Kinnigoli ಗ್ರಾಹಕರ ಸೋಗಿನಲ್ಲಿ ವಂಚನೆ: ಸೆರೆ
Team Udayavani, Jul 17, 2024, 11:29 PM IST
ಕಿನ್ನಿಗೋಳಿ: ಕಿನ್ನಿಗೋಳಿ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ವ್ಯಾಪಾರಿಗಳನ್ನು ವಂಚಿಸುತ್ತಿದ್ದ ತಂಡವನ್ನು ಮೂಲ್ಕಿ ಪೋಲಿಸರು ಬಂಧಿಸಿದ್ದಾರೆ.
ಸ್ಕಾರ್ಪಿಯೋ ಕಾರಿನಲ್ಲಿ ಬಂದ ಮೂವರು ಯುವಕರು ಇಲ್ಲಿನ ಮಾರುಕಟ್ಟೆಯ ಅಂಗಡಿಯೊಂದಕ್ಕೆ ಬಂದು, ಸಾಮಗ್ರಿಗಳನ್ನು ತೆಗೆದುಕೊಂಡು, ಗೂಗಲ್ ಪೇ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ವೇಳೆ ಅವರು ನನ್ನಲ್ಲಿ ಹಣವಿಲ್ಲ. ಹಾಗಾಗಿ 500 ರೂ. ಕೊಡಿ ಸಾಮನು ಮತ್ತು 500 ರೂ. ಒಟ್ಟಿಗೆ ಗೂಗಲ್ ಪೇ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಸಂದರ್ಭ ಪಕ್ಕದ ಅಂಗಡಿ ಮಾಲಕರಿಗೆ ಸಂಶಯ ಬಂದು ವಿಚಾರಿಸಿದಾಗ ಇದು ವಂಚನ ತಂಡ ಎಂದು ಖಾತ್ರಿಯಾಗಿದೆ. ಆ ಬಳಿಕ ಇವರು ಪರಾರಿಯಾಗಲು ಯತ್ನಿಸಿದಾಗ ಜನರು ಬೆನ್ನಟ್ಟಿ ಇಬ್ಬರನ್ನು ಹಿಡಿದು ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ. ಓರ್ವ ಪರಾರಿಯಾಗಿದ್ದಾನೆ. ಅವರು ಬಂದ ಗಾಡಿ ಬಜಪೆ ಪರಿಸರದ್ದು ಎಂದು ತಿಳಿದು ಬಂದಿದೆ.
ಪಕ್ಷಿಕೆರೆಯಲ್ಲೂ ವಂಚನೆ
ಇದೇ ತಂಡ ಕಳೆದ ಶುಕ್ರವಾರ ಪಕ್ಷಿಕೆರೆಯಲ್ಲಿ ಕೋಳಿ ಮಾಂಸದ ಅಂಗಡಿಗೆ ಬಂದು 25 ಕಿಲೋ ಕೋಳಿ ಮಾಂಸ ತಯಾರು ಮಾಡಿ ಕೊಡಿ ಎಂದು ಹೇಳಿದ್ದು, ಅಂಗಡಿಯವನ ಬಳಿ 700 ರೂ. ಕೊಡುವಂತೆ ಕೇಳಿ ಗೂಗಲ್ ಪೇ ಮಾಡುತ್ತೇನೆಂದು ಹೇಳಿ ಪಡೆದು ಬಳಿಕ ಪರಾರಿಯಾಗಿದ್ದರು.
ಕಿನ್ನಿಗೋಳಿ: ದಾಂಧಲೆ ನಿರತ ಯುವಕನ ಸೆರೆ
ಕಿನ್ನಿಗೋಳಿ: ಮದ್ಯ ಸೇವಿಸಿ ಇಲ್ಲಿನ ಬಸ್ ನಿಲ್ದಾಣದಲ್ಲಿ ದಾಂಧಲೆ ನಡೆಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳ ವಾರ ಅಪರಾಹ್ನ ಮದ್ಯಪಾನ ಮಾಡಿದ್ದ ಕೆಲವು ಕೂಲಿ ಕಾರ್ಮಿಕರು ಜಗಳ ಆರಂಭಿಸಿದ್ದರು. ಬಳಿಕ ಅವರ ಪೈಕಿ ಯುವಕನೊಬ್ಬ ಕಟ್ಟಿಗೆಯನ್ನು ಹಿಡಿದುಕೊಂಡು ಬಂದು ದ್ವಿಚಕ್ರ ವಾಹನವನ್ನು ಪುಡಿಗೈದದ್ದಲ್ಲದೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದನು. ವಿಷಯ ತಿಳಿದ ಪೊಲೀಸರು ಧಾವಿಸಿ ಬಂದು ಯುವಕನನ್ನು ಬಂಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.