ಸಾವಿರ ಸೀಮೆಯ ಆದಿಮಾಯೆಗೆ ಬ್ರಹ್ಮಕಲಶದ ಸಂಭ್ರಮ; ಭ್ರಮರಾಂಬೆ ಸನ್ನಿಧಾನ ಪುಷ್ಪಾಲಂಕೃತ


Team Udayavani, Jan 30, 2020, 11:14 PM IST

youth-33

ಕಟೀಲು/ಮಂಗಳೂರು: ಜಗವನ್ನೇ ಪೊರೆಯುವ ಮಹಾಮಾತೆ, ಶಿಷ್ಟರ ರಕ್ಷಕಿ- ದುಷ್ಟ ಸಂಹಾರಿ, ಬೇಡಿದ ಭಕ್ತರ ಮನದಾಸೆ ಪೂರೈ ಸುವ ಕಾರುಣ್ಯನಿಧಿ; ನಂದಿನಿ ನದಿಯ ಮಡಿಲಲ್ಲಿ ಪವಡಿಸಿರುವ ಆದಿಮಾಯೆ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಗುರುವಾರ ಬ್ರಹ್ಮಕಲಶದ ಸಂಭ್ರಮ. ಸಾವಿರ ಸೀಮೆಯ ಆದಿ ಮಾಯೆಗೆ ನಡೆಯುವ ಬ್ರಹ್ಮಕಲಶದ ಪುಣ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಸೇರಿದ ಭ್ರಮರಾಂಬಿಕೆಯ ಭಕ್ತ ಸಮೂಹ.

ಕಳೆದ ಎಂಟು ದಿನಗಳಿಂದ ವಿವಿಧ ವಿಶೇಷ ಪೂಜಾದಿ ಸೇವಾ ಕಾರ್ಯಗಳೊಂದಿಗೆ ಶ್ರೀ ಕ್ಷೇತ್ರ ಕಟೀಲಿನಲ್ಲಿ ಗುರುವಾರ ನಡೆದ ಬ್ರಹ್ಮಕಲಶೋತ್ಸವಕ್ಕೆ ಕರಾವಳಿ ಹಾಗೂ ರಾಜ್ಯ-ಹೊರ ರಾಜ್ಯದ ಸಾವಿರಾರು ಜನರು ಸಾಕ್ಷಿಯಾದರು. ಮುಂಜಾನೆಯಿಂದ ರಾತ್ರಿಯವರೆಗೆ ಕಟೀಲಿನ ಯಾವ ಭಾಗದಲ್ಲಿ ನೋಡಿದರೂ ಜನಜಾತ್ರೆಯೇ ಕಂಡುಬಂತು. ತಾಯಿ ಭ್ರಾಮರಿಯ ಪುಣ್ಯ ಕಾರ್ಯವನ್ನು ಕಣ್ತುಂಬಿಸಿಕೊಳ್ಳುವ ಮಹದಾಸೆಯಿಂದ ಕ್ಷೇತ್ರ ದರ್ಶನ ಮಾಡಿದರು. ಒಂದೆಡೆ ವೈದಿಕ ಹಾಗೂ ಧಾರ್ಮಿಕ ವಿಧಾನಗಳ ಮುಖೇನ ತಾಯಿಯ ಬ್ರಹ್ಮಕಲಶದ ಸಡಗರ ನೆರವೇರಿದರೆ, ಇನ್ನೊಂದೆಡೆ ಸಹಸ್ರ ಸಂಖ್ಯೆಯ ಭಕ್ತರಿಗೆ ಅನ್ನದಾನದ ಮಹಾಸೇವೆ, ಮತ್ತೂಂದೆಡೆ ಸಾಂಸ್ಕೃತಿಕ ರಸದೌತಣ, ಮಗದೊಂದು ಕಡೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ಜರಗಿದವು.

1001 ಬೆಳ್ಳಿ ಕಲಶಗಳಿಂದ ಅಭಿಷೇಕ
ಪ್ರಧಾನ ಸ್ವರ್ಣ ಕಲಶ ಸಹಿತ 1,001 ಬೆಳ್ಳಿಯ ಕಲಶಗಳಿಂದ ಕಟೀಲಿನ ತಾಯಿಗೆ ಬ್ರಹ್ಮಕಲಶಾಭಿಷೇಕ ನೆರವೇರಿತು. ಕಲಶ ಮಂಡಲ ಪೂಜೆಯ ವೇಳೆ ಪ್ರಧಾನ ಸ್ವರ್ಣ ಕಲಶವನ್ನು ಮಂಡಲದ ಮಧ್ಯೆ ಪ್ರತಿಷ್ಠಾಪಿಸಲಾಯಿತು. 24 ದೊಡ್ಡ ಗಾತ್ರದ ಬೆಳ್ಳಿಯ ಖಂಡ ಕಲಶಗಳು ಹಾಗೂ 976 ಬೆಳ್ಳಿಯ ಸಣ್ಣ ಕಲಶಗಳನ್ನು ಮಂಡಲದಲ್ಲಿ ಇರಿಸಿ ಪೂಜಿಸಿ ಅನಂತರ ದೇವಿಗೆ ಅಭಿಷೇಕ ಮಾಡಲಾಯಿತು. ಬೆಳ್ಳಿಯ ಸಣ್ಣ ಕಲಶಗಳನ್ನು ಸೂಕ್ತ ಮೊತ್ತ ಪಾವತಿಸಿ ನೋಂದಾಯಿಸಿದ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಈ ಪುಣ್ಯ ಕಾರ್ಯವನ್ನು ಸಹಸ್ರಾರು ಜನರು ಕಣ್ತುಂಬಿಕೊಂಡರು.

ಮುಂಜಾನೆಯಿಂದ ಧಾರ್ಮಿಕ ವಿಧಿ – ವಿಧಾನ
ಮುಂಜಾನೆ ಶ್ರೀ ಕ್ಷೇತ್ರದಲ್ಲಿ ಮೀನಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನೆರವೇರಿತು. ಬಳಿಕ ಅವಸ್ರುತ ಬಲಿ, ಮಹಾ ಪೂಜೆ, ಪಲ್ಲಪೂಜೆ, ಮಹಾ ಅನ್ನಸಂತ ರ್ಪಣೆ ನಡೆಯಿತು. ಭ್ರಾಮರಿ ವನದಲ್ಲಿ ಬೆಳಗ್ಗೆ ಶನಿಯಾಗ, ಸಹಸ್ರ ಚಂಡಿಕಾ ಸಪ್ತಶತೀ ಪಾರಾ ಯಣ, ಕೋಟಿ ಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾವೃಕ್ಷಗಳ ಸ್ಥಾಪನೆ ನೆರವೇರಿತು. ಸಂಜೆ ರಥಕಲಶಾಭಿಷೇಕ, ಮಹಾ ರಥೋತ್ಸವ, ಭೂತ ಬಲಿ, ಶಯನ, ಕವಾಟಬಂಧನ ನೆರವೇರಿತು. ಭ್ರಾಮರಿ ವನದಲ್ಲಿ ಕೋಟಿ ಜಪಯಜ್ಞ, ಸಹಸ್ರಚಂಡಿಕಾಸಪ್ತಶತೀ ಪಾರಾಯಣ ನೆರವೇರಿದವು.

ಭ್ರಮರಾಂಬೆಯ ಸನ್ನಿಧಾನ ಪುಷ್ಪಾಲಂಕೃತ
ಭಕ್ತಜನಸಾಗರದ ಬಹುನಿರೀಕ್ಷೆಯ ಕಟೀಲಿನ ತಾಯಿಯ ಬ್ರಹ್ಮಕಲಶಾಭಿಷೇಕದ ಹಿನ್ನೆಲೆಯಲ್ಲಿ ಭ್ರಮರಾಂಬಿಕೆಯ ಸನ್ನಿಧಾನ ಪುಷ್ಪಾ ಲಂಕೃತವಾಗಿ ಕಂಗೊಳಿಸುತ್ತಿದೆ. ಪುಷ್ಪ ಪ್ರಿಯೆಯಾಗಿರುವ ತಾಯಿ ಮಲ್ಲಿಗೆಯ ಅಲಂಕಾರದಿಂದ ಶೋಭಿಸುತ್ತಿದ್ದರು. ಜಗನ್ಮಾತೆಯ ದಿವ್ಯ ದರ್ಶನವೇ ಪುನೀತವಾಗುವಂತೆ ದೇವಿಯ ಪುಷ್ಪಾಲಂಕಾರ ಗಮನಸೆಳೆಯುತ್ತಿತ್ತು. ಇನ್ನು, ದೇವಾಲಯದ ಸುತ್ತೆಲ್ಲ ಪುಷ್ಪಾಲಂಕಾರ ಆಕರ್ಷ ಕವಾಗಿತ್ತು. ತಾಯಿಯ ಸನ್ನಿಧಾನದ ಪ್ರತೀ ಗೋಡೆಯಲ್ಲಿಯೂ ಹೂವಿನ ಬಗೆ ಬಗೆಯ ಅಲಂಕಾರ ಗಮನಸೆಳೆಯುವಂತಿತ್ತು.

ಸ್ವಯಂಸೇವಕರ ಮಹಾ ಕಾರ್ಯ
ಕಟೀಲಿನ ಬ್ರಹ್ಮಕಲಶೋತ್ಸವದ ಸಂಭ್ರಮ ಸಾಂಗವಾಗಿ ನೆರವೇರುವ ನಿಟ್ಟಿನಲ್ಲಿ ಸ್ವಯಂಸೇವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಾರ್ಕಿಂಗ್‌ ವ್ಯವಸ್ಥೆಯಿಂದ ತೊಡಗಿ, ದೇವಸ್ಥಾನದ ಒಳಭಾಗಕ್ಕೆ ಪ್ರವೇಶ ಹಾಗೂ ಅನ್ನದಾನ ಸೇವೆ ನಡೆಯುವ ಜಾಗದಲ್ಲಿ ಸಾವಿರಾರು ಸ್ವಯಂಸೇವಕರು ನಿತ್ಯ ತೊಡಗಿಸಿಕೊಂಡಿರುವ ರೀತಿ ಮಾದರಿ. ಜತೆಗೆ, ಕ್ಷೇತ್ರ ವ್ಯಾಪ್ತಿಯ ಉಗ್ರಾಣ, ಮಾಹಿತಿ ಕೇಂದ್ರ ಸಹಿತ ಎಲ್ಲ ಕಡೆಗಳಲ್ಲಿಯೂ ಅವರ ಶ್ರಮ ಎದ್ದುಕಾಣುತ್ತಿದೆ. ಸ್ಥಳೀಯ ವಿದ್ಯಾರ್ಥಿಗಳು ಕೂಡ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ, ಸ್ವಯಂಸೇವಕರಾಗಿ ಬರಬಹುದಾ? ಎಂದು ಸಾವಿರಾರು ಜನರು ಪ್ರತೀ ದಿನ ಕ್ಷೇತ್ರವನ್ನು ಸಂಪರ್ಕಿಸುತ್ತಿದ್ದಾರೆ.

 ”ಸಹಸ್ರಾರು ಭಕ್ತರ ಸಮಾಗಮ’
ಕಟೀಲಿನ ತಾಯಿಯ ಬ್ರಹ್ಮಕಲಶದ ಸಂಭ್ರಮ ಭಕ್ತಪೂರ್ವಕವಾಗಿ ಸಂಪನ್ನಗೊಂಡಿದೆ. ಭಕ್ತ ಜನರಿಗೆ ಸೂಕ್ತವಾಗುವ ಎಲ್ಲ ವ್ಯವಸ್ಥೆಗಳನ್ನು ಕ್ಷೇತ್ರದ ಆಡಳಿತ ಸಮಿತಿ ಹಾಗೂ ಭಕ್ತರ ವತಿಯಿಂದ ನಡೆಸಲಾಗಿದೆ. ಫೆ. 3ರ ವರೆಗೆ ನಾಗಮಂಡಲೋತ್ಸವ, ಕೋಟಿಜಪಯಜ್ಞ, ಸಹಸ್ರ ಚಂಡಿಕಾಯಾಗ ಸಂಪನ್ನಗೊಳ್ಳಲಿದೆ. ಈಗಾಗಲೇ ಸಹಸ್ರಾರು ಭಕ್ತರು ಕಟೀಲಿಗೆ ಆಗಮಿಸಿದ್ದು, ಮುಂದೆಯೂ ಇದಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ.
 - ನಳಿನ್‌ ಕುಮಾರ್‌ ಕಟೀಲು, ಸಂಸದರು, ಅಧ್ಯಕ್ಷರು-ಬ್ರಹ್ಮಕಲಶೋತ್ಸವ ಸಮಿತಿ

ಭಕ್ತಿನೋಟ
ಎಲ್‌ಸಿಡಿ ಪರದೆ
 ಕಟೀಲು: ಬ್ರಹ್ಮಕಲಶೋತ್ಸವದಲ್ಲಿ ಜನಸಂದಣಿ ಅಧಿಕವಾಗಿದ್ದರಿಂದ ಕಟೀಲು ತಾಯಿ ಭ್ರಾಮರೀಯ ಧಾರ್ಮಿಕ ಕಾರ್ಯಕ್ರಮವನ್ನು ಎಲ್ಲ ಭಕ್ತರಿಗೆ ವೀಕ್ಷಿಸಲು ಕಷ್ಟ ಸಾಧ್ಯವಾಗಿತ್ತು. ಅದಕ್ಕಾಗಿ ಉಗ್ರಾಣ, ಬಸ್‌ನಿಲ್ದಾಣ, ಭೋಜನ ಶಾಲೆ, ದೇವಸ್ಥಾನ ಹೊರಭಾಗದಲ್ಲಿ ಎಲ್‌ಸಿಡಿ ಪರದೆಯ ಮೂಲಕ ವ್ಯವಸ್ಥೆ ಮಾಡಲಾಯಿತು.

ಸುವ್ಯವಸ್ಥಿತ ಪಾರ್ಕಿಂಗ್‌
ಬಜಪೆ: ಕಟೀಲು ಬ್ರಹ್ಮಕಲಶೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಕಾರಣ ಬಂದ ವಾಹನಗಳಿಗಾಗಿ 16 ಕಡೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಬಜಪೆಯಿಂದ ಬಂದ ವಾಹನಗಳಿಗೆ ಎಕ್ಕಾರಿನಿಂದ ಕಟೀಲು ಸೇತುವೆ ಸಮೀಪದವರೆಗೆ 10 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ದ್ವಿಚಕ್ರವಾಹನಗಳಿಗೆ ಬೇರೆಯೇ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ 60 ಕಾರ್ಯಕರ್ತರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಿನ್ನಿಗೋಳಿ ಕಡೆಯಿಂದ ಬರುವ ವಾಹ ನಗಳಿಗೆ 17 ಎಕ್ರೆ ಜಾಗದಲ್ಲಿ ನಂದಿನಿ, 10ಎಕ್ರೆ ಜಾಗದ ಶಾಂಭವಿ ಹೆಸರಿ ನಲ್ಲಿ ಪಾರ್ಕಿಂಗ್‌ ಹಾಗೂ ಗಿಡಿಕರೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು.

15 ಸಾವಿರ ಭಕ್ತರಿಗೆ ಉಪಾಹಾರ
ಬಜಪೆ: 15 ಸಾವಿರ ಭಕ್ತರಿಗೆ ಬೆಳಗ್ಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಹೆಸರು ಕಾಳು ಒಗ್ಗರಣೆ, ಸೇವಿಗೆ, ಕೇಸರಿಬಾತ್‌, ಹೆಸರು ಬೇಳೆಬಾತ್‌, ಅವಲಕ್ಕಿ ಮಸಾಲ, ಚಾ ಹಾಗೂ ಕಾಫಿ ಮಾಡಲಾಗಿತ್ತು.

6 ರಿಕ್ಷಾಗಳ ಉಚಿತ ಸೇವೆ
ಬಜಪೆ: ಇಲ್ಲಿನ ಕೇಸರಿ ಫ್ರೆಂಡ್ಸ್‌ನ 6 ರಿಕ್ಷಾ ಚಾಲಕರಿಂದ ಕಟೀಲಿಗೆ ಉಚಿತ ರಿಕ್ಷಾ ಸೇವೆಯನ್ನು ನೀಡಲಾಗಿತ್ತು. ಇದರಿಂದ ಭಕ್ತರಿಗೆ ಅನುಕೂಲವಾಯಿತು.

ಎಸ್‌ಪಿವೈಎಸ್‌ಎಸ್‌ನಿಂದ ಸ್ವಚ್ಛತಾ ಕಾರ್ಯ
ಕಟೀಲು ಕ್ಷೇತ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಎಸ್‌ಪಿ ವೈಎಸ್‌ಎಸ್‌ ಹಾಗೂ ಸ್ವಸಹಾಯ ಸಂಘದಿಂದ ಸ್ವಚ್ಛತಾ ಕಾರ್ಯ ನಡೆಯಿತು. ಪೊರಕೆ ಹಿಡಿದ ಪುರುಷ ಹಾಗೂ ಮಹಿಳೆಯರು ಕಸ ಬಿದ್ದ ತತ್‌ಕ್ಷಣ ಅಲ್ಲಿ ಬಂದು ತೆಗೆಯುವುದು ಕಂಡು ಬಂತು.

ಆಯುರ್ವೇದಿಕ್‌ ಬಿಸಿನೀರು
ಬಂದ ಭಕ್ತರಿಗೆ ಪೊರ್ಕೋಡಿ ಸೋಮನಾಥೇಶ್ವರ ದೇವಸ್ಥಾನದ ವತಿಯಿಂದ ಆಯುರ್ವೇದಿಕ್‌ ಬಿಸಿ ನೀರನ್ನು ನೀಡಲಾಯಿತು. ಚಳಿ, ಧೂಳಿನಿಂದ ಗಂಟಲು ಬೇನೆಗೆ ಈ ಬಿಸಿನೀರು ಒಳ್ಳೆಯ ಔಷಧ. ಕರಂಗಳಿ ಹಾಗೂ ಲಾವಂಚದಿಂದ ತಯಾರಿಸಿದ ಈ ಬಿಸಿ ನೀರಿಗೂ ಭಾರೀ ಬೇಡಿಕೆ ಬಂತು. ಸಿಹಿ ಇಲ್ಲದ ಕಾರಣ ಇದನ್ನು ಜನ ಹೆಚ್ಚು ಖುಷಿಪಟ್ಟರು.

16 ಕಡೆಗಳಲ್ಲಿ ತಂಪು ಪಾನೀಯದ ವ್ಯವಸ್ಥೆ
ಕಟೀಲು ಸೇತುವೆಯಿಂದ ಅಲ್ಲಲ್ಲಿ ಭೋಜನ ಶಾಲೆಯ ಸಮೀಪದವರೆಗೆ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ಪುನರ್‌ಪುಳಿ ಜ್ಯೂಸ್‌ಗೆ ಲಿಂಬೆ ಹಾಗೂ ಕರಿಮೆಣಸು ಹಾಕಿ ನೀಡಲಾಗಿತ್ತು. ಕಟೀಲು ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರು ಈ ಪಾನೀಯ ವ್ಯವಸ್ಥೆಗೆ ಸಹಕರಿಸಿದ್ದರು. ಭೋಜನ ಶಾಲೆಯಲ್ಲಿ ಕೆಎಂಎಫ್‌ನಿಂದ ಮಜ್ಜಿಗೆ ನೀಡಲಾಗಿತ್ತು.

ಉಚಿತ ಕಲ್ಲಂಗಡಿ ಹಣ್ಣು ವಿತರಣೆ
ಬಜಪೆ: ಕಟೀಲಿಗೆ ಬಂದ ಭಕ್ತರಿಗೆ ಕಿನ್ನಿಗೋಳಿ-ಹಳೆಯಂಗಡಿ ವಿಶ್ವಬ್ರಾಹ್ಮಣ ಸಮಾಜದ ವತಿಯಿಂದ ಉಚಿತ ಕಲ್ಲಂಗಡಿ ಹಣ್ಣಿನ ಸೇವೆಯನ್ನು ನೀಡಲಾಗಿತ್ತು. ಬಿಸಿಲು ಹಾಗೂ ಬಾಯಾರಿಕೆಗೆ ತಂಪು ನೀಡುವ ಈ ಸೇವೆ ಜನರಿಗೆ ಖುಷಿ ನೀಡಿತು. ಇದಕ್ಕಾಗಿ 15 ಟನ್‌ ಕಲ್ಲಂಗಡಿಯನ್ನು ತರಿಸಲಾಗಿತ್ತು. ಸಮಾಜದ 100 ಮಂದಿ ಸ್ವಯಂಸೇವಕರು ಸೇವಾ ಕಾರ್ಯದಲ್ಲಿ ಭಾಗಿಯಾದರು.

ಸರಪಳಿ ನಿರ್ಮಿಸಿದ ಸ್ವಯಂಸೇವಕರು
ಮಧ್ಯಾಹ್ನದ ವೇಳೆ ಕಟೀಲಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಕೆಲವೆಡೆ ನೂಕುನುಗ್ಗಲು ಶುರುವಾಯಿತು. ಇದನ್ನು ಹತೋಟಿ ತರಲು ಸ್ವಯಂಸೇವಕರು ಕೈಕೈ ಹಿಡಿದು ಮಾನವ ಸರಪಳಿ ಮಾಡಿದರು. ಕೆಲವೆಡೆ ಬ್ಯಾರಿಕೆಡ್‌ಗಳನ್ನು ಹಾಕಲಾಯಿತು. ಭೋಜನ ಶಾಲೆ, ದೇಗುಲಕ್ಕೆ ಹೋಗುವ ಭಕ್ತರಿಗೆ ಬೇರೆಬೇರೆ ದಾರಿ ಮಾಡಿ ಕೊಡಲಾಯಿತು.

ಫೆ. 1ರಂದು 40 ರಿಕ್ಷಾಗಳಿಂದ ಉಚಿತ ಸೇವೆ
ಫೆ. 1ರಂದು ನಡೆಯುವ ನಾಗಮಂಡಲೋತ್ಸವಕ್ಕೆ ಕಟೀಲಿನ 40 ರಿಕ್ಷಾಗಳು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಉಚಿತ ಸೇವೆ ನೀಡಲಿವೆ. ಕಟೀಲಿನಿಂದ 5 ಕಿ.ಮೀ. ದೂರ ತನಕ ಈ ರಿಕ್ಷಾಗಳು ಉಚಿತ ಸೇವೆ ನೀಡಲಿವೆ ಎಂದು ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಫೆ.1ರಂದು ಕಟೀಲಿನಿಂದ ಸಾಗುವ ಬಸ್‌ಗಳು ಈಗಾಗಲೇ ಉಚಿತ ಸೇವೆ ನೀಡಲು ನಿರ್ಧರಿಸಿವೆ.

ಟಾಪ್ ನ್ಯೂಸ್

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.