ಕಟೀಲು ದೇವಸ್ಥಾನ : 62 ಜೋಡಿಗಳ ಸರಳ ವಿವಾಹ
Team Udayavani, Apr 25, 2022, 5:00 AM IST
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ 62 ಜೋಡಿಗಳ ಸರಳ ವಿವಾಹವು ನಡೆಯಿತು. ಬೆಳಗ್ಗೆ 8ರಿಂದ ಆರಂಭವಾದ ವಿವಾಹ ಮುಹೂರ್ತಗಳು ಮಧ್ಯಾಹ್ನ ಒಂದರ ತನಕ ನಡೆದವು. 25 ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಂದಾಜು 10 ಸಾವಿರ ಮಂದಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ.
ನಾಲ್ಕು ಕೌಂಟರ್ ವ್ಯವಸ್ಥೆ
ವಿವಾಹ ಮುಹೂರ್ತಗಳನ್ನು ಸುವ್ಯಸ್ಥಿತವಾಗಿ ನೆರವೇರಿಸುವುದಕ್ಕಾಗಿ ದೇಗುಲದ ವತಿಯಿಂದ 8 ಮಂದಿ ಅರ್ಚಕ ಪುರೋಹಿತರು, 4 ಕೌಂಟರ್‌ಗಳು ಮತ್ತು ನೋಂದಣಿಗೆ ಪ್ರತ್ಯೇಕ ಸಿಬಂದಿ ನೇಮಕ ಮಾಡಲಾಗಿತ್ತು.
ರವಿವಾರವೂ ಆಗಿದ್ದು, ಮದುವೆ ಮಹೂರ್ತಗಳು ಹೆಚ್ಚು ಇದ್ದುದರಿಂದ ಯಾವುದೇ ಗೊಂದಲ ಮೂಡದಂತೆ ಯಶಸ್ವಿಯಾಗಿ ನಿಭಾಯಿಸಲು ಇದು ಸಹಕಾರಿಯಾಯಿತು.
ಉತ್ತಮ ಟ್ರಾಫಿಕ್ ವ್ಯವಸ್ಥೆ
ಮದುವೆಗೆ ಬಂದ ದಿಬ್ಬಣಗಳು ಮತ್ತು ರಜಾ ದಿನವಾದುದರಿಂದ ಕಟೀಲು ಪೇಟೆ ಮತ್ತು ರಥಬೀದಿ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಗಳಿದ್ದವು. ಆದರೆ ಇದನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಲಾಗಿತ್ತು. ರಥ ಬೀದಿಯಲ್ಲಿ ಬಸ್ ನಿಲುಗಡೆ ನೀಡದೆ ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಲಾಗಿತ್ತು. ಪಕ್ಕದ ಸಿತ್ಲಬೈಲು, ಕಾಲೇಜು ಆವರಣ ಮತ್ತು ಉಲ್ಲಂಜೆಯತ್ತ ತೆರಳು ರಸ್ತೆಯ ಪಕ್ಕದ ಗದ್ದೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು ಎಂದು ದೇಗುಲದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ತಿಳಿಸಿದ್ದಾರೆ.
ಪ್ರಸ್ತುತ ದೇವಸ್ಥಾನದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಊಟದ ಛತ್ರದಲ್ಲಿಯೂ ಗರಿಷ್ಠ ಶುಚಿತ್ವ ಪಾಲನೆ. ಊಟದ ತಟ್ಟೆಗಳನ್ನು ಬಿಸಿನೀರಿನಿಂದ ತೊಳೆದು ಭಕ್ತರಿಗೆ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.