ಖಾದರ್ಗೆ ಬಹಿಷ್ಕಾರ, ನಳಿನ್ಗೆ ಅವಕಾಶ
Team Udayavani, Oct 7, 2017, 11:50 AM IST
ಉಳ್ಳಾಲ: ಮುಕ್ಕಚ್ಚೇರಿ ಮಸೀದಿ ಎದುರು ಬುಧವಾರ ಕೊಲೆಯಾದ ಝುಬೈರ್ ಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆಯುತ್ತಿದ್ದು, ಶುಕ್ರವಾರ ಝುಬೇರ್ ಮನೆಗೆ ಆಗಮಿಸಿದ ಯು.ಟಿ. ಖಾದರ್ಗೆ ಮುಕ್ಕಚ್ಚೇರಿಯಲ್ಲಿ ಬಹಿಷ್ಕಾರ ಬಿಸಿ ಮುಟ್ಟಿ ಸಿದರೆ, ಸಂಸದ ನಳಿನ್ ಕುಮಾರ್ಗೆ ಭೇಟಿಗೆ ಅವಕಾಶ ಸಿಕ್ಕಿದೆ.
ಮುಕ್ಕಚ್ಚೇರಿ ಜಂಕ್ಷನ್ನಲ್ಲಿ ಝುಬೈರ್ ಹತ್ಯೆಗೆ ಸಂಬಂಧಿಸಿದಂತ ಗಾಂಜಾ ಮಾಫಿಯಾ ವಿರುದ್ಧ ಡಿವೈಎಫ್ಐ ಉಳ್ಳಾಲ ಘಟಕದ ಆಶ್ರಯದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ಸಂದರ್ಭ ಜುಬೈರ್ ಮನೆಗೆ ಸಾಂತ್ವನ ಹೇಳಲೆಂದು ಸಚಿವ ಖಾದರ್ ಅವರು ಜಂಕ್ಷನ್ಗೆ ಆಗಮಿಸುತ್ತಿದ್ದಂತೆಯೇ ಪ್ರತಿಭಟನ ನಿರತರು ಖಾದರ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಜತೆಗೆ ಅವರೊಂದಿ ಗಿದ್ದ ಕಾಂಗ್ರೆಸ್ ನಾಯಕರನ್ನು ಹಿಂದೆ ಕಳುಹಿಸಿದರು. ಖಾದರ್ ಅವರು ಮನವಿ ಮಾಡಿದರೂ ಸ್ಥಳೀ ಯರು ಅವರ ಮನವಿಯನ್ನು ಪುರಸ್ಕರಿಸಲಿಲ್ಲ. ಹಿಂತಿರು ಗುವ ವೇಳೆ ಕಲ್ಲು ತೂರಾಟ ನಡೆದಿದೆ. ಕಾಂಗ್ರೆಸ್ ಮುಖಂಡ ಸುರೇಶ್ ಭಟ್ನಗರ ಕಾರಿಗೆ ಕಲ್ಲುಬಿದ್ದಿದೆ.
ಸಂಸದ ನಳಿನ್ಗೆ ಅವಕಾಶ
ಸಚಿವ ಖಾದರ್ ಹಿಂತಿರುಗಿದ ಅರ್ಧ ತಾಸಿನ ಬಳಿಕ ಸಂಸದ ನಳಿನ್ ಆಗಮಿಸಿದ್ದಾರೆ. ಈ ವೇಳೆ ನಮಾಜ್ ಮುಗಿಸಿ ಬರುತ್ತಿದ್ದ ಸ್ಥಳೀಯರು ಝುಬೇರ್ ಮನೆಗೆ ದಾರಿ ತೋರಿಸಿದ್ದಾರೆ. ಬಿಜೆಪಿ ಮುಖಂಡರೊಂದಿಗೆ ಮನೆಗೆ ಭೇಟಿ ನೀಡಿದ ನಳಿನ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭ ಮಾತ ನಾಡಿದ ನಳಿನ್, ಝುಬೈರ್ ಹಂತಕರನ್ನು ವಾರ ದೊಳಗೆ ಬಂಧಿಸಬೇಕು ಮತ್ತು ರಾಜ್ಯ ಸರಕಾರ 40 ಲಕ್ಷ ರೂ. ಪರಿಹಾರ ನೀಡಬೇಕು ಎಂದರು.
ಝುಬೇರ್ ಮಕ್ಕಳ ಶೈಕ್ಷಣಿಕ ದತ್ತು: ಝುಬೇರ್ ಅವರ ಇಬ್ಬರು ಪುತ್ರಿಯರು ಮತ್ತು ನಾಲ್ವರು ಪುತ್ರರು ಶಾಲೆಗೆ ಹೋಗುತ್ತಿದ್ದು ಈ ಎಲ್ಲ ಮಕ್ಕಳ ಶಿಕ್ಷಣದ ಖರ್ಚನ್ನು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರ. ಕಾರ್ಯದರ್ಶಿ ಡಾ| ಮುನೀರ್ ಬಾವ ಅವರು ಭರಿಸುವ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್ಮೆಂಟ್, ಮಾಲ್ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.