ಕಟೀಲು ದೇವಸ್ಥಾನ: 90 ಜೋಡಿ ವಿವಾಹ
Team Udayavani, May 14, 2018, 11:41 AM IST
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ 90 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಿದವು. ಇದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಈ ವರ್ಷ ನಡೆದಿರುವ ಅತೀ ಹೆಚ್ಚು ಸಂಖ್ಯೆಯ ಸರಳ ವಿವಾಹ.
ಇದರ ಜತೆಗೆ ದೇವಸ್ಥಾನದ ಪರಿಸರದ ಸಭಾಭವನಗಳಲ್ಲಿ ಸುಮಾರು 10 ವಿವಾಹಗಳು ನಡೆದವು. ಕಳೆದ ವರ್ಷ 125 ಜೋಡಿಗಳ ವಿವಾಹ ನೆರವೇರಿತ್ತು.
ದೇವಸ್ಥಾನದಲ್ಲಿ 4 ಕೌಂಟರ್‌ಗಳನ್ನು ರಚಿಸಿ 90 ಮದುವೆಗಳನ್ನು ನಿರ್ವಹಿಸಲಾಯಿತು. ಮದುವೆಗಳ ನೋಂದಣಿಗೆ ವಿಶೇಷ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ದ.ಕ. ಉಡುಪಿ, ಕಾಸರಗೋಡು ಜಿಲ್ಲೆಗಳು ಮತ್ತು ಮಡಿಕೇರಿಯಿಂದ ಬಂದ ವಧೂವರರು ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಕಳೆದ ರವಿವಾರ ಇಲ್ಲಿ 56 ಜೋಡಿಗಳ ವಿವಾಹ ನೆರವೇರಿತ್ತು.
ಹೆಚ್ಚಿದ ಜನಸಂದಣಿ
ಕಟೀಲು ದೇವಸ್ಥಾನದಲ್ಲಿ ಮದುವೆಗಳ ಸಂಖ್ಯೆ ಹೆಚ್ಚಿದ್ದುದರಿಂದ ಜನಸಂದಣೆ ಹೆಚ್ಚಾಗಿತ್ತು. ರಥಬೀದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರಲಿಲ್ಲ. ರಥಬೀದಿಯ ವಾಹನಗಳು ಹಳೆ ಪ್ರಾಥಮಿಕ ಶಾಲೆ ದಾರಿಯ ಮೂಲಕ ಸಾಗಲು ಅವಕಾಶ ಕಲ್ಪಿಸಲಾಗಿತ್ತು. ವಾಹನ ದಟ್ಟನೆಯ ನಿಯಂತ್ರಣಕ್ಕೆ ದೇವ ಸ್ಥಾನದ ವತಿಯಿಂದ ಖಾಸಗಿ ಟ್ರಾಫಿಕ್ ನಿರ್ವಹಣೆ ಹಾಗೂ ಭದ್ರತಾ ವ್ಯವಸ್ಥೆ ನಿಯೋ ಜಿಸಲಾಗಿತ್ತು. ವಾಹನಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ಟ್ರಾಫಿಕ್ ಜಾಮ್ ಆಗಿತ್ತು.
ಬೆಳಗ್ಗೆ 7.40ರಿಂದ ಆರಂಭವಾದ ಮದುವೆಗಳು 12.15ರ ತನಕ ನಡೆದಿವೆ. ಮದುವೆ ಸಾಂಗವಾಗಿ ಸಾಗಲು ನಾಲ್ಕು ವಿಶೇಷ ಕೌಂಟರ್ ಮೂಲಕ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ 125 ಜೋಡಿಗಳಿಗೆ ಸರಳ ರೀತಿಯಲ್ಲಿ ವಿವಾಹ ನಡೆದಿದೆ.
– ಶ್ರೀಹರಿನಾರಾಯಣದಾಸ ಆಸ್ರಣ್ಣ, ಅರ್ಚಕರು, ಶ್ರೀ ಕ್ಷೇತ್ರ ಕಟೀಲು
ರವಿವಾರವಾದ್ದರಿಂದ ಹಾಗೂ ಮದುವೆಗೆ ಆಗಮಿಸಿದ್ದ ಭಕ್ತರ ಅನುಕೂಲಕ್ಕೆ ತಕ್ಕಂತೆ ಮಧ್ಯಾಹ್ನ 12 ಗಂಟೆಗೆ ಅನ್ನ ಪ್ರಸಾದ ವಿತರಣೆ ಆರಂಭಿಸಲಾಗಿದ್ದು, ಮೂರು ಗಂಟೆಯ ತನಕ ನಡೆದಿದೆ. ಸುಮಾರು 10,000 ಮಂದಿ ಮಧ್ಯಾಹ್ನ ಅನ್ನಪ್ರಸಾದ ಸ್ವೀಕರಿಸಿದ್ದಾರೆ.
– ಸನತ್ ಕುಮಾರ್ ಶೆಟ್ಟಿ , ಅಧ್ಯಕ್ಷ ಆಡಳಿತ ಸಮಿತಿ, ಶ್ರೀ ಕ್ಷೇತ್ರ ಕಟೀಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.