ಅಟ್ಲಾಜೆ-ಬದಿನಡೆಯಿಂದ ಪಡಂಗಡಿಗೆ ಸಂಪರ್ಕ ಬೆಸುಗೆ
3 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು
Team Udayavani, Apr 18, 2022, 9:18 AM IST
ಬೆಳ್ತಂಗಡಿ: ಅಂತರ್ಜಲ ವೃದ್ಧಿಗಾಗಿ ಕೃಷಿಕರಿಗೆ ವರದಾನವಾಗಿ ಜತೆಗೆ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ರಸ್ತೆಗೆ ಕೊಂಡಿಯಾಗಿ ಕಿಂಡಿ ಅಣೆಕಟ್ಟುಗಳು ಇಂದು ಮಹತ್ವ ಪಡೆದಿದ್ದು, ಕಳೆದ ಹತ್ತಾರು ವರ್ಷಗಳಿಂದ ಬೇಡಿಕೆಯಲ್ಲಿದ್ದ ಬಳಂಜ-ಬದಿನಡೆಯಾಗಿ ಪಡಂಗಡಿ ಸಂಪರ್ಕಿಸುವ ಎರಡು ಗ್ರಾಮಗಳ ಸಂಪರ್ಕ ರಸ್ತೆಗೆ ಕೊಂಡಿಯಾಗಿ 3 ಕೋ.ರೂ. ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಇದೀಗ ಬಳಕೆಗೆ ಸಿದ್ಧಗೊಂಡಿದೆ.
ಕೃಷಿ ಕುಟುಂಬಗಳೇ ಹೆಚ್ಚಾಗಿರುವ ಬಳಂಜ- ಪಡಂಗಡಿ ಗ್ರಾಮಗಳ ಮಧ್ಯೆ ಇರುವ ಈ ಪ್ರದೇಶದಲ್ಲಿ ಫಲ್ಗುಣಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದೆ.
ಈ ಮೂಲಕ ಬಳಂಜ, ನಾಲ್ಕೂರು, ತೆಂಕಕಾರಂದೂರು, ಸುತ್ತಮುತ್ತಲಿನ ಭಾಗದ ಜನರಿಗೆ ಪಡಂಗಡಿ, ವೇಣೂರು, ಮಡಂತ್ಯಾರು ಮೂಲಕ ಮಂಗಳೂರು ಸಂಪರ್ಕಿಸಲು ಈ ಸೇತುವೆ ತೀರ ಹತ್ತಿರದ ಸಂಪರ್ಕ ರಸ್ತೆಯಾಗಿಯೂ ಉಪಯೋಗವಾಗಲಿದೆ.
ರಸ್ತೆಗಾಗಿ ಕೃಷಿ ಭೂಮಿ ದಾನ
ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರವೂ ಅತ್ಯವಶ್ಯ. ಈ ನೆಲೆಯಲ್ಲಿ ಕಿಂಡಿ ಅಣೆಕಟ್ಟು ಸಾಗುವ ರಸ್ತೆ ಅಭಿವೃದ್ಧಿ ದೃಷ್ಟಿಯಿಂದ ಇಲ್ಲಿನ ಕೃಷಿಕರು ಕೃಷಿ ಭೂಮಿ ದಾನ ಮಾಡುವ ಮೂಲಕ ಊರಿನ ಹಿತ ಕಾಪಾಡಿದ್ದಾರೆ. ಸಾರ್ವಜನಿಕರ ಅನುಕೂಲಕ್ಕೆ ಇಲ್ಲಿನ ಸತೀಶ್ ರೈ ಬಾರ್ದಡ್ಕ, ಹರೀಶ್ ರೈ ಪಡ್ಡಂಗೆ, ಅಬ್ಟಾಸ್ ಪಜಿಮಾರು, ಜಯಸಾಲ್ಯಾನ್ ಬದಿನಡೆ ಲಕ್ಷಾಂತರ ರೂ. ಬೆಳೆಬಾಳುವ ಕೃಷಿ ಭೂಮಿಯನ್ನು ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಬೇಕಿದೆ ರಸ್ತೆ ಅಭಿವೃದ್ಧಿಗೆ ಅನುದಾನ
ಅಟ್ಲಾಜೆ- ಬದಿನಡೆ-ಪಡಂಗಡಿ ಸಂಪರ್ಕ ರಸ್ತೆ ಇದೀಗ ಅಭಿವೃದ್ಧಿಗೊಳ್ಳಬೇಕಾಗಿದ್ದು ಸುಮಾರು 3 ಕಿ.ಮೀ. ರಸ್ತೆ ಡಾಮರೀಕರಣಗೊಂಡರೆ ಪ್ರಯಣಕ್ಕೆ ಅನುಕೂಲವಾಗಿಲಿದೆ. ಈಗ ಮಣ್ಣಿನ ರಸ್ತೆಯಾಗಿದ್ದು ಮಳೆಗಾಲದಲ್ಲಿ ಈ ಭಾಗದ ರಸ್ತೆಯಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಡಾಮರೀಕರಣಗೊಂಡರೆ ಬದಿನಡೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಹಿತ ಎಲ್ಲರಿಗೂ ಅನುಕೂಲವಾಗಲಿದೆ ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.
ಅತೀ ಹೆಚ್ಚು ಕಿಂಡಿ ಅಣೆಕಟ್ಟು
ಅಂತರ್ಜಲ ಹೆಚ್ಚಿಸಲು ಹಾಗೂ ಕೃಷಿಗೆ ಅನುಕೂಲವಾಗುವ ಹಾಗೆ ಜಿಲ್ಲೆಯಲ್ಲೇ ಅತೀ ಹೆಚ್ಚು ಕಿಂಡಿ ಅಣೆಕಟ್ಟುಗಳನ್ನು ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ. ಬಹುವರ್ಷಗಳ ಬೇಡಿಕೆಯಾದ ಬಳಂಜ-ಬದಿನಡೆಯಲ್ಲಿ ಕಿಂಡಿ ಅಣೆಕಟ್ಟನ್ನು 3 ಕೋ.ರೂ. ವೆಚ್ಚದ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಬಳಂಜ ಇನ್ನಿತರ ಭಾಗಗಳಿಂದ ಪಡಂಗಡಿಗೆ ಸಂಪರ್ಕಿಸುವ ರಸ್ತೆ ನಿರ್ಮಿಸಲು ತಮ್ಮ ಪಟ್ಟಾ ಜಾಗವನ್ನು ಬಿಟ್ಟುಕೊಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿದ್ದಾರೆ. -ಹರೀಶ್ ಪೂಂಜ, ಬೆಳ್ತಂಗಡಿ ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.