ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ
Team Udayavani, Nov 5, 2017, 11:44 AM IST
ಕಟೀಲು: ಮಕ್ಕಳನ್ನು ಯಕ್ಷಗಾನ ರಂಗದಲ್ಲಿ ರೂಪಿಸುವ ಮೂಲಕ ಆಶಾದಾಯಕ ವಾತಾವರಣ ನಿರ್ಮಿಸುತ್ತಿರುವ ಅನೇಕ ಮಕ್ಕಳ ಮೇಳಗಳಲ್ಲಿ ಕಟೀಲಿನ ಶ್ರೀದುರ್ಗಾ ಮಕ್ಕಳ ಮೇಳ ಶ್ರೇಷ್ಠವಾದುದು ಎಂದು ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಆಡಳಿತ ಮೊಕ್ತೇಸರ ಪಿ. ಕಿಶನ್ ಹೆಗ್ಡೆ ಎಂದು ಹೇಳಿದರು.
ಅವರು ನ. 4 ರಂದು ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ವಾರ್ಷಿಕ ಕಲಾಪರ್ವ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ವಾರ್ಷಿಕ ಕಲಾಪರ್ವ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಅರ್ಚಕರಾದ ಕೆ ಲಕ್ಷ್ಮೀನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ್‌ಆಸ್ರಣ್ಣ ಶುಭ ಹಾರೈಸಿದರು. ಉದ್ಯಮಿ ರಾಮಚಂದ್ರ ಭಟ್ ಕಾವೂರು ಉದ್ಘಾಟಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷ ಧರ್ಮ ಬೋಧಿನಿ ಚಾರಿಟೆಬಲ್ ಟ್ರಸ್ಟ್‌ನ ಪ್ರಾಯೋಜಕತ್ವದ ಶ್ರೀ ದುರ್ಗಾ ಮಕ್ಕಳ ಮೇಳ ಪ್ರಶಸ್ತಿಯನ್ನು ಕಟೀಲು ಮೇಳದ ಹಿರಿಯ ಕಲಾವಿದ ಕೈರಂಗಳ ಕೃಷ್ಣ ಮೂಲ್ಯರಿಗೆ ನೀಡಿ ಗೌರವಿಸಲಾಯಿತು.
ಉದ್ಯಮಿಗಳಾದ ಹೆಜಮಾಡಿ ಪ್ರೇಮನಾಥ ಶೆಟ್ಟಿ, ಪೆರ್ಮುದೆ ಶೇಖರ ಶೆಟ್ಟಿ, ಪೆರ್ಮುದೆ ಯಾದವ ಕೋಟ್ಯಾನ್, ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಹಾಪ್ರಬಂಧಕ ರತ್ನಾಕರ ಶೆಟ್ಟಿಯವರು ಗುರುವಂದನೆ ನಡೆಸಿಕೊಟ್ಟರು. ನಿವೃತ್ತ ಯಕ್ಷಗಾನ ಕಲಾವಿದ ಮಹಾಬಲ ಶೆಟ್ಟಿ ಪಟ್ಲ ಗುತ್ತು ಅವರನ್ನು ಸಮ್ಮಾನಿಸಲಾಯಿತು. ಉದ್ಯಮಿ ಬಿ.ಡಿ. ರಾಮಚಂದ್ರ ಆಚಾರ್ಯ, ತಾಲೂಕು ಪಂಚಾಯತ್ ಸದಸ್ಯ ಸುಕುಮಾರ್ ಸನಿಲ್, ಬಿ. ಸುದೇಶ್ ಕುಮಾರ್ ರೈ ಮುಂಬಯಿ, ಸುಧೀರ್ ಕುಮಾರ್ ಶೆಟ್ಟಿ, ಕಲಾಪೋಷಕ ಪ್ರದೀಪ ತಳವಾರ್‌ದಾಮಸ್‌ಕಟ್ಟೆ, ಉದ್ಯಮಿ ಲೋಕಯ್ಯ ಸಾಲ್ಯಾನ್, ಮುಂಬಯಿಯ ಎಚ್. ಬಿ. ಎಲ್. ರಾವ್, ಉದ್ಯಮಿ ಜೆ.ಸಿ. ಕುಮಾರ್, ನೀಲೇಶ್ ಶೆಟ್ಟಿಗಾರ್, ಕಟೀಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರಿ¤, ಟ್ರಸ್ಟಿಗಳಾದ ರಾಘವೇಂದ್ರ ಆಚಾರ್ಯ ಬಜೆಪೆ, ಪಶುಪತಿ ಶಾಸ್ತ್ರಿ, ದಯಾನಂದ ಮಾಡ, ರಾಜೇಶ್ ಐ., ಕೃಷ್ಣ ಕೆ. ಮತ್ತಿತರರು ಉಪಸ್ಥಿತರಿದ್ದರು. ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ
ಶ್ರೀ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಕಾರ್ಯದರ್ಶಿ ವಾಸುದೇವ ಶೆಣೈ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.