ಎಂಆರ್‌ಪಿಎಲ್ ತೈಲ ಸಂಸ್ಕರಣೆಗೆ ಕಾವೂರು ಒಳಚರಂಡಿ ನೀರು
44.4 ಎಂಎಲ್‌ಡಿ ಸಾಮರ್ಥ್ಯದ ಕಾವೂರು ಎಸ್‌ಟಿಪಿ
Team Udayavani, May 20, 2019, 6:00 AM IST
ಕಾವೂರು ಒಳಚರಂಡಿ ಸಂಸ್ಕರಣಾ ಘಟಕ
ಮಹಾನಗರ: ನೀರಿನ ಕೊರತೆ ಇದೀಗ ಕರಾವಳಿಯ ಪ್ರತಿಷ್ಠಿತ ಉದ್ಯಮ ಎಂಆರ್‌ಪಿಎಲ್‌ಗೂ (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಬಹುವಾಗಿ ಕಾಡುತ್ತಿದೆ. ಇಲ್ಲಿನ ಮೂರು ಘಟಕಗಳಲ್ಲಿ ಸದ್ಯ ಎರಡನೇ ಘಟಕವು, 44.4 ಎಂಎಲ್‌ಡಿ ಸಾಮರ್ಥ್ಯದ ಕಾವೂರು ಒಳಚರಂಡಿ ಸಂಸ್ಕರಣಾ ಘಟಕದ (ಎಸ್‌ಟಿಪಿ) ಕೊಳಚೆ ನೀರಿನ ಮೂಲಕ ಕಾರ್ಯನಿರ್ವಹಿಸುತ್ತಿದೆ!
ಎಂಆರ್‌ಪಿಎಲ್‌ನಲ್ಲಿ ಮೂರು ಘಟಕಗಳಲ್ಲಿ ತೈಲ ಸಂಸ್ಕರಣೆ ನಡೆಸಲಾಗುತ್ತದೆ. ಇದರಲ್ಲಿ, ವಾರ್ಷಿಕ ನಿರ್ವಹಣೆ ನಿಟ್ಟಿನಲ್ಲಿ ಎಂಆರ್‌ಪಿಎಲ್‌ನ ಮೂರನೇ ಘಟಕದ ಕಾರ್ಯನಿರ್ವಹಣೆಯನ್ನು ಎಪ್ರಿಲ್ ಅಂತ್ಯದಲ್ಲಿ ಸ್ಥಗಿತಗೊಳಿಸಲಾಗಿತ್ತು. ನೀರಿಲ್ಲದ ಹಿನ್ನೆಲೆಯಲ್ಲಿ ಇಲ್ಲಿನ ಮೊದಲ ಘಟಕ ಮೇ 9ರಂದು ಸ್ಥಗಿತಗೊಂಡಿತ್ತು.
ಕುದ್ರೋಳಿಯಿಂದ ಕಾವೂರು ಎಸ್‌ಟಿಪಿಗೆ
ಕಾವೂರು ಸಂಸ್ಕರಣಾ ಘಟಕಕ್ಕೆ ಕೊಳಚೆ ನೀರು ಕುದ್ರೋಳಿ ವೆಟ್‌ವೆಲ್‌ನಿಂದ ಬರುತ್ತಿದೆ. ಕುದ್ರೋಳಿ ವೆಟ್‌ವೆಲ್‌ನಿಂದ ಕಾವೂರು ಮುಲ್ಲಕಾಡ್‌ವರೆಗೆ ಪ್ರಸ್ತುತ 750 ಎಂಎಂ ಸಿಐ ಪೈಪ್‌ಗ್ಳ ಮೂಲಕ (ಹಳೆಯ ಕಾಲದ ಪೈಪ್‌ಗ್ಳು) ಒಳಚರಂಡಿ ನೀರು ಸಾಗಿಸಲಾಗುತ್ತಿದೆ. ಕುದ್ರೋಳಿ ವೆಟ್‌ವೆಲ್‌ನಿಂದ ಜಾಮಿಯಾ ಮಸೀದಿ, ಉರ್ವಸ್ಟೋರ್, ದಡ್ಡಲ್‌ಕಾಡ್ ಮಾರ್ಗವಾಗಿ, ಕುಂಟಿಕಾನ ಫ್ಲೈಓವರ್ ಆಗಿ, ಎಸ್‌ಟಿಪಿ ಮುಲ್ಲಕಾಡ್ ಸಂಪರ್ಕಿಸುತ್ತಿದೆ. ಎಸ್‌ಟಿಪಿಗೆ ಬಂದ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಎಸ್‌ಇಝಡ್-ಎಂಆರ್‌ಪಿಎಲ್ ಪಡೆದುಕೊಳ್ಳುತ್ತಿದೆ.
ಹೊಸ ಪೈಪ್‌ಲೈನ್ ಕಾಮಗಾರಿ
ಕಾವೂರು ಎಸ್‌ಟಿಪಿಗೆ ಸಂಪರ್ಕ ಕಲ್ಪಿಸುವ ತ್ಯಾಜ್ಯ ನೀರಿನ ಪೈಪ್‌ಲೈನ್ ಹಳೆಯದ್ದಾಗಿರುವುದರಿಂದ ಇದೀಗ ಪಾಲಿಕೆ ವತಿಯಿಂದ ಹೊಸದಾಗಿ ಕುದ್ರೋಳಿ ವೆಟ್‌ವೆಲ್‌ನಿಂದ ಕಾವೂರು ಮುಲ್ಲಕಾಡುವರೆಗೆ 7.65 ಕಿ.ಮೀ ಉದ್ದದಲ್ಲಿ 1100ಎಂಎಂ ಡಿಐ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ನೇತ್ರಾವತಿ-ಕಾವೂರು ಎಸ್‌ಟಿಪಿಯೇ ಆಧಾರ! ಎಂಆರ್‌ಪಿಎಲ್ ರಿಫೈನರಿಯನ್ನು ಚಲಾಯಿಸುವುದಕ್ಕೆ ಪ್ರತಿದಿನ 6 ಎಂಜಿಡಿ ಯಷ್ಟು ನೀರು ಬೇಕಾಗುತ್ತದೆ.
ಇದರಲ್ಲಿರುವ ಕ್ಯಾಪ್ಟಿವ್ ಪವರ್ ಪ್ಲಾಂಟ್ ಮೂಲಕ ವಿದ್ಯುತ್ ಉತ್ಪಾದಿಸಲು ನೀರು ಬೇಕು. ಅತ್ಯಧಿಕ 300, 400 ಡಿಗ್ರಿ ಸೆಲ್ಸಿ ಯಸ್ ಉಷ್ಣತೆಯಲ್ಲಿ ಕಚ್ಚಾ ತೈಲ ವನ್ನು ಸಂಸ್ಕರಿಸಲಾಗುತ್ತಿದ್ದು, ಅದನ್ನು ತಣಿ ಸುವುದಕ್ಕೆ ಮತ್ತೆ ಭಾರೀ ಪ್ರಮಾ ಣದ ನೀರಿನ ಅಗತ್ಯವಿದೆ. ಇದಕ್ಕಾಗಿ ನೇತ್ರಾವತಿ ನದಿ, ಕಾವೂರು ಒಳಚರಂಡಿ ಸಂಸ್ಕರಣಾ ಘಟಕದಿಂದ ನೀರು ಪಡೆಯಲಾಗುತ್ತಿತ್ತು. ನೇತ್ರಾವತಿಯ ನೀರು ಸದ್ಯ ಸ್ಥಗಿತವಾದ ಕಾರಣ ಎರಡನೇ ಮೂಲವನ್ನು ಆಶ್ರಯಿಸಲಾಗಿದೆ.
ತಣ್ಣೀ ರು ಬಾವಿಯಲ್ಲಿ ರಾಜ್ಯದ ಮೊದಲ ಸಮುದ್ರ ನೀರು ಸಂಸ್ಕ ರಣಾ ಘಟಕ (ಡಿಸಲೈನೇಶನ್ ಪ್ಲಾಂಟ್) ನಿರ್ಮಾಣ ಕಾಮಗಾರಿ ಈಗಾ ಗಲೇ ಆರಂಭಿಸಲಾಗಿದೆ. ಸಮು ದ್ರದ ಉಪ್ಪು ನೀರನ್ನು ಸಂಸ್ಕರಿ ಸುವ ಈ ಯೋಜನೆ ಯಿಂದ ಪ್ರತಿ ದಿನ 5 ಮಿ.ಗ್ಯಾಲನ್ ನೀರು ಉತ್ಪಾದಿ ಸಬಹುದು.
4 ತ್ಯಾಜ್ಯ ಸಂಸ್ಕರಣಾ ಘಟಕ
ಕುದ್ರೋಳಿ, ಪಾಂಡೇಶ್ವರ, ಪಡೀಲ್, ಎಕ್ಕೂರು, ಕೊಟ್ಟಾರಚೌಕಿ ಸಹಿತ ನಗರದ ಒಟ್ಟು 22 ಕಡೆಗಳಲ್ಲಿ ಪಾಲಿಕೆಯು ವೆಟ್‌ವೆಲ್ ನಿರ್ಮಿಸಲಾಗಿದೆ. ಅಂದರೆ, ಶೌಚಾಲಯ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್ (ಒಟ್ಟು 24,365) ದಾಟಿ, ವೆಟ್‌ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ನಗರದ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣಾ ಘಟಕ) ಬರುತ್ತದೆ. 16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್ ಎಸ್‌ಟಿಪಿ, 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ, 44.4 ಎಂಎಲ್‌ಡಿಯ ಕಾವೂರು ಎಸ್‌ಟಿಪಿ, 8.7 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತದೆ. ಇದರಲ್ಲಿ ಕಾವೂರು ಎಸ್‌ಟಿಪಿಯ ನೀರು ಮಾತ್ರ ಸದ್ಯ ಎಂಆರ್‌ಪಿಎಲ್ ಪಡೆದುಕೊಳ್ಳುತ್ತಿದೆ.
ಒಳಚರಂಡಿ ನೀರೇ ಆಧಾರ
ನೀರಿನ ಕೊರತೆ ಎದುರಾದ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್‌ನ ಎರಡನೇ ಘಟಕ ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಕಾವೂರಿನ ಒಳಚರಂಡಿ ಸಂಸ್ಕರಿತ ನೀರನ್ನು ಬಳಸಲಾಗುತ್ತಿದೆ. ಸದ್ಯಕ್ಕೆ ಈ ನೀರು ಆಧಾರವಾಗಿದೆ.
– ಎಂ. ವೆಂಕಟೇಶ್, ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.