ಯೇನಪೊಯದಲ್ಲಿ ಕಾಶ್ಮೀರದ ಬಡ ರೋಗಿಗೆ ಕಿಡ್ನಿ ಕಸಿ


Team Udayavani, Jan 10, 2018, 12:30 PM IST

10-21.jpg

ಮಂಗಳೂರು: ದೇರಳಕಟ್ಟೆಯ ಯೇನಪೊಯ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯು ಲಿಂಫೊಸೈಟ್‌ ಕ್ರಾಸ್‌ಮ್ಯಾಚ್‌ ಮತ್ತು ಅತ್ಯಂತ ಕನಿಷ್ಠ ಶಸ್ತ್ರಕ್ರಿಯೆಯನ್ನು ಒಳಗೊಂಡ ರೊಬೊಟಿಕ್‌ ಕಸಿ ವಿಧಾನದ ಮೂಲಕ ಕಾಶ್ಮೀರದ ಬಡ ರೋಗಿಯೊಬ್ಬರಿಗೆ ಮೂತ್ರಪಿಂಡ ಕಸಿ ನಡೆಸಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.

ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ಅವಿಭಾಜ್ಯ ಭಾಗವಾದ ಲಿಂಫೋಸೈಟ್‌ ಕ್ರಾಸ್‌ ಮ್ಯಾಚ್‌ ಮಾಡುವ ಸೌಲಭ್ಯ ಮಂಗಳೂರಿನಲ್ಲಿ ಯೇನಪೊಯ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯಲ್ಲಿದೆ. ಈಗ ಈ ವೈದ್ಯಕೀಯ ಕಾಲೇಜು ಆಸ್ಪತ್ರೆ ರಾಜ್ಯದ ಗಡಿಯನ್ನು ಮೀರಿ, ಜಮ್ಮು ಮತ್ತು ಕಾಶ್ಮೀರದ ಬಡ ರೋಗಿಗೆ ಮೂತ್ರಪಿಂಡದ ಕಸಿ ನಡೆಸಿ ಶ್ಲಾಘನೆ ಪಡೆದುಕೊಂಡಿದೆ. 

ಕಾಶ್ಮೀರದ ಬಡ ರೋಗಿಗೆ ಸಹಾಯ
ಜಮ್ಮು ಮತ್ತು ಕಾಶ್ಮೀರದ ಬಡ ರೋಗಿಯು ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಪತ್ನಿ ತನ್ನ ಮೂತ್ರಪಿಂಡವನ್ನು ಪತಿಗೆ ದಾನ ಮಾಡಲು ಸಿದ್ಧರಿದ್ದರೂ ಕಸಿ ಚಿಕಿತ್ಸೆಗೆ ಹಣದ ಮುಗ್ಗಟ್ಟು ಎದುರಾಯಿತು. ಅವರು ಯೇನಪೊಯದ ವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು ರೋಗಿಯ ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸಿ ಸಹಾಯ ಮಾಡಲು ಒಪ್ಪಿಕೊಂಡರು. ಆಸ್ಪತ್ರೆಯ ಆಡಳಿತ ಎಲ್ಲ ಚಿಕಿತ್ಸಾ ವೆಚ್ಚಗಳನ್ನು ಕಡಿಮೆ ಮಾಡಿತು ಮತ್ತು ವೈದ್ಯರ ಶುಲ್ಕದಲ್ಲಿಯೂ ವಿನಾಯಿತಿ ನೀಡಲಾಯಿತು. ರೋಗಿಗೆ ನಡೆಸಲಾದ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಹತ್ತು ದಿನಗಳಲ್ಲಿ ಆಸ್ಪತ್ರೆಯಿಂದ ನಿರ್ಗಮಿಸಿದ್ದಾರೆ.

ಮೂತ್ರಪಿಂಡ ಕಸಿ ಚಿಕಿತ್ಸೆಯ ಪ್ರಯೋಜನ ಪಡೆಯುವಲ್ಲಿ ಅದು ದುಬಾರಿಯಾಗಿರುವುದು ಪ್ರಮುಖ ಅಡಚಣೆ. ಆದರೆ ಯೇನಪೊಯದಲ್ಲಿ ವೆಚ್ಚ ಕಡಿಮೆ ಇರುವುದರಿಂದ ಇಲ್ಲಿ ಬಹಳಷ್ಟು ಮೂತ್ರಪಿಂಡದ ಕಸಿ ಚಿಕಿತ್ಸೆ ನಡೆಯುತ್ತಿವೆ. ವಿದೇಶೀಯರು ಕೂಡ ಯೇನಪೊಯ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಸಾಧನೆಯನ್ನು ಗುರುತಿಸಿದ್ದಾರೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ಯಶಸ್ಸು ವೈದ್ಯರ ತಂಡದ ಕೆಲಸ ಮತ್ತು ತಂಡವು ಹೊಂದಿರುವ ಜ್ಞಾನ, ಉತ್ಸಾಹವನ್ನು ಅವಲಂಬಿಸಿರುತ್ತದೆ. ಡಾ| ಮುಜೀಬ, ಡಾ| ಅಲ್ತಾಫ್‌ ಖಾನ್‌, ಡಾ| ನಿಶಿ¤àತ್‌ ಡಿ’ಸೋಜ, ಡಾ| ಸಂತೋಷ್‌ ಪೈ, ಡಾ| ಕಾರ್ತಿಕ್‌ ಮತ್ತು ಡಾ| ಗಣೇಶ್‌ ಕಾಮತ್‌ ಅವರನ್ನು ಒಳಗೊಂಡ ಮೂತ್ರಶಾಸ್ತ್ರದ ವೈದ್ಯರ ತಂಡ ಉತ್ತಮ ಕೆಲಸ ಮಾಡುತ್ತಿದೆ. ಮೂತ್ರಪಿಂಡದ ಕಸಿ ಅಗತ್ಯ ರೋಗಿಗಳು ಟ್ರಾನ್ಸ್‌ ಪ್ಲಾಂಟ್‌ ಸಂಯೋಜಕ ನೆಲ್ವಿನ್‌ ನೆಲ್ಸನ್‌ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.