ಕಟೀಲು: 200ಕ್ಕೂ ಅಧಿಕ ಸ್ವಯಂಸೇವಕರಿಂದ ಶ್ರಮದಾನ
Team Udayavani, Jan 12, 2020, 8:51 PM IST
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ವಿವಿಧೆಡೆ 200ಕ್ಕೂ ಅಧಿಕ ಸ್ವಯಂಸೇವಕರಿಂದ ರವಿವಾರದಂದು ಕರಸೇವೆ ಜರಗಿತು.
ಸಿತ್ಲಬೈಲಿನಲ್ಲಿ ನಿರ್ಮಾಣಗೊಂಡ ಪಾಕಶಾಲೆ ಅಡುಗೆಗೆ ಬೇಕಾಗುವ ದೊಡ್ಡ ಮಟ್ಟದ 54 ಒಲೆಗಳು ಸಿದ್ದಗೊಳ್ಳುತ್ತಿದ್ದು, ಬೇಕಾಗುವ ಉರುವಲು ಕಟ್ಟಿಗೆಗಳನ್ನು ಸ್ವಯಂ ಸೇವಕರು ಸಂಗ್ರಹಿಸಿದರು.
ಕಟೀಲು ಭೋಜನ ಶಾಲೆಯ ಹಿಂದುಗಡೆ ಹಾಗೂ ವಿಶೇಷ ವಿಶ್ರಾಂತಿಗೃಹದ ಹಿಂಭಾಗದಲ್ಲಿ ರಸ್ತೆಯನ್ನು 40 ಅಡಿಗಳಷ್ಟು ವಿಸ್ತರಣೆಗೊಳಿಸಲಾಗಿದ್ದು ಅತಿಥಿಗೃಹದ ಹಿಂಭಾಗದಲ್ಲಿ ರಸ್ತೆಯ ಬದಿಯಲ್ಲಿ ಇಂಟರ್‌ಲಾಕ್‌ನ್ನು ಅಳವಡಿಸಲಾಯಿತು.
ನೂತನ ಪಾಕಶಾಲೆಯ ಹೊರಭಾಗದಲ್ಲಿ ನೆಲಕ್ಕೆ ಇಂಟರ್ ಲಾಕ್ ಆಳವಡಿಕೆ ಕಾರ್ಯ ನಡೆದಿದೆ. ಪ್ರಸ್ತುತ ಈಗ ಇರುವ ಭೋಜನ ಶಾಲೆಯ ಮುಂಭಾಗದಲ್ಲಿ ಹಾಗೂ ಶೌಚಾಲಯದ ಬದಿಯಲ್ಲಿ ಇರುವ ಜಾಗದಲ್ಲಿ ಕೈತೋಟ ನಿರ್ಮಾಣ ಕೆಲಸವು ಪ್ರಗತಿಯಲ್ಲಿದೆ.
ಪಾರ್ಕಿಂಗ್ ಸ್ಥಳದಲ್ಲಿ ಅಂತಿಮವಾಗಿ ಜೆಸಿಬಿ, ಹಿಟಾಚಿಗಳು, ರಸ್ತೆ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿವೆ. ದೇವಸ್ಥಾನದ ರಥಬೀದಿಯಲ್ಲಿರುವ ಮೂರು ಮಹಡಿಯ ದುರ್ಗಾಪ್ರಸಾದ್ ಕಟ್ಟಡದ ತೆರವು ಕಾರ್ಯಭರದಿಂದ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.