ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ಎರಡು ದಿನ ಖಾದಿ ದಿರಿಸು
Team Udayavani, Oct 8, 2018, 10:29 AM IST
ಬೆಳ್ತಂಗಡಿ: ಗಾಂಧೀಜಿಯವರ 150ನೇ ಜಯಂತಿಯನ್ನು ಸದಾ ನೆನಪಿನಲ್ಲಿರುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಎಸ್‌ಡಿಎಂ ಎಜುಕೇಶನ್ ಸೊಸೈಟಿಯ ಒಂದು ಉತ್ತರ “ದೇಸಿ ಉಡುಪು ಧರಿಸಿ’.
ಅ. 2ರಿಂದ ಸೊಸೈಟಿ ಮಹತ್ವದ ಒಂದು ತೀರ್ಮಾನ ಜಾರಿಗೊಳಿಸಿದೆ.ಅದರಂತೆ ಎಲ್ಲ ಸಿಬಂದಿ ತಿಂಗಳಲ್ಲಿ ಎರಡು ದಿನ ಖಾದಿ ಉಡುಪು ಹೊರತುಪಡಿಸಿ ಬೇರೇನೋ ತೊಡುವುದಿಲ್ಲ. ಸಂಸ್ಥೆಯ ಅಧ್ಯಕ್ಷ, ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಸಿಬಂದಿ ಶುಭ್ರ ಬಿಳಿ ಬಣ್ಣದ ಖಾದಿ ವಸ್ತ್ರ ಧರಿಸುತ್ತಾರೆ.
ಇತ್ತೀಚಿನ ಗಾಂಧಿ ಜಯಂತಿಯಂದು, ಸಂಸ್ಥೆಗಳ ಹೆಚ್ಚಿನ ಸಿಬಂದಿ ಖಾದಿ ದಿರಿಸಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಮುಂದೆ ತಿಂಗಳಲ್ಲಿ ಎರಡು ಬಾರಿ ಎಲ್ಲರೂ ಖಾದಿ ಧರಿಸುವರು. ಶ್ರೀ ಕ್ಷೇತ್ರದ ಅಧೀನದಲ್ಲೇ ಇರುವ “ಸಿರಿ’ ಸಂಸ್ಥೆಯ ಮೂಲಕ ಖಾದಿ ವಸ್ತ್ರ ಒದಗಿಸುತ್ತಿದ್ದು, ಪುರುಷರು ಶರ್ಟ್, ಮಹಿಳೆಯರು ಖಾದಿ ಸೀರೆ ಉಡುವರು.
ಎಲ್ಲರೂ ಸಮಾನರು
ಇಲ್ಲಿನ ಸಂಸ್ಥೆಗಳಲ್ಲಿ ಉನ್ನತ ಹುದ್ದೆ ಯಿಂದ ಹಿಡಿದು ಕೆಳಹಂತದವರೆಗೆ ಸಾವಿರಾರು ಸಿಬಂದಿ ಇದ್ದು, ಅವರೆಲ್ಲರೂ ಖಾದಿ ತೊಟ್ಟು ಸಮಾನತೆಯ ಪಾಠದ ಜತೆಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬುವ ಉದ್ದೇಶ ಎನ್ನುತ್ತಾರೆ ಸಿಬಂದಿ.
ಒಂದು-ಹದಿನೈದಕ್ಕೆ ಖಾದಿ!
ಸಂಸ್ಥೆಗಳ ಸಿಬಂದಿ ಪಾಲಿಗೆ ಪ್ರತಿ ತಿಂಗಳ 1ನೇ ಹಾಗೂ 15ನೇ ತಾರೀಕು ಖಾದಿ ದಿನ. ಈ ದಿನಗಳು ರಜಾ ಆಗಿದ್ದರೆ ಮರುದಿನ ಖಾದಿ ಧರಿಸ ಬೇಕು. ಈ ತೀರ್ಮಾನ ಒತ್ತಾಯದ್ದಲ್ಲ, ಸ್ವಯಂ ಪ್ರೇರಣೆಯಿಂದ ಕೈಗೊಂಡಿದ್ದು ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿಗಳು. ಎಲ್ಲ ಖಾದಿ ವಸ್ತ್ರಗಳಲ್ಲಿ “ಎಸ್‌ಡಿಎಂ’ ಎಂದು ಬರೆಯಲಾಗಿದೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ರಾಜ್ಯದ ವಿವಿಧೆಡೆಗಳಲ್ಲಿ ಕಾರ್ಯಾಚರಿಸುತ್ತಿವೆ. ಖಾದಿ ಅಭಿಯಾನ ಉಜಿರೆಯಲ್ಲಿ ಆರಂಭಗೊಂಡಿದ್ದು, ಹಂತ ಹಂತವಾಗಿ ಇತರೆಡೆಗಳಿಗೂ ವಿಸ್ತರಣೆಗೊಳ್ಳಲಿದೆ ಎನ್ನುತ್ತವೆ ಸಂಸ್ಥೆಯ ಮೂಲಗಳು.
ಎಲ್ಲರೂ ಸಮನಾಗಿ ಕಾಣುವಂತೆ ತಿಂಗಳಲ್ಲಿ ಎರಡು ಬಾರಿ ಖಾದಿ ಉಡಲಾಗುವುದು. ಗಾಂಧೀಜಿಯವರ 150ನೇ ಜಯಂತಿ ಸಂದರ್ಭ ಇದು ಅವರ ಸ್ಮರಣೆಯ ಉಪಕ್ರಮವೂ ಹೌದು. ಹಂತ ಹಂತವಾಗಿ ನಮ್ಮ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
ಡಾ| ಬಿ. ಯಶೋವರ್ಮ, ಕಾರ್ಯದರ್ಶಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು, ಉಜಿರೆ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.