ಕೇರಳ ವಿರುದ್ಧ ಕರಾವಳಿ ಸಂಸದ, ಶಾಸಕರ ಟ್ವೀಟ್ ವಾರ್
ಗಡಿ ಭಾಗದ ರಸ್ತೆಗಳನ್ನು ತೆರೆಯಲು ಕರ್ನಾಟಕಕ್ಕೆ ಕೇರಳ ಆಗ್ರಹ
Team Udayavani, Apr 3, 2020, 11:57 AM IST
ಮಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ದೇಶಕ್ಕೇ ತಾನು ಮಾದರಿ ಎಂದು ಹೇಳಿ ಕೊಳ್ಳುವ ಕೇರಳ ಸರಕಾರ ವೈದ್ಯಕೀಯ ಸೌಲಭ್ಯಕ್ಕಾಗಿ ಮಾತ್ರ ಪರ ರಾಜ್ಯವನ್ನು ಅವಲಂಬಿಸಿರುವುದು ದುರಂತ ಎಂದು ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕರಾದ ಡಿ. ವೇದವ್ಯಾಸ ಕಾಮತ್ ಹಾಗೂ ಡಾ| ವೈ. ಭರತ್ ಶೆಟ್ಟಿ ತಿಳಿಸಿದರು.
ಕೇರಳದ ರೋಗಿಗಳನ್ನು ಮಂಗಳೂರಿಗೆ ಚಿಕಿತ್ಸೆಗೆ ಕರೆತರುವುದಕ್ಕೆ ತಲಪಾಡಿ ಗಡಿಯನ್ನು ತೆರೆಯಬೇಕೆನ್ನುವ ಕೇರಳ ಸರಕಾರದ ನಿರಂತರ ಹೋರಾಟಕ್ಕೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಈ ಮೂವರು ಜನಪ್ರತಿನಿಧಿಗಳು, ಕೇರಳ-ಕರ್ನಾಟಕ ಗಡಿ ತೆರವಿಗೆ ಅವಕಾಶ ನೀಡಲಾರೆವು ಎಂದಿದ್ದಾರೆ.
ನಮ್ಮ ಜನರ ಆರೋಗ್ಯ ಮುಖ್ಯ
ಸಂಸದ ನಳಿನ್ ಕುಮಾರ್ ಕಟೀಲು ಅವರು ತಮ್ಮ ಟ್ವೀಟ್‌ನಲ್ಲಿ, “ನಮ್ಮದು ಕೇರಳ ಮಾದರಿ ಎಂದು ದೇಶದ ಎದುರು ಬಡಾಯಿ ಕೊಚ್ಚಿಕೊಂಡ ಕೇರಳ ಸರಕಾರ ವೈದ್ಯಕೀಯ ಸೌಲಭ್ಯಕ್ಕೆ ಮಾತ್ರ ಪರ ರಾಜ್ಯವನ್ನು ಅವಲಂಬಿಸಿರುವುದು ದುರಂತ. ಕೋವಿಡ್- 19ದಂತಹ ಮಾರಣಾಂತಿಕ ಕಾಯಿಲೆಯ ಸಂದರ್ಭದಲ್ಲಿ ನಮ್ಮ ರಾಜ್ಯದ ಜನರ ರಕ್ಷಣೆಗೆ ನಮ್ಮ ಮೊದಲ ಆದ್ಯತೆ. ಅದರಲ್ಲಿ ಯಾವ ಅನುಮಾನ ಇಲ್ಲ’ ಎಂದಿದ್ದಾರೆ.
ಯಾವುದೇ ಕಾರಣಕ್ಕೂ ಬಿಡೆವು
ಶಾಸಕ ವೇದವ್ಯಾಸ್ ಕಾಮತ್ ತಮ್ಮ ಟ್ವೀಟ್‌ನಲ್ಲಿ, “ಪ್ರತಿಯೊಬ್ಬ ನಾಗರಿಕನ ಮೂಲಭೂತ ಆವಶ್ಯಕತೆಗಳಲ್ಲಿ ಆರೋಗ್ಯವೂ ಒಂದು. ಇದಕ್ಕಾಗಿ ಕಾಸರ ಗೋಡು ಭಾಗದ ಜನರು ಮಂಗಳೂರನ್ನು ಅವಲಂಬಿಸಿಕೊಂಡಿದ್ದಾರೆ. ಹಾಗಾದರೆ ಕಾಸರಗೋಡು ಜನರಿಗೆ ನಿಮ್ಮ ಕೊಡುಗೆ ಏನು? ಯಾವುದೇ ಕಾರಣಕ್ಕೂ ಗಡಿ ತೆರೆಯಲು ಅವಕಾಶ ನೀಡಲಾರೆವು’ ಎಂದು ತಿಳಿಸಿದ್ದಾರೆ.
ಕೇರಳ ಸರಕಾರದ ವೈಫಲ್ಯ
ಶಾಸಕ ಡಾ| ವೈ. ಭರತ್ ಶೆಟ್ಟಿ ಅವರು ಟ್ವೀಟ್‌ನಲ್ಲಿ, “ವೆನಾÉಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಶೇ. 50ರಷ್ಟು ಕೋವಿಡ್- 19 ಸೋಂಕಿತ ರೋಗಿಗಳು ಕಾಸರಗೋಡು ಜಿಲ್ಲೆಗೆ ಸೇರಿದವರು. ಕೇರಳ ಮುಖ್ಯಮಂತ್ರಿ ಅವರ ಆಡಳಿತ ವೈಫಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಕಾಸರಗೋಡು ಜಿಲ್ಲೆ ಯೊಂದರಲ್ಲೇ 100ಕ್ಕೂ ಅಧಿಕ ಕೋವಿಡ್- 19 ಸೋಂಕಿತರು ಇದ್ದಾರೆ. ಇದು ಕರ್ನಾಟಕದ ಒಟ್ಟು ಕೋವಿಡ್- 19 ಪ್ರಕರಣಗಳಷ್ಟು ಇವೆ. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮುದಾಯಿಕವಾಗಿ ಕೋವಿಡ್- 19 ಹರಡಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.
“ಸೇವ್ ಕರ್ನಾಟಕ’ ಅಭಿಯಾನ
ಮಂಗಳೂರು: ಕರ್ನಾಟಕ ಸರಕಾರವು ಕೇರಳದ ಗಡಿ ರಸ್ತೆಗಳನ್ನು ಮುಚ್ಚಿರುವ ವಿಚಾರಕ್ಕೆ ಸಂಬಂಧಿಸಿ ಟ್ವೀಟರ್‌ನಲ್ಲಿ #SavekarnatakaFromPinarayI ಮತ್ತು #saveKarnataka ಎಂಬ ಅಭಿಯಾನ ಆರಂಭವಾಗಿದೆ. ಈಗಾಗಲೇ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು ಹ್ಯಾಷ್ ಟ್ಯಾಗ್ ಹಾಕುವ ಮುಖೇನ ಟ್ವೀಟ್ ಮಾಡಿದ್ದಾರೆ.
ಕೇರಳ ಹೈಕೋರ್ಟ್ ಆದೇಶ ರದ್ದತಿ ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ
ಮಂಗಳೂರು: ಸಂಪೂರ್ಣ ಮುಚ್ಚುಗಡೆ ಆಗಿರುವ ಕರ್ನಾಟಕ ಮತ್ತು ತಮಿಳುನಾಡಿನ ಗಡಿಗಳನ್ನು ತೆರೆದು ಕೇರಳದ ರೋಗಿಗಳನ್ನು ನೆರೆ ರಾಜ್ಯಗಳ ಆಸ್ಪತ್ರೆಗಳಿಗೆ ಸಾಗಿಸಿ ಚಿಕಿತ್ಸೆ ನೀಡಲು ಅನುಕೂಲ ಕಲ್ಪಿಸಬೇಕು ಎಂದು ಕೇರಳ ಹೈಕೋರ್ಟ್ ಬುಧವಾರ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ.
ಸುಪ್ರೀಂ ಕೋರ್ಟಿನ ವಕೀಲ ಸಂಜಯ್ ನೂಲಿ ಅವರ ಮೂಲಕ ದಾವೆಯನ್ನು ಹೂಡಲಾಗಿದೆ. ಕೇರಳದ ಕಾಸರಗೋಡಿನಲ್ಲಿ ಬುಧವಾರದ ವೇಳೆಗೆ 121 ಕೋವಿಡ್- 19 ಸೋಂಕಿತ ರೋಗಿಗಳಿದ್ದರು. ಸಾವಿರಾರು ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಕಾಸರಗೋಡಿನ ರೋಗಿಗಳನ್ನು ಮಂಗಳೂರಿನ ಆಸ್ಪತ್ರೆಗಳಿಗೆ ಕರೆತರಲು ಆವಕಾಶ ಕಲ್ಪಿಸುವುದು ಮಂಗಳೂರಿನ ಜನರ ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ. ಹಾಗಾಗಿ ಕೇರಳ ಹೈಕೋರ್ಟಿನ ಆದೇಶವನ್ನು ರದ್ದು ಪಡಿಸಬೇಕು ಎಂದು ಮಿಥುನ್ ರೈ ಅವರು ಮಂಗಳೂರಿನ ಜನರ ಪರವಾಗಿ ದಾವೆ ಅರ್ಜಿಯಲ್ಲಿ ವಿವರಿಸಿದ್ದಾರೆ.
ಆನ್‌ಲೈನ್ ಮೂಲಕ ದಾವೆ ಸಲ್ಲಿಸಲಾಗಿದ್ದು, ಒಂದೆರಡು ದಿನಗ ಳಲ್ಲಿ ಸುಪ್ರೀಂ ಕೋರ್ಟು ಈ ಅರ್ಜಿಯನ್ನು ವಿಚಾರಣೆ ಎತ್ತಿಕೊಳ್ಳುವ ನಿರೀಕ್ಷೆ ಇದೆ ಎಂದು ಮಿಥುನ್ ರೈ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.