ಕಿನ್ನಿಗೋಳಿ ಕಾಂಗ್ರೆಸ್ ವಲಯದ ಮನೆ-ಮನೆ ಭೇಟಿ ಕಾರ್ಯಕ್ರಮ
Team Udayavani, Nov 5, 2017, 12:21 PM IST
ಗುತ್ತಕಾಡು: ಸಿದ್ದರಾಮಯ್ಯ ಅವರ ಸರಕಾರದ ಸಾಧನೆಗಳು ಹಾಗೂ ಜನ ಪರ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ತಲುಪಬೇಕು ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮನೆ ಮನೆ ಬೇಟಿ ಅಭಿಯಾನ ಆರಂಭಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಉಸ್ತುವಾರಿ ಯು.ಬಿ. ವೇಂಕಟೇಶ್ ಹೇಳಿದರು.
ಅವರು ನ. 3 ರಂದು ಗುತ್ತಕಾಡು ಪರಿಸರದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಿನ್ನಿಗೋಳಿ ಕಾಂಗ್ರೆಸ್ ವಲಯದ ಮನೆ- ಮನೆ ಬೇಟಿ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯದಲ್ಲಿ ಗ್ರಾಮ ಮಟ್ಟದಲ್ಲಿಯೂ ನಮ್ಮ ಗ್ರಾಮ ನಮ್ಮ ರಸ್ತೆಯಂತಹ ಯೋಜನೆ ಅನುಷ್ಠಾನಗೊಂಡಿದೆ, ಸರಕಾರವು ಶೈಕ್ಷಣಿಕವಾಗಿ ಹಾಗೂ ಪಂಚಾಯತ್ ಮಟ್ಟದಲ್ಲಿ ಜನರಿಗೆ ಸೌಲಭ್ಯ ದೊರೆಯುವ ಯೋಜನೆಗಳು ಅನುಷ್ಠಾನ ಮಾಡಿದೆ ಈ ಹಿಂದಿನ ಯಾವ ಸರಕಾರವು ಇಷ್ಟು ಪ್ರಗತಿ ಪರ ಯೋಜನೆ ಮಾಡಿಲ್ಲ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಕಾರ್ಯಕರ್ತೆರೆ ಪಕ್ಷದ ಜೀವಾಳವಾಗಿದ್ದು , ಸರಕಾರದ ಉತ್ತಮ ಯೋಜನೆಗಳು ಜನರ ಮನೆ ಹಾಗೂ ಮನಸ್ಸಿಗೆ ತಲುಪಿಸಿಸುವ ಹೊಣೆಗಾರಿಕೆ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು. ದ. ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಎಪಿಎಂಸಿ ಅಧ್ಯಕ್ಷ ಪ್ರಮೋದ್ಕುಮಾರ್, ಮೂಲ್ಕಿ ಬ್ಲಾಕ್ ಅಧ್ಯಕ್ಷ ಧನಂಜಯ ಮಟ್ಟು ಜೋಸ್ಸಿ ಪಿಂಟೋ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನ ಸಿಕ್ವೇರ, ಉಪಾಧ್ಯಕ್ಷೆ ಸುಜತಾ ಪೂಜಾರಿ, ಗ್ರಾಮ ಪಂಚಾಯತ್ಸದಸ್ಯರಾದ ಟಿ. ಎಚ್. ಮಯ್ಯದ್ದಿ , ಸುನೀತಾ ರೋಡ್ರಿಗಸ್ ,ಸಂತೋಷ್, ಚಂದ್ರಶೇಖರ್, ಶರತ್ ಕುಮಾರ್, ಮಾಜಿ ಗ್ರಾಮ ಪಂ ಸದಸ್ಯೆ ಉಮಾವತಿ, ಶಾಂತಾ, ಉಮೇಶ್ ಕೋಟ್ಯಾನ್, ದಿನೇಶ್ ರಾವ್ ಪುನರೂರು, ಯುವ ಕಾಂಗ್ರಸ್ ಪ್ರಕಾಶ್ ಆಚಾರ್ ಕಿನ್ನಿಗೋಳಿ, ಟಿ. ಎ. ಆರೀಫ್, ಹನೀಫ್ ಗುತ್ತಕಾಡು, ಅಬ್ದುಲ್ ಹಕೀಂ ಕಾರ್ನಾಡ್, ಟಿ. ಕೆ. ಅಬ್ದುಲ್ ಕಾದರ್, ಅಬೂಬಕ್ಕರ್ ಮೊದಲಾದವರು ಈ ಸಂದರ್ಭದಲ್ಲಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.