ಕಿಡ್ನಿ ವೈಫಲ್ಯ: ಚಿಕಿತ್ಸೆಗೆ ನೆರವು ಯಾಚನೆ
Team Udayavani, Apr 7, 2018, 12:17 PM IST
ಬೆಳ್ತಂಗಡಿ: ಮನೆ ಯಜಮಾನ ಕಿಡ್ನಿ ವೈಫಲ್ಯಕ್ಕೊಳಗಾಗಿದ್ದು, ಚಿಕಿತ್ಸೆ ವೆಚ್ಚ ಭರಿಸಲಾಗದೆ ಅವರ ಕುಟುಂಬ ದಾನಿಗಳಿಂದ ನೆರವು ಯಾಚಿಸಿದೆ.
ಡಯಾಬಿಟಿಸ್ ಕಾಯಿಲೆ ಯಿಂದಾಗಿ ಗುರುವಾಯನ ಕೆರೆ ನಿವಾಸಿ ಜಯರಾಮ ಶೆಟ್ಟಿ (42) ಅವರ ಎರಡೂ ಕಿಡ್ನಿ ವೈಫಲ್ಯಗೊಂಡಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಡಯಾಲಿಸಿಸ್ ಮಾಡಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿ.ಪಿ., ಶುಗರ್, ಹೃದಯ ಸಂಬಂಧಿ ಕಾಯಿಲೆ ಇರುವ ಅವರಿಗೆ ಕಣ್ಣುಗಳೂ ಕಾಣಿಸುತ್ತಿಲ್ಲ.
ಡಯಾಲಿಸ್‌ಗಾಗಿ ತಿಂಗಳಿಗೆ 8 ಬಾರಿ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗಬೇಕಾಗಿದ್ದು, ಇದಕ್ಕಾಗಿ ಸುಮಾರು 30 ಸಾವಿರ ರೂ. ಖರ್ಚಾಗುತ್ತದೆ. ಬಾಡಿಗೆ ಮನೆಯಲ್ಲಿರುವುದರಿಂದ ತಿಂಗಳ ಬಾಡಿಗೆ, ಮಕ್ಕಳ, ಅತ್ತೆಯ ಪೋಷಣೆಗಾಗಿ ಸಾವಿರಾರು ರೂ. ಖರ್ಚನ್ನು ನಿಭಾಯಿಸುವುದು ಕಷ್ಟವಾಗಿದೆ. ಬಾಡಿಗೆಯನ್ನು ಕಟ್ಟದೆ ಸುಮಾರು ತಿಂಗಳುಗಳು ಕಳೆದಿವೆ. ಚಿಕಿತ್ಸೆ ವೆಚ್ಚ ನಿಭಾಯಿಸುವುದು ಹೇಗೆ ಎಂಬ ಚಿಂತೆ ಉಂಟಾಗಿದೆ ಎನ್ನುತ್ತಾರೆ ಜಯರಾಮ ಅವರ ಪತ್ನಿ ಪೂರ್ಣಿಮಾ. ಮನೆಯಲ್ಲಿ 4 ವರ್ಷದ ಪುತ್ರ, ಒಂದೂವರೆ ವರ್ಷದ ಪುತ್ರಿ, ಜಯರಾಮ ಅವರ ತಾಯಿ ಜತೆಗಿದ್ದಾರೆ.
ಸಾಲ ಮಾಡಿ ಚಿಕಿತ್ಸೆ
ಕಿಡ್ನಿ ಕಸಿ ಮಾಡಲು ಸುಮಾರು 7 ಲಕ್ಷ ರೂ. ಖರ್ಚಾಗುತ್ತದೆ. ಜಯರಾಮ ಅವರ ಚಿಕಿತ್ಸೆಗಾಗಿ ಸಾಲ ಮಾಡಲಾಗಿದ್ದು, ಕಳೆದ 8 ತಿಂಗಳಲ್ಲಿ ಸುಮಾರು 3 ಲಕ್ಷ ರೂ. ನಷ್ಟು ವ್ಯಯಿಸಲಾಗಿದೆ. ಹಲವಾರು ಸಂಘಟನೆಗಳು ಇವರಿಗೆ ಸಹಾಯ ಮಾಡಿದ್ದರೂ ದಿನನಿತ್ಯದ ಸಂಸಾರದ ಖರ್ಚು ಹಾಗೂ ವೈದ್ಯಕೀಯ ಖರ್ಚುಗಳನ್ನು ತೂಗಿಸಿಕೊಂಡು ಹೋಗುವುದೇ ಸವಾಲಾಗಿದೆ.
ಜೀವನ ಪೂರ್ತಿ ಡಯಾಲಿಸಿಸ್ ಮಾಡಬೇಕು. ಇಲ್ಲವಾದಲ್ಲಿ ಕಿಡ್ನಿ ಕಸಿ ಮಾಡಬೇಕು. ಡಯಾಲಿಸಿಸ್‌ಗೆ ತಿಂಗಳಿಗೆ ಸುಮಾರು 30 ಸಾವಿರ ರೂ. ಖರ್ಚಾಗುತ್ತದೆ. ಔಷಧಕ್ಕೆ ವರ್ಷಕ್ಕೆ ಸುಮಾರು 2.5 ಲಕ್ಷ ರೂ. ಬೇಕು. ಆಸ್ಪತ್ರೆಯಿಂದ ಸಾಧ್ಯವಾದಷ್ಟು ಸಹಕಾರ ನೀಡಲಾಗಿದೆ ಎನ್ನುತ್ತಾರೆ ವೈದ್ಯ ಡಾ| ಪ್ರದೀಪ್.
ಧರ್ಮಸ್ಥಳದ ಮುಳಿಕ್ಕಾರಿನ ಜಯರಾಮ ನಾಸಿಕ್, ಮುಂಬಯಿನಲ್ಲಿ ಹೊಟೇಲ್ ಕೆಲಸ ಮಾಡುತ್ತಿದ್ದರು. 5 ವರ್ಷಗಳ ಹಿಂದೆ ಮದುವೆಯಾಗಿ, ಮಂಗಳೂರಿನ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿದ್ದರು.
ನೆರವು ಯಾಚನೆ
ನೆರವು ನೀಡುವ ದಾನಿಗಳು 9632791934 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಕೆನರಾ ಬ್ಯಾಂಕ್ ಗುರುವಾಯನಕೆರೆ ಶಾಖೆಯ ಪೂರ್ಣಿಮಾ ಅವರ ಬ್ಯಾಂಕ್ ಖಾತೆ ಸಂಖ್ಯೆ 6423101000179/ಐಎಫ್ ಎಸ್‌ಸಿ ಕೋಡ್ .ಎನ್.ಆರ್.ಬಿ. 0006423.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.