Kinnigoli: ಅಭಿವೃದ್ಧಿ ದೃಷ್ಟಿಯಿಂದ ಕಿನ್ನಿಗೋಳಿ ಹೋಬಳಿ ಕೇಂದ್ರವಾಗಲಿ
ರೈತ ಸಂಪರ್ಕ ಕೇಂದ್ರ ಸ್ಥಾಪಿಸಬೇಕು ಎಂಬುದು ಸ್ಥಳೀಯ ರೈತರ ಬೇಡಿಕೆಯಾಗಿದೆ.
Team Udayavani, Oct 26, 2023, 6:18 PM IST
ಕಿನ್ನಿಗೋಳಿ: ಕಿನ್ನಿಗೋಳಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಇದೀಗ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದೆ. ಈ ಹಿಂದೆ ಇದ್ದ ಮೂಲ್ಕಿ ಹೋಬಳಿ ಕೇಂದ್ರ ತಾಲೂಕು ಆಗಿ ಪರಿವರ್ತೆನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಈಗ ಮೂಲ್ಕಿ ತಾಲೂಕಿನಲ್ಲಿ ಯಾವುದೇ ಹೋಬಳಿ ಇಲ್ಲ. ಆದುದರಿಂದ ಅಭಿವೃದ್ಧಿ ಹಾಗೂ ಅಧಿಕಾರ ವಿಕೇಂದ್ರಿಕರಣ ದೃಷ್ಟಿಯಲ್ಲಿ ಕಿನ್ನಿಗೋಳಿಯನ್ನು ಹೋಬಳಿ ಕೇಂದ್ರವಾಗಿ ಮಾಡ ಬೇಕು ಹಾಗೂ ಇಲ್ಲಿಗೆ ಕೃಷಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಬೇಕು.
ಕಿನ್ನಿಗೋಳಿ, ಐಕಳ, ಏಳಿಂಜೆ, ಬಳ್ಕುಂಜೆ, ಕೊಲ್ಲೂರು, ಪಕ್ಕದ ಕಟೀಲು, ನಡುಗೋಡು, ಕಿಲೆಂಜೂರು, ಕೊಂಡೆ ಮೂಲ, ಕೆಮ್ರಾಲ್, ಪಕ್ಷಿಕೆರೆ ಅತ್ತೂರು ಗ್ರಾಮಗಳಿಗೆ ಕಿನ್ನಿಗೋಳಿ ಪಟ್ಟಣ ಹತ್ತಿರ ವಾಗಿದೆ. ಆದ್ದರಿಂದ ಇಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಬೇಕು ಎಂಬುದು ಸ್ಥಳೀಯ ರೈತರ ಬೇಡಿಕೆಯಾಗಿದೆ.
2011ರಲ್ಲಿ ಮಂಗಳೂರು ತಾಲೂಕಿನ ಜನಸಂಖ್ಯೆ 9,94,602 ಅನಂತದ ದಿನಗಳಲ್ಲಿ ಮಂಗಳೂರು ತಾಲೂಕಿನಿಂದ ಮೂಡುಬಿದಿರೆ, ಮೂಲ್ಕಿ ಪೂರ್ಣ ಪ್ರಮಾಣದಲ್ಲಿ ವಿಭಜಿಸಲ್ಪಟ್ಟಿದೆ. ಅಲ್ಲದೆ ಉಳ್ಳಾಲ ತಾಲೂಕು ಅನ್ನು ಬಂಟ್ವಾಳ ತಾಲೂಕಿನ ಕೆಲವು ಗ್ರಾಮಗಳನ್ನು ಸೇರಿಸಿ ರಚಿಸಲಾಯಿತು. ಮೂಡುಬಿದಿರೆ ಹಾಗೂ ಮೂಲ್ಕಿ ತಾ| ಈ ಹಿಂದೆ ಹೋಬಳಿಯಾಗಿ
ಕಾರ್ಯನಿರ್ವಹಿಸುತ್ತಿತ್ತು. ಆದರೇ ಪ್ರಸ್ತುತ ಈ ಎರಡು ತಾಲೂಕುಗಳಲ್ಲಿ ಹೋಬಳಿ ಇಲ್ಲದಂತಾಗಿದೆ.
ಪ್ರಯೋಜನಗಳು
*ಕಿನ್ನಿಗೋಳಿ ಹೋಬಳಿ ಕೇಂದ್ರವಾದರೇ ರೈತರಿಗೆ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳು ಹೋಬಳಿ ಮಟ್ಟದಲ್ಲಿ ಪಡೆಯಲು ಸಹಕಾರಿ.
*ತೋಟಗಾರಿಕೆ ಇಲಾಖೆಯ ಸವಲತ್ತು ಮಾಹಿತಿ ಸುಲಭವಾಗಿ ಪಡೆಯಬಹುದು.
* ಶಿಕ್ಷಣ ಇಲಾಖೆಯಡಿಯಲ್ಲಿ ಹೋಬಳಿ ಮಟ್ಟದಲ್ಲಿ ನಡೆಯುವ ಕ್ರೀಡಾ ಕೂಟ, ಶಿಕ್ಷಣಕ್ಕೆ ಪೂರಕ.
* ಅಧಿಕಾರದ ವಿಕೇಂದ್ರಿಕರಣ ಸಾಧ್ಯ.
*ಅನುದಾನದ ಸಮಾನ ಹಂಚಿಕೆಗೆ, ವಾಣಿಜ್ಯ ವಹಿವಾಟುಗಳಿಗೆ ಸಹಕಾರಿ.
* ಹೋಬಳಿ ಮಟ್ಟದಲ್ಲಿ ತರಬೇತಿ, ಸರಕಾರದ ಸವಲತ್ತು ಹಂಚುವಿಕೆಗೆ ಅವಕಾಶ.
ಉಪ ರೈತ ಸಂಪರ್ಕ ಕೇಂದ್ರ ಸ್ಥಾಪಿಸಲು ಯತ್ನ ಕಿನ್ನಿಗೋಳಿ ಹಾಗೂ ಅಸುಪಾಸಿನ ಐಕಳ, ಪಟ್ಟೆ ಬಳ್ಕುಂಜೆ, ಕಟೀಲು ಮುಂತಾದ ಪ್ರದೇಶದಲ್ಲಿ ಹೆಚ್ಚಿನ ಕೃಷಿಕರು, ತೋಟಗಾರಿಕೆ ಮಾಡುವ ರೈತರು ಇದ್ದು ಅವರ ಬೇಡಿಕೆ ಹಾಗೂ ರೈತ ಹಿತರಕ್ಷಣಾ ವೇದಿಕೆಯ ಮನವಿಯ ನಿಟ್ಟಿನಲ್ಲಿ ಕಿನ್ನಿಗೋಳಿ ಕೇಂದ್ರವಾಗಿಟ್ಟುಕೊಂಡು ಉಪ ರೈತ ಸಂಪರ್ಕ ಕೇಂದ್ರ ಮಾಡಲು ಪಯತ್ನ ಮಾಡಲಾಗುವುದು.
ಉಮಾನಾಥ ಕೋಟ್ಯಾನ್, ಶಾಸಕರು, ಮೂಡಬಿದಿರೆ ಕ್ಷೇತ್ರ
ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ
10 ವರ್ಷಗಳಿಂದ ಕಿನ್ನಿಗೋಳಿ ಭಾಗದಲ್ಲಿ ರೈತ ಸಂಪರ್ಕ ಕೇಂದ್ರದ ಶಾಖೆ ಮಾಡಿ ಎಂದು ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ,
ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಮುಂದಕ್ಕೆ ಹೋಬಳಿ ಕೇಂದ್ರ ಮಾಡುವಾಗ ಕಿನ್ನಿಗೋಳಿ ರೈತ ಸಂಪರ್ಕ ಕೇಂದ್ರ ಅಗತ್ಯ ಮಾಡಬೇಕಾಗಿದೆ.
-ಶ್ರೀಧರ ಶೆಟ್ಟಿ ಕಿನ್ನಿಗೋಳಿ,
ರೈತ ಹಿತರಕ್ಷಣ ಸಮಿತಿ ಅಧ್ಯಕ್ಷ
* ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.