಿ ಹಿಟ್ಟನ್ನು ರುಬ್ಬಿ ದೋಣಿಯಲ್ಲಿಟ್ಟು ಮೂಡೆ
ಮಾಡಿ ವಿತರಿಸಲಾಯಿತು. ದೇವರಿಗೆ ರಾತ್ರಿ ಮುನ್ನೂರಕ್ಕೂ ಹೆಚ್ಚು ವಿವಿಧ ಆರತಿಗಳಿಂದ ಪೂಜೆ ನಡೆಯಿತು. ಇದರಲ್ಲಿ ಚಿನ್ನದ ಕೊಡ, ಬೆಳ್ಳಿಯ ವೈವಿಧ್ಯಮಯ ಆರತಿಗಳಿದ್ದವು.
ವಾಹನ ಪೂಜೆ, ಊಟದ ವ್ಯವಸ್ಥೆಯಲ್ಲೂ ಗೊಂದಲ ಕಡಿಮೆಯಾಗಿಸುವಲ್ಲಿ ಈ ಬಾರಿ ದೇಗುಲದ ಆಡಳಿತ ಮಂಡಳಿ ಹಾಗೂ ಸ್ವಯಂಸೇವಕರಾಗಿ ಬಂದ ಶಾಲಾ ವಿದ್ಯಾರ್ಥಿಗಳು, ಸ್ಥಳೀಯ ಚಾಲಕರು, ಸಂಘಸಂಸ್ಥೆಗಳ ಸದಸ್ಯರ ಪ್ರಯತ್ನ ಶ್ಲಾಘನೆಗೆ ಪಾತ್ರವಾಗಿದೆ.
25 ಸಾವಿರದಷ್ಟು ಶ್ರೀ ದೇವರ ಶೇಷವಸ್ತ್ರವನ್ನು ಭಕ್ತರಿಗೆ ವಿತರಿಸಲಾಗಿದೆ. ದಿನಂಪ್ರತಿ ವಿಶೇಷ ಚಂಡಿಕಾಹೋಮ ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.