ಕಟೀಲು ಭ್ರಾಮರಿಗೆ ಇಂದು ಬ್ರಹ್ಮಕಲಶಾಭಿಷೇಕ
Team Udayavani, Jan 30, 2020, 12:35 AM IST
ಕಟೀಲು: ಎಂಟು ದಿನಗಳಿಂದ ವಿಶೇಷ ಪೂಜಾಧಿ ಕಾರ್ಯಕ್ರಮಗಳಿಂದ ಗಮನಸೆಳೆದಿದ್ದ ಶ್ರೀ ಕ್ಷೇತ್ರ ಕಟೀಲಿನಲ್ಲಿ ಒಂಬತ್ತನೇ ದಿನವಾದ ಗುರುವಾರ ವಿಜೃಂಭಣೆಯ ಬ್ರಹ್ಮಕಲಶೋತ್ಸವ ಜರಗಲಿದೆ. ಬ್ರಹ್ಮಕಲಶೋತ್ಸವಕ್ಕೆ ಕ್ಷೇತ್ರವು ಪೂರ್ಣವಾಗಿ ಸಜ್ಜಾಗಿದ್ದು, ಸಂಭ್ರಮವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.
ಬ್ರಹ್ಮಕಲಶೋತ್ಸವದ ಕಾರ್ಯಗಳು ಪೂರ್ಣಗೊಂಡಿವೆ. ಜರಗಲಿರುವ ರಥೋತ್ಸವಕಾRಗಿ ರಥದ ಅಟ್ಟೆಯನ್ನು ಸ್ಟೀಲಿನಿಂದ ನೂತನವಾಗಿ ರಚಿಸಿ, ಸುಂದರಗೊಳಿಸಲಾಗಿದೆ. ಸುತ್ತಲೂ ಮರದ ಹಲಗೆಗಳಲ್ಲಿ ಹೊಸ ಕಲಾಕೃತಿಗಳನ್ನು ರಚಿಸಿ, ಇಡೀ ರಥವನ್ನು ಪಾಲಿಶ್ ಮಾಡಲಾಗಿದೆ. ಈ ಬಾರಿ ರಥಬೀದಿ ಅಂಗಡಿಗಳ ತೆರವಿನಿಂದ ದುಪ್ಪಟ್ಟು ಅಗಲವಾಗಿದ್ದು, ಜನರು ರಥೋತ್ಸವದ ಸಂಭ್ರಮವನ್ನು ಕಾಣುವಂತಾಗಲಿದೆ.
ಸುಮಾರು 1.50 ಲಕ್ಷ ಭಕ್ತರಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ವಿವಿಧ 16 ಕಡೆಗಳಲ್ಲಿ ಸುಸಜ್ಜಿತ ಪಾರ್ಕಿಂಗ್, ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ವೀಕ್ಷಣೆಗೆ ಸಭಾ ಮಂಟಪ, ಬಸ್ ನಿಲ್ದಾಣ, ಪಾಕಶಾಲೆ ಉಗ್ರಾಣ, ಭೋಜನ ಶಾಲೆ ಹಾಗೂ ವಿವಿಧೆಡೆ ಹತ್ತಕ್ಕಿಂತಲೂ ಹೆಚ್ಚು ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ.
ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ
ಬೆಳಗ್ಗೆ 9ರಿಂದ ನಾಗೇಶ್ ಬಪ್ಪನಾಡು ಮತ್ತು ಬಳಗದವರಿಂದ ಮಂಗಳವಾದ್ಯ ನಾದಸ್ವರ, ಬೆಳಗ್ಗೆ 11ರಿಂದ ಶ್ರೀ ಅನಂತಪದ್ಮನಾಭ ಭಟ್, ಕಾರ್ಕಳ ಇವರಿಂದ ಹರಿಕಥೆ, ಮಧ್ಯಾಹ್ನ 1ರಿಂದ ಬಾಲಕೃಷ್ಣ ಮಂಜೇಶ್ವರ ಮತ್ತು ಬಳಗ, ನಾಟ್ಯನಿಲಯಂ ಇವರಿಂದ ಭರತನಾಟ್ಯ, ಅಪರಾಹ್ನ 3ರಿಂದ ಬೆಂಗಳೂರು ಸಹೋದರರು ಮತ್ತು ಬಳಗ ಅವರಿಂದ ದಾಸರೆಂದರೆ ಸಂಪ್ರವಚನ, ಅಂಬಾಬಾಯಿ ದಾಸಿ, ಹಾಡುಗಾರಿಕೆ ಮತ್ತು ಪ್ರಸ್ತುತಿ, ಸಂಜೆ 5ರಿಂದ ಸಭಾ ಕಾರ್ಯಕ್ರಮ, ರಾತ್ರಿ 7ರಿಂದ ಲಯ ಲಾವಣ್ಯ, ನಿರ್ದೇಶನ ಆನೂರು ಅನಂತಕೃಷ್ಣ ಶರ್ಮ ಮತ್ತು ಬಳಗದಿಂದ, ರಾತ್ರಿ 9ರಿಂದ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಇವರಿಂದ ದ್ಯುಸನ ವಧೆ ಎಂಬ ದೊಂದಿ ಬೆಳಕಿನ ಯಕ್ಷಗಾನ ಬಯಲಾಟ ನಡೆಯಲಿದೆ.
ಸಾನ್ನಿಧ್ಯ ವೃದ್ಧಿ
ಭ್ರಾಮರೀ ಅವತಾರಣಿಯಾದ ದುರ್ಗಾಪರಮೇಶ್ವರೀಗೆ ಬೆಳಗ್ಗೆ 5ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು 9.37ಕ್ಕೆ ಮೀನ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ಇದರಿಂದ ಸಾನ್ನಿಧ್ಯವೂ ವೃದ್ಧಿಯಾಗಿ ಭಕ್ತರನ್ನು ಪೊರೆಯುತ್ತಾಳೆ.
– ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ತಂತ್ರಿಗಳು, ಶಿಬರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.